ಎನ್‌ಡಿಎ ಅಭ್ಯರ್ಥಿಯ ಚುನಾವಣಾ ಪ್ರಚಾರ  ಭಿತ್ತಿ ಬರಹಕ್ಕೆ ಕರಿ ಆಯಿಲ್ ಬಳಸಿದ ಕಿಡಿಗೇಡಿಗಳು

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಉಮೇದ್ವಾರೆಯಾಗಿ ಸ್ಪರ್ಧಿಸುತ್ತಿ ರುವ ಬಿಜೆಪಿಯ ಎಂ.ಎಲ್. ಅಶ್ವಿನಿಯವರ ಚುನಾವಣಾ ಪ್ರಚಾ ರಾರ್ಥಕ್ಕಾಗಿರುವ ಕಲ್ಯಾಶ್ಶೇರಿಯ ಭಿತ್ತಿ ಬರಹಗಳಿಗೆ ಕಿಡಿಗೇಡಿಗಳು ಕರಿ ಆಯಿಲ್ ಬಳಸಿ ಅಳಿಸಿ ಹಾಕಿದ್ದಾರೆ. ಉಪ್ಪಳದಲ್ಲಿ ಸ್ಥಾಪಿಸಲಾಗಿದ್ದ ಫ್ಲೆಕ್ಸ್ ಬೋರ್ಡ್‌ಗಳನ್ನು ಮೊನ್ನೆ ಕಿಡಿಗೇಡಿಗಳು ನಾಶಗೊಳಿಸಿದ್ದರು.

ಕಾಸರಗೋಡು ಕ್ಷೇತ್ರದಲ್ಲಿ ಎನ್‌ಡಿಎಯ ಹೊಸ ಮುಖ ಅಭ್ಯರ್ಥಿಯಾಗಿ ತಾನು ಸ್ಪರ್ಧಿ ಸುತ್ತಿರುವುದರಲ್ಲಿ ಭಯಗೊಂಡವರು ಇಂತಹ ದುಷ್ಕೃತ್ಯವೆಸಗಿದ್ದಾರೆಂದು ಎಂ.ಎಲ್. ಅಶ್ವಿನಿಯವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಯತ್ನಗಳಿಂದ ಎನ್‌ಡಿಎ ಪ್ರಚಾರ ವನ್ನು ಹಿಮ್ಮೆಟ್ಟಿಸಬಹುದೆಂದು ಯಾರೂ ಭಾವಿಸುವುದು ಬೇಡವೆಂದೂ ಅವರು ಹೇಳಿದ್ದಾರೆ.

You cannot copy contents of this page