ಪದ್ಮಶ್ರೀ ಸತ್ಯನಾರಾಯಣ ಬೆಳೇರಿಗೆ ಯಾದವ ಸಭಾದಿಂದ ಗೌರವ

ಮುಳ್ಳೇರಿಯಾ: ಪದ್ಮಶ್ರೀ ಪುರಸ್ಕÈತ ಸತ್ಯನಾರಾಯಣ ಬೆಳೇರಿ ಅವರನ್ನು ಅಖಿಲ ಕೇರಳ ಯಾದವ ಸಭಾ ಕಾಸರಗೋಡು ತಾಲೂಕು ಸಮಿತಿ ವತಿಯಿಂದ ಅಭಿನಂದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸತ್ಯನಾರಾಯಣರ ಮನೆಯಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ನಾರಾಯಣ ನೀರ್ಚಾಲು ಶಾಲು ಹೊದಿಸಿ ಸ್ಮರಣಿಕೆ ನೀಡಿದರು. ಬಳಿಕ ಮಾತನಾಡಿ, ದೇಶದ ಅತ್ಯುತ್ತಮ ಪುರಸ್ಕಾರಕ್ಕೆ ಪಾತ್ರರಾಗಿರುವ ಸತ್ಯನಾರಾಯಣ ಅವರ ಸಾಧನೆ ಇಡೀ ಯಾದವ ಸಮುದಾಯಕ್ಕೆ ಲಭಿಸಿದ ಅಂಗೀಕಾರವಾಗಿದೆ ಎಂದರು.
ಯಾದವ ಸಭಾ ತಾಲೂಕು ಉಪಾಧ್ಯಕ್ಷ ಸೀತಾರಾಮ ಕೂಡ್ಲಂಗಲ್ಲು, ರೋಹಿಣಿ ಕಾನಕ್ಕೋಡು, ತಾಲೂಕು ಕಾರ್ಯದರ್ಶಿ ಅಪ್ಪಕುಂಞÂ ಕೊನಲ, ರಾಜ್ಯ ಸಮಿತಿ ಸದಸ್ಯ ಕರುಣಾಕರ ಬದಿಯಡ್ಕ, ಕಾರ್ಯಕಾರಿ ಸಮಿತಿ ಸದಸ್ಯ ಕೆ.ಗಂಗಾಧರ್ ಯಾದವ್, ಮಾಜಿ ಪಂ. ಸದಸ್ಯೆ ರೇಣುಕಾದೇವಿ, ಗೀತಾ ಬಾಲಕೃಷ್ಣ, ಅಂಬುಜಾಕ್ಷ ನಡುಮೂಲೆ, ಜನಾರ್ದನ, ಸುಧೀರ್ ಉಪಸ್ಥಿತರಿದ್ದರು.

RELATED NEWS

You cannot copy contents of this page