ಪಾಂಡಿ ಭಜನಾ ಮಂದಿರದಿಂದ ಕಳವು : ಓರ್ವನನ್ನು ಸೆರೆಹಿಡಿದ ಸ್ಥಳೀಯರು
ಅಡೂರು: ಪಾಂಡಿಯಲ್ಲಿರುವ ಭಜನಾ ಮಂದಿರದಿಂದ ಕಾಣಿಕೆ ಹುಂಡಿ ಕಳವುಗೈಯ್ಯಲಾಗಿದೆ. ನಿನ್ನೆ ರಾತ್ರಿ ೯.೩೦ರ ವೇಳೆ ಕಳವು ನಡೆಸಲಾಗಿದೆ. ಭಜನಾ ಮಂದಿರದಲ್ಲಿ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಮಂದಿರಕ್ಕೆ ತೆರಳಿದಾಗ ಇಬ್ಬರು ಕಳವು ನಡೆಸಿ ಪರಾರಿಯಾಗುತ್ತಿರುವುದು ಕಂಡುಬಂದಿದೆ.
ಇವರಲ್ಲಿ ಓರ್ವನನ್ನು ಸ್ಥಳೀಯರು ಸೆರೆಹಿಡಿದಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ. ಸೆರೆಹಿಡಿದಾತ ಪಾಂಡಿಯ ಸುರೇಶ್ ಎಂದು ತಿಳಿದುಬಂದಿದ್ದು, ಪರಾರಿಯಾದ ವ್ಯಕ್ತಿ ವಿಜೇಶ್ ಎಂದು ಸ್ಥಳೀಯರು ತಿಳಿಸಿದ್ದಾರೆ. ಹುಂಡಿಯಲ್ಲಿ ನಾಲ್ಕುಸಾವಿರ ರೂ. ಇತ್ತೆನ್ನಲಾಗಿದ್ದು, ಇದನ್ನು ಕಳವು ನಡೆಸಲಾಗಿದೆ.