ಗಾಂಧೀನಗರ ಹೋಟೆಲ್ ಮಾಲಕ ಪಿ.ಸಿ. ಕಣ್ಣನ್ ನಿಧನ

ಮುಳ್ಳೇರಿಯ: ಕಮ್ಯುನಿಸ್ಟ್ ತತ್ವ ಸಿದ್ಧಾಂತದಲ್ಲಿ ಆಳವಾಗಿ ನಂಬಿಕೆ ಇರಿಸಿ ಕಾರ್ಯಾಚರಿಸುತ್ತಿದ್ದ ಹಿರಿಯ ಕಾರ್ಯಕರ್ತ ಕಾರಡ್ಕ ಗಾಂಧೀನಗರ ನಿವಾಸಿ ಪಿ.ಸಿ. ಕಣ್ಣನ್ (೯೦) ಇಂದು ಬೆಳಿಗ್ಗೆ ನಿಧನ ಹೊಂದಿದರು. ಇವರು ತನ್ನ ದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜಿಗೆ ನೀಡುವುದಾಗಿ ಮೊದಲೇ ಒಪ್ಪಂದ ಮಾಡಿಕೊಂಡಿದ್ದರು. ಕಾರಡ್ಕ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಸಮೀಪ ಗಾಂಧೀನಗರದಲ್ಲಿ ಹಲವು ವರ್ಷಗಳ ಹಿಂದೆ ಹೋಟೆಲ್ ಪ್ರಭಾ ಆರಂಭಿಸಿದ್ದರು. ಇತ್ತೀಚೆಗೆ ತನ್ನ ದೇಹವನ್ನು ಪರಿಯಾರಂ ವೈದ್ಯಕೀಯ ಆಸ್ಪತ್ರೆಗೆ ನೀಡುವುದಾಗಿ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಡಿವೈಎಫ್‌ಐಯ ಆಶ್ರಯದಲ್ಲಿ ಇವರನ್ನು ಸನ್ಮಾನಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಇವರ ಪತ್ನಿ ಲಕ್ಷ್ಮಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಪಿ.ಸಿ. ಭಾಸ್ಕರನ್, ಪಿ.ಸಿ. ಅರವಿಂದಾಕ್ಷನ್, ಪಿ.ಸಿ. ಪ್ರಭಾ, ಪಿ.ಸಿ. ರವೀಂದ್ರನ್, ಸೊಸೆಯಂದಿರಾದ ಸ್ಮಿತಾ, ಸೀಮಾ (ತಾಲೂಕು ಸರಕಾರಿ ಆಯುರ್ವೇದ ಆಸ್ಪತ್ರೆ) ರೇಖಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಳಿಯ ತಂಬಾನ್ ಅಟ್ಟೆಂಗಾನಂ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲು ಬೆಳಿಗ್ಗೆ ಕೊಂಡುಹೋಗಲಾಯಿತು.

RELATED NEWS

You cannot copy contents of this page