ಕೆ.ಎಸ್.ಟಿ.ಎಯಿಂದ ಬಡ ಕುಟುಂಬದ ವಿದ್ಯಾರ್ಥಿಗೆ ಮನೆ ಹಸ್ತಾಂತರ

ಪೆರ್ಮುದೆ: ಕುಡಾಲುಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ ಕಲಿಯುತ್ತಿರುವ ಬಡ ಕುಟುಂ ಬದ ವಿದ್ಯಾರ್ಥಿಗೆ ಕೆಎಸ್‌ಟಿಎ ಅಧ್ಯಾ ಪಕ ಸಂಘಟನೆಯ ಮಂಜೇಶ್ವರ ಉಪ ಜಿಲ್ಲಾ ಘಟಕ ನಿರ್ಮಿಸಿ ನೀಡಿದ ಮನೆಯ ಕೀಲಿಕೈಯನ್ನು ಸಿಪಿಎಂ ಕೇಂದ್ರ ಸಮಿತಿ ಸದಸ್ಯೆ ಶ್ರೀಮತಿ ಟೀಚರ್ ನಿನ್ನೆ ಹಸ್ತಾಂತರಿಸಿದರು.

ಸಂಘಟನೆಯ ಮಗುವಿಗೊಂದು ಮನೆ ಯೋಜನೆ ಯಂತೆ ಮನೆ ನಿರ್ಮಿಸಿ ನೀಡಲಾಗಿದೆ. ಪೆರ್ಮುದೆ ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದರು.  ಮನೆ ನಿರ್ಮಾಣ ಸಮಿತಿ ಸಂಚಾಲಕ ಮೋಹನ ಸ್ವಾಗತಿಸಿ, ಉಪಜಿಲ್ಲಾ   ಸಮಿತಿ ಕಾರ್ಯದರ್ಶಿ ರವೀಂದ್ರ ವರದಿ ಮಂಡಿಸಿದರು. ಕೆಎಸ್‌ಟಿಎ ರಾಜ್ಯ ಕಾರ್ಯದರ್ಶಿ ಕೆ. ರಾಘವನ್ ಮಾಸ್ತರ್, ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ, ಪೈವಳಿಕೆ ಪಂಚಾಯತ್ ಸದಸ್ಯ ಅಶೋಕ ಭಂಡಾರಿ, ಇರ್ಶಾನ ಇಸ್ಮಾಯಿಲ್, ಕೆಎಸ್‌ಟಿಎ ರಾಜ್ಯ ನೇತಾರರಾದ ಪಿ. ದಿಲೀಪ್ ಕುಮಾರ್, ಕೆ. ಹರಿದಾಸ್, ಟಿ ಪ್ರಕಾಶನ್, ಎನ್.ಕೆ. ಲಸಿತಾ, ಎಂ.ಇ. ಚಂದ್ರಾಂಗದನ್, ಕೆಎಸ್‌ಟಿಎ ಜಿಲ್ಲಾಧ್ಯಕ್ಷ ಯು, ಶ್ಯಾಮ್ ಭಟ್, ಜಿಲ್ಲಾ ನೇತಾರರಾದ ವಿಜಯ ಸಿ,ಎಚ್, ಮಮತಾ ಇ.ಆರ್, ಬೆನ್ನಿ.ಟಿ ಮತ್ತು ಪ್ರಕಾಶನ್ ಪಿ ಮಾತನಾಡಿದರು. ಸಂತೋಷ್ ಕೆ.ವಿ ವಂದಿಸಿದರು.

RELATED NEWS

You cannot copy contents of this page