ಅಶೋಕನಗರ ಮಂದಿರ: ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಅಶೋಕನಗರ ಶ್ರೀ ಅಯ್ಯಪ್ಪ ಭಜನಾ ಮಂದಿರ ಹಾಗೂ ಶ್ರೀ ವಿಷ್ಣುಮೂರ್ತಿ ರಕ್ತೇಶ್ವರಿ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ನವೀಕರಣೆ ಪುನಃ ಪ್ರತಿಷ್ಠಾ ಸಮಿತಿ ಗೌರವಾಧ್ಯಕ್ಷ ನವೀನ್ ಕುಮಾರ್ ಭಟ್ ವರದರಾಜ್‌ರಿಗೆ ನೀಡಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಮೋಹನ್ ರಾವ್ ಕೆ.ವಿ, ನಿವೀನ್ ಕುಮಾರ್, ನಾಗೇಶ್, ಶಿವಪ್ರಸಾದ್, ಪುರುಷೋತ್ತಮನ್, ರಮೇಶನ್ ಮಣಿಯಾಣಿ, ಸುನಿಲ್ ಕುಮಾರ್, ಕ್ಷೇತ್ರ ಅಧ್ಯಕ್ಷ ಪುರುಷೋತ್ತಮನ್, ಗುರುಸ್ವಾಮಿಗಳಾದ ಸದಾನಂದನ್, ಮೋಹನನ್, ಅರ್ಚಕ ಶ್ರೀಪತಿ ಭಟ್, ಕೃಷ್ಣನ್, ಜಯಶ್ರೀ ದಿವಾಕರ್, ರಮಣಿರಮೇಶ್, ಪ್ರಮೀಳಾ ಜಯಕುಮಾರ್, ಶ್ಯಾಮಳಾ, ಗೀತಾ ಹಾಗೂ ವಿವಿಧ ಸಮಿತಿ ಸದಸ್ಯರು, ಸ್ಥಳೀಯರು ಭಾಗವಹಿಸಿದರು.

RELATED NEWS

You cannot copy contents of this page