ಕಾರಿನಲ್ಲಿ ಸಾಗಿಸುತ್ತಿದ್ದ 129 ಲೀಟರ್ ಕರ್ನಾಟಕ ಮದ್ಯ ವಶ

ಬಂದ್ಯೋಡು: ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷ ಲ್ ಸ್ಕ್ವಾಡ್‌ನ ಸರ್ಕಲ್ ಇನ್‌ಸ್ಪೆ ಕ್ಟರ್ ಶಂಕರ್ ಜಿ.ಎ ನೇತೃತ್ವದ ಅಬಕಾರಿ ತಂಡ  ಉಪ್ಪಳ ಸಮೀ ಪದ ಬಂದ್ಯೋಡಿನಲ್ಲಿ  ನಿನ್ನೆ ನಡೆ ಸಿದ ಕಾರ್ಯಾಚರಣೆಯಲ್ಲಿ ಕಾರಿ ನಲ್ಲಿ ಸಾಗಿಸುತ್ತಿದ್ದ ೧೨೯ .೨೪ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಈ ಕಾರ್ಯಚರಣೆ ವೇಳೆ ಕಾರಿನಲ್ಲಿದ್ದವರು ತಪ್ಪಿಸಿಕೊಂಡಿದ್ದಾರೆ. ಮಾಲು  ಸಾಗಿ ಸಲು  ಬಳಸಲಾದ ಕಾರನ್ನು ಅಬಕಾ ರಿ ತಂಡ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮಂಜುನಾಥ.ವಿ, ಸತೀಶನ್,  ಚಾಲಕ  ಕ್ರಿಸ್ಟಿನ್ ಪಿ ಎ ಎಂಬವರು ಒಳಗೊಂಡಿದ್ದಾರೆ.  ಕೆಮು ತಂಡದ ಸದಸ್ಯರಾದ  ಪ್ರಿವೆಂಟೀವ್ ಆಫೀಸರ್ ರಾಜೇಶ್, ಸಿಇಒ   ಅಮಲ್‌ಜಿತ್, ಚಾಲಕ ಸತ್ಯನ್ ಎಂಬವರು ಇದಕ್ಕೆ ಅಗತ್ಯದ ಬೆಂಬಲ ನೀಡಿದ್ದಾರೆ.

RELATED NEWS

You cannot copy contents of this page