ಮಂಗಳೂರಿನಿಂದ ತಿರುವನಂತಪುರ ತನಕದ ರೂಟಿನಲ್ಲಿ ರೈಲುಗಳ ವೇಗ ಮಿತಿ೧೬೦ ಕಿ.ಮೀ.ಗೇರಿಸುವ ಸಮೀಕ್ಷೆ ಪೂರ್ಣ
ಕಾಸರಗೋಡು: ಮಂಗಳೂರಿನಿಂದ ತಿರುವನಂತಪುರ ತನಕದ ರೈಲ್ವೇ ಹಳಿಯಲ್ಲಿ ರೈಲುಗಳ ವೇಗ ಮಿತಿಯನ್ನು ೧೬೦ ಕಿ.ಮೀಗೇರಿಸುವ ಉದ್ದೇಶದಿಂದ ಆರಂಭಿಸಲಾದ ಸರ್ವೇ ಪೂರ್ಣಗೊಂಡಿದೆ.
ಹೆಲಿಕಾಫ್ಟರ್ ಬಳಸಿ ಲೈಟ್ ಡಿಜೆಕ್ಷನ್ ಆಂಡ್ ರೇಂಜಿಂಗ್ (ಲೀಡಾರ್) ಸೌಕರ್ಯ ಬಳಸಿ ಸಮೀಕ್ಷೆ ನಡೆಸಲಾಗಿದೆ. ರೈಲ್ವೇಗಾಗಿ ಹೈದರಾಬಾದ್ನ ಆರ್ವಿ ಅಸೋಸಿಯೇಟ್ಸ್ ಈ ಸಮೀಕ್ಷೆ ನಡೆಸಿದೆ. ಸಮೀಕ್ಷೆಯನ್ನು ಪರಿಶೀಲಿಸಿ ಮಂಗಳೂರಿನಿಂದ ತಿರುವನಂತಪುರ ತನಕದ ರೈಲು ದಾರಿಯಲ್ಲಿರುವ ತಿರುವು ಪ್ರದೇಶಗಳ ಹಳಿಗಳನ್ನು ಬದಲಾಯಿಸಿ ಅವುಗಳನ್ನು ನೇರಗೊಳಿಸಲಾಗುವುದು. ಮಾತ್ರವಲ್ಲ ಅಗತ್ಯದ ಇತರ ಬದಲಾವಣೆಗಳನ್ನು ತರಲಾಗುವುದು. ಲೀಡಾರ್ ಸರ್ವೇಗಾಗಿ ಹೆಲಿಟಾಕ್ಸಿ ಸರ್ವೇಯನ್ನು ತುಂಬಿ ಅವಿಯೇಶನ್ನ ವಿಟಿ-ಕೆ.ಎಸ್.ಎ ಹೆಲಿಕಾಫ್ಟರ್ ಉಪಯೋಗಿ ಸಲಾಗಿತ್ತು. ಸಮೀಕ್ಷೆಯ ವರದಿಯನ್ನು ಶೀಘ್ರ ರೈಲ್ವೇ ಇಲಾಖೆಗೆ ಸಲ್ಲಿಸಲಾಗುವುದು. ತಿರುವು ರೈಲ್ವೇ ಹಳಿಗಳನ್ನು ನೇರವಾಗಿಸಲು ಅಗತ್ಯದ ಭೂ ಸ್ವಾಧೀನ ಕ್ರಮವನ್ನು ಶೀಘ್ರ ಆರಂಭಿಸಲಾಗುವುದು.
ಕೇರಳದ ರೈಲು ಹಳಿಗಳನ್ನು ನವೀಕರಿಸಿ ಯೋಜನೆಯನ್ನು ಐದು ವರ್ಷದೊಳಗೆ ಪೂರ್ತೀಕರಿಸಲು ರೈಲ್ವೇ ಇಲಾಖೆ ತೀರ್ಮಾನಿಸಿದೆ.