ಬಿಸಿಲಿನ ತಾಪ: ಮಕ್ಕಳಲ್ಲಿ ವ್ಯಾಪಕ ಸೆಖೆಬೊಕ್ಕೆ ಜಾಗ್ರತೆ ಪಾಲಿಸಲು ಆರೋಗ್ಯ ಇಲಾಖೆ ಎಚ್ಚರಿಕೆ
ಮೊಗ್ರಾಲ್: ಬಿಸಿಲಿನ ತಾಪ ಹೆಚ್ಚಾಗಿ ವಾತಾವರಣದಲ್ಲಿ ಕ್ರಮಾತೀತ ವಾಗಿ ಬಿಸಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬರಲು ಸಾಧ್ಯತೆ ಇದೆ ಎಂದು ಈ ಹಿನ್ನೆಲೆಯಲ್ಲಿ ಜಾಗರೂಕತೆ ಪಾಲಿ ಸಬೇಕೆಂದು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಬಿಸಿಲಿನ ತಾಪ ಹೆಚ್ಚುವುದರೊಂದಿಗೆ ಮಕ್ಕಳಲ್ಲಿ ಸೆಖೆಬೊಕ್ಕೆಗಳು ವ್ಯಾಪಕವಾಗಲು ಸಾಧ್ಯತೆಯಿದ್ದು, ಹೆತ್ತವರು ಜಾಗ್ರತೆ ಪಾಲಿಸಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಚಿಕ್ಕ ಮಕ್ಕಳನ್ನು ಯಾವುದೇ ಕಾರಣ ದಿಂದಲೂ ಬೆಳಿಗ್ಗೆ ೧೦ ಗಂಟೆಯ ಬಳಿಕ ಸಂಜೆ ೪ ಗಂಟೆವರೆಗೆ ಹೊರಗೆ ಬಿಡಬಾರದು. ಎರಡು ಅಥವಾ ಮೂರು ಬಾರಿ ಸ್ನಾನ ಮಾಡಿಸಲು ಗಮನಿಸಬೇಕು. ಶರೀರವನ್ನು ಶುಚಿಯಾಗಿರಿಸಿಕೊಳ್ಳಬೇಕು. ಸೆಖೆಬೊಕ್ಕೆ ಕಂಡುಬಂದರೆ ಕೂಡಲೇ ಚಿಕಿತ್ಸೆ ಲಭ್ಯಗೊಳಿಸಬೇಕೆಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.