ವಾಹನ ಖರೀದಿಸಲು ನಿರ್ಧರಿಸಿದ್ದ ಯುವಕ ನಿಗೂಢ ನಾಪತ್ತೆ

ಕುಂಬಳೆ: ಹೊಸ ವಾಹನ ಖರೀದಿಸಲು ನಿರ್ಧರಿಸಿದ್ದ ಯುವಕ ಕಳೆದ ನಾಲ್ಕು ದಿನಗಳಿಂದ ನಿಗೂಢವಾಗಿ  ನಾಪತ್ತೆಯಾದ ಬಗ್ಗೆ ದೂರಲಾಗಿದೆ.

ಎಡನಾಡು ಕಣ್ಣೂರು ಸಿದ್ದಿ ಬಯಲು ನಿವಾಸಿ ಡೇವಿಡ್ ಮೊಂತೆರೋ ಎಂಬವರ ಪುತ್ರ ಸಂತೋಷ್ ಮೊಂತೆರೋ (೩೫) ನಾಪತ್ತೆಯಾಗಿದ್ದಾರೆ. ಈ ತಿಂಗಳ ೬ರಂದು ಮಧ್ಯಾಹ್ನ ೧೨.೩೦ಕ್ಕೆ ಸೀತಾಂಗೋಳಿ ಪೇಟೆಗೆಂದು  ಪತ್ನಿಯಲ್ಲಿ ತಿಳಿಸಿ ಮನೆಯಿಂದ ತೆರಳಿದ್ದ  ಸಂತೋಷ್ ಮೊಂತೆರೋ ಬಳಿಕ ಮರಳಿಬಂದಿಲ್ಲವೆನ್ನಲಾಗಿದೆ. ಮನೆಯಿಂದ ತೆರಳುವಾಗ ಹಳದಿ ಬಣ್ಣದ ಅಂಗಿ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆನ್ನಲಾಗಿದೆ. ಅಂದು ಸಂಜೆಯಾದರೂ ಮನೆಗೆ  ಮರಳದ ಹಿನ್ನೆಲೆಯಲ್ಲಿ ಸಂತೋಷ್‌ರ ಎರಡು ಮೊಬೈಲ್‌ಗಳಿಗೂ ಕರೆಮಾಡಿದ್ದು,  ಆದರೆ ಕರೆ ಸ್ವೀಕರಿಸಿಲ್ಲ. ರಾತ್ರಿ ವೇಳೆಗೆ ಅದು ಸ್ವಿಚ್ ಆಫ್ ಆಗಿರುವುದಾಗಿ ತಿಳಿದುಬಂದಿದೆ. ನಿನ್ನೆವರೆಗೂ ವಿವಿಧೆಡೆ ಹುಡುಕಾಡಿದ್ದರೂ ಸಂತೋಷ್ ಪತ್ತೆಯಾಗದ ಹಿನ್ನೆಲೆಯಲ್ಲಿ ತಂದೆ ಡೇವಿಡ್ ಕುಂಬಳ ಪೊಲೀಸರಿಗೆ ದೂರು ನೀಡಿದ್ದು, ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 

ಈ ಹಿಂದೆ ಸ್ವಂತ ಗೂಡ್ಸ್ ಆಟೋ ಚಾಲಕನಾಗಿದ್ದ ಸಂತೋಷ್ ಮೊಂತೆರೋ ಒಂದು ತಿಂಗಳ ಹಿಂದೆ ಅದನ್ನು ಮಾರಾಟ ಮಾಡಿದ್ದರು. ಅನಂತರ ಮನೆಯಲ್ಲೇ ಇದ್ದ ಸಂತೋಷ್ ಈ ತಿಂಗಳ ೫ರಂದು ಬೇರೆ ಗೂಡ್ಸ್ ಆಟೋ ಖರೀದಿಸಲೆಂದು ಕಣ್ಣೂರಿನ ಸೆಕೆಂಡ್ ವಾಹನ ಶೋರೂಂಗೆ ಪತ್ನಿ ಪವಿತ್ರ ಮೊಂತೆ ರೋರೊಂದಿಗೆ  ತೆರಳಿದ್ದರು.

ಅಲ್ಲಿ ೫ ಲಕ್ಷ ರೂಪಾಯಿಯ ವಾಹನ ಖರೀದಿಸಲು ನಿರ್ಧರಿಸಿ ಒಂದು ಲಕ್ಷ ರೂಪಾಯಿ ಮುಂಗಡ ಹಣ ನೀಡಿ ಮರಳಿದ್ದರೆ ನ್ನಲಾಗಿದೆ. ಬಾಕಿ ಹಣ ಸಂಗ್ರಹಿ ಸುವ ಉದ್ದೇಶದಿಂದ ೬ರಂದು ಬೆಳಿಗ್ಗೆ ಪತ್ನಿಯಲ್ಲಿ ಚಿನ್ನಾಭರ ಣವನ್ನು ನೀಡಬೇಕೆಂದೂ ಸಂತೋಷ್ ಕೇಳಿದ್ದರೆನ್ನಲಾಗಿದೆ. ಅನಂತರ ಸೀತಾಂಗೋಳಿಗೆ ತೆರಳಿದ ಅವರು ಬಳಿಕ ನಿಗೂ ಢವಾಗಿ  ನಾಪತ್ತೆಯಾಗಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page