ಉಪ ಚುನಾವಣೆ ವಿಧಾನಸಭಾ ಅಧಿವೇಶನ ತಾತ್ಕಾಲಿಕ ಮುಂದೂಡಿಕೆ

ತಿರುವನಂತಪುರ: ಪುದುಪಳ್ಳಿ ವಿಧಾನಸಭೆಗೆ ಸೆ. ೫ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಅಧಿವೇಶನವನ್ನು  ನಾಳೆಯಿಂದ ತಾತ್ಕಾಲಿಕವಾಗಿ  ಮುಂದೂಡುವ ತೀರ್ಮಾನ ಕೈಗೊಳ್ಳಲಾಗಿದೆ. ಸೆ. ೧೧ರ ಬಳಿಕ ಅಧಿವೇಶನ ಮತ್ತೆ ಪುನರಾರಂಭಗೊಳ್ಳಲಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಮಗಳು ಟಿ. ವೀಣಾರಿಗೆ ಸಿಎಂಆರ್‌ಎಲ್ ಎಂಬ ಕಂಪೆನಿಯಿಂದ ಮಾಸಿಕ ರೂಪದಲ್ಲಿ ಒಟ್ಟು ೧.೭೨ ಕೋಟಿ ರೂ. ಲಭಿಸಿದೆ ಎಂಬ ಆರೋಪಗಳು ಎದ್ದು ಬಂದಿದ್ದು, ಆ ವಿಷಯವನ್ನು ವಿಪಕ್ಷೀಯರು ವಿಧಾನಸಭೆಯಲ್ಲಿ ಎತ್ತುವ ಸಾಧ್ಯತೆ ಇರುವಂತೆಯೇ ವಿಧಾನಸಭಾ ಅಧಿವೇಶನವನ್ನು ಉಪಚುನಾ ವಣೆಯ ಹೆಸರಲ್ಲಿ ತಾತ್ಕಾಲಿಕವಾಗಿ ಮುಂದೂ ಡಲಾಗಿದೆ ಎಂಬುದು ಮತ್ತೊಂ ದು ವಿಶೇಷತೆಯಾಗಿದೆ.

You cannot copy contents of this page