ಹೊಸಂಗಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭ : ಕಟ್ಟಿನಿಂತ ಮಳೆ ನೀರು ರಸ್ತೆಯಲ್ಲಿ ಹರಿದು ಸಮಸ್ಯೆ
ಮಂಜೇಶ್ವರ: ಹೊಸಂಗಡಿಯಲ್ಲಿ ರಾಷ್ಟಿçÃಯ ಹೆದ್ದಾರಿ ಅಭಿವೃದ್ದಿ ಕೆಲಸ ಮತ್ತೆ ಆರಂಭಗೊAಡಿದೆ. ವ್ಯಾಪಕ ಮಳೆಯಿಂದಾಗಿ ಹಾಗೂ ನೀರು ತುಂ ಬಿಕೊಂಡಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಕಾಮಗಾರಿ ಯನ್ನು ತತ್ಕಾಲಿಕವಾಗಿ ನಿಲುಗಡೆಗೊಳಿ ಸಲಾಗಿತ್ತು. ಇದೀಗ ಮತ್ತೆÀ ಕಾಮಗಾರಿ ಆರಂಭಿಸಿದ್ದಾರೆ. ಇಲ್ಲಿ ನಿರ್ಮಿಸ ಲಾದ ಬೃಹತ್ ಸಂಕದ ಒಂದು ಭಾಗದಲ್ಲಿ ಮಣ್ಣು ತೆರವುಗೊಳಿಸುವ ಕೆಲಸ ಭರದಿಂದ ನಡೆಯುತ್ತಿದೆ. ಅಲ್ಲದೆ ಭಾರೀ ಪ್ರಮಾಣದಲ್ಲಿ ಕಟ್ಟಿ ನಿಂತ ಮಳೆ ನೀರನ್ನು ಹರಿದು ಬಿಡುವ ವ್ಯವಸ್ಥೆಯನ್ನು ಮಾಡಲಾಗಿದೆ. ನೀರು ರಸ್ತೆ ಮೂಲಕ ಹರಿದು ಚರಂಡಿ ಸೇರುತ್ತಿದೆ. ಇದರಿಂದ ನಿರ್ಮಾಣ ಹಂತ ದಲ್ಲಿರುವ ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿ ರುವುದಾಗಿ ದೂರಲಾಗಿದೆ. ಹೊಸಂ ಗಡಿ ಪೇಟೆಯ ಲ್ಲಿ ಹೆದ್ದಾರಿ ರಸ್ತೆ ಭಾರೀ ಆಳದ ಹೊಂಡದ ಮೂಲಕ ಹಾದುಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ.
ಇದು ನಿರ್ಮಾಣ ಹಂತದಲ್ಲಿರುವುದರಿAದ ಇದೀಗ ವಾಹನ ಸಂಚಾರಕ್ಕೆ ರಸ್ತೆಯಲ್ಲಿ ಸ್ಥಳದ ಕೊರತೆಯಿಂದಾಗಿ ಮಂಗಳೂರು-ಕಾಸರಗೋಡು ಭಾಗಕ್ಕೆ ಕಿರಿದಾದ ಒಂದೇ ರಸ್ತೆಯಲ್ಲಿ ವಾಹನಗಳು ಸಂ ಚರಿಸುವುದು ವಾಹನಗಳ ದಟ್ಟಣೆಗೆ ಕಾರಣವಾಗಿದ್ದು, ಸಮಯಕ್ಕೆ ಸರಿ ಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ ವೆಂದು ಸಾರ್ವಜನಿಕರು ಆರೋಪಿಸಿ ದ್ದಾರೆ. ಮಧ್ಯಾಹ್ನ ಹೊತ್ತಲ್ಲಿ ಭಾರೀ ಪ್ರಮಾಣದಲ್ಲಿ ವಾಹನಗಳ ಸರದಿ ಸಾಲುಗಳು ಕಂಡುಬರುತ್ತಿದೆ. ಕಾನೂನು ಪಾಲಕರು ಹಾಗೂ ಹೆದ್ದಾರಿ ಅಧಿಕಾರಿಗಳು ವಾಹನಗಳನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.