ಕುಂಬಳೆ: ಕೆಟ್ಟುಹೋದ ಹಿನ್ನೆ ಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನದ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದು ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ತಲಪ್ಪಾಡಿ ಕೆ.ಸಿ ರೋಡ್ ನಿವಾಸಿ ಮುಹಿಯುದ್ದೀನ್ ಸಿನಾನ್ (28) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ ೬.೧೫ರ ವೇಳೆ ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡಿನಲ್ಲಿ ಈ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಮುಹಿಯುದ್ದೀನ್ ಸಿನಾನ್‌ರನ್ನು ಕೂಡಲೇ ಮಂಗಳೂ ರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮುಹಿಯುದ್ದೀನ್ ಸಿನಾನ್ ಉಪ್ಪಳ ಭಾಗದಿಂದ ಕುಂಬಳೆ ಭಾಗಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಕಳೆದ ಕೆಲವು ದಿನಗಳಿಂದ ಇದೇ ರೀತಿಯಲ್ಲಿ ಸಂಭವಿಸಿದ ಎರಡನೇ ಅಪಘಾತ ಇದಾಗಿದೆ. ಕೆಲವು ದಿನಗಳ ಹಿಂದೆ ಕರಂದಕ್ಕಾಡ್ ಅಗ್ನಿಶಾಮ ಕದಳ ಸಮೀಪದ ರಸ್ತೆಯಲ್ಲಿ ನಿಲ್ಲಿಸಿದ್ದ ಲಾರಿಯ ಹಿಂಬದಿಗೆ ಬೇರೊಂದು ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಅಂದು ಗಂಟೆಗಳ ಕಾಲ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಲಾರಿಯೊಳಗೆ ಸಿಲುಕಿದ್ದ ಕ್ಲೀನರ್‌ನನ್ನು ಅಗ್ನಿಶಾಮಕದಳ ಹಾಗೂ ನಾಗರಿಕರು ಸೇರಿ ರಕ್ಷಿಸಿದ್ದರು. ಇದೇ ವೇಳೆ ನಿರ್ಮಾಣ ಪೂರ್ತಿ ಗೊಂಡು ವಾಹನ ಸಂಚಾರ ಆರಂಭಿಸಿದ ಚೆಂಗಳ-ತಲಪ್ಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುನ್ಸೂಚನೆ ಉಲ್ಲಂಘಿಸಿ ವಾಹನಗಳ ಸಂಚಾರ ನಿರಂತರವಾಗಿ ಕಂಡುಬರು ತ್ತಿದೆ. ಷಟ್ಪಥ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳಿಗೆ ಪ್ರವೇಶವಿಲ್ಲ. ಈ ಬಗ್ಗೆ ಸೂಚನಾ ಫಲಕಗಳನ್ನು ಸ್ಥಾಪಿಸ ಲಾಗಿದೆ. ಆದರೆ ಇದ್ಯಾವುದನ್ನೂ ಲೆಕ್ಕಿ ಸದೆ ದ್ವಿಚಕ್ರ ವಾಹನಗಳು ಅಪರಿಮಿತ ವೇಗದಲ್ಲಿ ಸಂಚರಿಸುತ್ತಿವೆ. ಸರ್ವೀಸ್ ರಸ್ತೆಯನ್ನು ಹೊರತುಪಡಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆಯೆಂದು ಆರೋಪವುಂಟಾಗಿದೆ. ಸರ್ವೀಸ್ ರಸ್ತೆಗಳ ಕಾಲುದಾರಿಯಲ್ಲಿ ವಾಹನಗಳನ್ನು ನಿಲ್ಲಿ ಸುತ್ತಿರುವುದು ಕೂಡಾ ಅಪಘಾತಗಳಿಗೆ ಕಾರಣವಾ ಗುತ್ತಿದೆ. ಇದೇ ವೇಳೆ ಈ ರೀತಿಯಲ್ಲಿ ಕಾನೂನು ಉಲ್ಲಂಘಿಸುವ ವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲು ಮೋಟಾರು ವಾಹನ ಇಲಾಖೆ





