ಅಬೂಬಕರ್ ನಿಧನ

ಕುಂಬಳೆ: ಸುಬ್ಬಯಕಟ್ಟೆ ಕುಡಾಲುಮೇರ್ಕಳದ ಅಬೂಬಕರ್ (7೦) ನಿಧನಹೊಂದಿದರು. ಇವರು ಈ ಹಿಂದೆ ಅಬುದಾಬಿಯಲ್ಲಿ  ಗಲ್ಪ್ ನ್ಯೂಸ್‌ನ ನೌಕರನಾಗಿದ್ದರು. ಸಾಮಾಜಿಕ ಕಾರ್ಯಕರ್ತನೂ ಆಗಿದ್ದ ಇವರು ಚಪ್ಪಾಳೆತಟ್ಟಿ ಹಾಡುಗಾರನೂ ಆಗಿದ್ದರು.

ಮೃತರು ಪತ್ನಿ ಆಯಿಶಾಬಿ, ಮಕ್ಕಳಾದ ಫಾರಿಸ್, ಖಲೀಲ್, ಸುಹರ, ರುಖಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಬೂಬಕರ್‌ರ ಪತ್ನಿ ಆಯಿಶಾಬಿ ಹಜ್‌ಗೆ ತೆರಳಿದ್ದು ಇಂದು ಮರಳಿ ಮನೆಗೆ ತಲುಪಲಿದ್ದಾರೆ. ಅನಂತರ ಸುಬ್ಬಯಕಟ್ಟೆ ಜುಮಾ ಮಸೀದಿ ಬಳಿ ಅಂತ್ಯಸಂಸ್ಕಾರ ನಡೆಯಲಿದೆಯೆಂದು ಸಂಬಂಧಿಕರು ತಿಳಿಸಿದ್ದಾರೆ.

You cannot copy contents of this page