ಪೆರ್ಲ: ಆಟೋ ಚಾಲಕನಾದ ಯುವಕ ವಿದ್ಯುತ್ ಶಾಕ್ ತಗಲಿ ಮೃತಪಟ್ಟ ದಾರುಣ ಘಟನೆಯಿಂದ ಪೆರ್ಲ ಹಾಗೂ ಪರಿಸರ ಪ್ರದೇಶಗ ಳಲ್ಲಿ ಶೋಕಸಾಗರ ಸೃಷ್ಟಿಸಿದೆ.
ಪಡ್ರೆ ಪರ್ತಾಜೆ ಶಿವಗಿರಿ ಅಂಗನವಾಡಿ ಸಮೀಪದ ನಿವಾಸಿಯಾ ದ ಧನ್‌ರಾಜ್ (40) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಮನೆಯ ಬೆಡ್‌ರೂಂನಲ್ಲಿ ಕಾರ್ಯಾಚರಿಸದ ಫ್ಯಾನ್ ರಿಪೇರಿ ಮಾಡುತ್ತಿದ್ದಾಗ ನಿನ್ನೆ ಮಧ್ಯಾಹ್ನ ೨.೩೦ರ ವೇಳೆ ದುರ್ಘಟನೆ ಸಂಭವಿಸಿದೆ. ಫ್ಯಾನ್ ರಿಪೇರಿ ವೇಳೆ ವಿದ್ಯುತ್ ಶಾಕ್ ತಗಲಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡ ಧನ್‌ರಾಜ್‌ರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ನಿನ್ನೆ ರಾತ್ರಿ ಮನೆಗೆ ತಲುಪಿಸಿ ಅಂತ್ಯಸಂಸ್ಕಾರ ನಡೆಸಲಾಯಿತು. ಹದಿನೈದು ವರ್ಷಗಳಿಂದ ಪೆರ್ಲದಲ್ಲಿ ಆಟೋ ಚಾಲಕನಾಗಿದ್ದ ಧನ್‌ರಾಜ್ ನಾಡಿನಲ್ಲಿ ಚಿರಪರಿಚಿತರಾಗಿದ್ದರು.
ದಿ| ಕೃಷ್ಣ ನಾಯ್ಕ ಎಂಬವರ ಪುತ್ರನಾದ ಧನ್‌ರಾಜ್ ತಾಯಿ ಗಿರಿಜ, ಪತ್ನಿ ದೀಪ, ಮಕ್ಕಳಾದ ನಿಶ್ಚಿತ, ವಿಜಿತ್, ಸಹೋದರ-ಸಹೋದರಿಯರಾದ ಮೋಹನ, ಕಮಲಾಕ್ಷಿ, ಮೋಹಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






