ಯುವ ನಟಿ ಅಂಜುಕೃಷ್ಣ  ಸಹಿತ ಎಂಟು ಮಂದಿ ಮಾದಕಪದಾರ್ಥದೊಂದಿಗೆ ಸೆರೆ

ಚೆನ್ನೈ: ಯುವ ನಟಿ ಅಂಜು ಕೃಷ್ಣ ಹಾಗೂ ಸಹಾಯಕ ನಿರ್ದೇಶಕ ವಿನ್ಸಿ ನಿವೇದ್ ಸಹಿತದ 8 ಮಂದಿ ಚೆನ್ನೈಯಲ್ಲಿ ಮಾದಕಪದಾರ್ಥ ದೊಂದಿಗೆ ಸೆರೆಯಾಗಿದ್ದಾರೆ. ಚೆನ್ನೈ ಪೊಲೀಸರ ಆಂಡ್ ನಾರ್ಕೋ ಟಿಕ್ ಇಂಟೆಲಿಜೆನ್ಸ್ ಘಟಕ ನಡೆಸಿದ  ಕಾರ್ಯಾಚರಣೆಂiiಲ್ಲಿ ತಂಡ ಸೆರೆಯಾಗಿದೆ. ಮೆಥಾಫೆಟಾ ಮಿನ್, ಎಲ್‌ಎಸ್‌ಡಿ ಸ್ಟ್ಯಾಂಪ್ ಗಳು, ಗಾಂಜಾ ಮೊದಲಾದ ಮಾದಕಪದಾ ರ್ಥಗಳು ಇವರ ಕೈವಶವಿತ್ತೆಂದು ಆಂಟಿ ನಾರ್ಕೋಟಿಕ್ ಇಂಟೆಲಿಜೆನ್ಸ್ ಘಟಕ ತಿಳಿಸಿದೆ. ನೆಶಪ್ಪಾಕಂ ನಿವಾಸಿ ವಿಘ್ನೇಶ್ವರನ್ ಎಂಬಾತನನ್ನು  ಮಾದಕಪದಾರ್ಥ ದೊಂದಿಗೆ ಪ್ರಥಮವಾಗಿ ಸೆರೆಹಿಡಿಯಲಾಗಿತ್ತು. ಈತನನ್ನು ಪ್ರಶ್ನಿಸಿದಾಗ ನಟಿ ಹಾಗೂ ಸಹಾಯಕ ನಿರ್ದೇಶಕ ಸಹಿತವಿರುವ ವರ ಬಗ್ಗೆ ತಿಳಿದುಬಂದಿದ್ದು, ಬಳಿಕ ಇವರನ್ನು ಸೆರೆಹಿಡಿಯಲಾಗಿದೆ.  

RELATED NEWS

You cannot copy contents of this page