ಎಕೆಪಿಎ ವೆಸ್ಟ್ ಯೂನಿಟ್‌ನಿಂದ ಮಹಿಳಾ ದಿನಾಚರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇ ಶನ್ ವೆಸ್ಟ್ ಯೂನಿಟ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯಂಗ ವಾಗಿ ಯೂನಿಟ್ ಸದಸ್ಯರ ಕುಟುಂಬದ ಹಿರಿಯ ಮಹಿಳೆಯನ್ನು ಅಭಿನಂದಿಸಲಾಯಿತು.

ಯೂನಿಟ್ ಅಧ್ಯಕ್ಷ ವಸಂತ ಕೆರೆಮನೆಯವರ ತಾಯಿ ಉಮಾವತಿ ನಾರಾಯಣ ಆಚಾರ್ಯ ಕೆರೆಮನೆ ಇವರನ್ನು ಅವರ ನಿವಾಸಕ್ಕೆ ತೆರಳಿ ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ಮೈಂದಪ್ಪ ಕೆ.ಎಂ. ಅಭಿನಂದಿಸಿದರು. ಕಾರ್ಯದರ್ಶಿ ಶಾಲಿನಿ ರಾಜೇಂ ದ್ರನ್, ವಾರ್ಡ್ ಕೌನ್ಸಿಲರ್ ಕೆ.ಎನ್. ರಾಮಕೃಷ್ಣ ಹೊಳ್ಳ ಭಾಗವಹಿಸಿದರು.ಯೂನಿಟ್ ಅಧ್ಯಕ್ಷ ವಸಂತ ಕೆರೆಮನೆ, ಜಿಲ್ಲಾ ಜತೆ ಕಾರ್ಯದರ್ಶಿ ಮನು ಎಲ್ಲೋರ, ವಲಯ ಜತೆ ಕಾರ್ಯದರ್ಶಿ ಗಣೇಶ್ ರೈ, ಯೂನಿಟ್ ಕೋಶಾಧಿಕಾರಿ ಅಮಿತ್, ರತೀಶ್, ಮನಮೋಹನ ಆಚಾರ್ಯ, ತುಕರಾಮ ಆಚಾರ್ಯ, ಗೀತಾ ತುಕರಾಮ, ದಿವ್ಯಶ್ರೀ ವಸಂತ್ ಉಪಸ್ಥಿತರಿದ್ದರು.

You cannot copy contents of this page