ಆಲಂಪಾಡಿ ನಿವಾಸಿಯನ್ನು ತಡೆದು ನಿಲ್ಲಿಸಿ ಪರ್ಸ್, ಎಟಿಎಂ ಕಾರ್ಡ್ ವಶ: ಕೊಲೆ ಬೆದರಿಕೆಯೊಡ್ಡಿ 1 ಲಕ್ಷ ರೂ. ಲಪಟಾವಣೆ

ಕಾಸರಗೋಡು: ಆಲಂಪಾಡಿ ನಿವಾಸಿಯನ್ನು ತಡೆದು ನಿಲ್ಲಿಸಿದ ತಂಡವೊಂದು ಪರ್ಸ್ ಹಾಗೂ ಎಟಿಎಂ ಕಾರ್ಡ್ ಅಪಹರಿಸಿ 1,01,000 ರೂಪಾಯಿ ಲಪಟಾಯಿಸಿರುವುದಾಗಿ ದೂರಲಾಗಿದೆ. ಮುಟ್ಟತ್ತೋಡಿ ಆಲಂಪಾಡಿ ಮಿಹ್ರಾಜ್ ಹೌಸ್‌ನ ಪಿ.ಎಂ. ಖಮರುದ್ದೀನ್ ಎಂಬವರು ನೀಡಿದ ದೂರಿನಂತೆ ಅನಸ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ ಮೂರು ಮಂದಿ ವಿರುದ್ಧ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ನಿನ್ನೆ ರಾತ್ರಿ 9.30ರ ವೇಳೆ ನೆಲ್ಲಿ ಕುಂಜೆಯಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಖಮರುದ್ದೀನ್‌ರನ್ನು ತಡೆದು ನಿಲ್ಲಿಸಿದ ತಂಡ ಕೊಲೆಗೈಯ್ಯು ವುದಾಗಿ ಬೆದರಿಕೆಯೊಡ್ಡಿದ ಬಳಿಕ ಪರ್ಸ್ ವಶಪಡಿಸಿ ಅದರಲ್ಲಿದ್ದ ೨೦೦೦ ರೂಪಾಯಿಗಳನ್ನು ಅಪಹರಿಸಿದೆ. ಅಲ್ಲದೆ ಎಟಿಎಂ ಕಾರ್ಡ್‌ನ ಪಿನ್ ನಂಬ್ರ ಪಡೆದು 99,೦೦೦ ರೂಪಾಯಿಗಳನ್ನು ಎಟಿಎಂನಿಂದ ಹಿಂಪಡೆದುಕೊಂಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page