ಕಾಸರಗೋಡು: ರಾಜ್ಯದ ವಿವಿಧ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗೆಸ್ಟ್ ಅಧ್ಯಾಪಕರು ಒಂದುಗೂಡಿ ತಮ್ಮದೇ ಆಲ್ ಕೇರಳ ಕಾಲೇಜ್ ಗೆಸ್ಟ್ ಟೀಚರ್ಸ್ ಅಸೋಸಿಯೇಶನ್ ಎಂಬ ಸಂಘಟನೆಗೆ ರೂಪು ನೀಡಿದ್ದಾರೆ.
ಈ ಸಂಘಟನೆ ರೂಪೀಕರಣ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದರು. ಈ ಸಂಘಟನೆಯ ಮೊದಲ ರಾಜ್ಯ ಸಮಿತಿಯ ಪದಾಧಿಕಾರಿಗಳನ್ನಾಗಿ ಡಾ. ಎಂ. ಹರಿನಾಗರಾಜ್ (ಅಧ್ಯಕ್ಷರು), ಡಾ ಆರ‍್ಯಾ ಪಿ ಮಣಿ, ಎಸ್, ಸನಲ್, ಆದಿರಾ, ಡಾ. ಸತ್ಯಪ್ರಕಾಶ್ (ಉಪಾಧ್ಯಕ್ಷರು), ಪಿ. ಸೋಶೀನಾ (ಪ್ರಧಾನ ಕಾರ್ಯದರ್ಶಿ), ಕೆ. ಅಜು ಶಾಹೀದ್, ಡಾ. ಸೆಬಾಸ್ಟಿಯನ್, ಕುತ್ತೋಟಿಲ್ (ಜತೆ ಕಾರ್ಯದರ್ಶಿಗಳು), ಡಾ. ಪಿ, ಕಾವ್ಯ, ಸಲೀಂ, ಅಹಮ್ಮದ್ ಶಾಫಿ (ಸಹ ಕಾರ್ಯದರ್ಶಿಗಳು) ಮತ್ತು ಡಾ. ಎನ್.ಕೆ. ರಮ್ಯ (ಕೋಶಾಧಿಕಾರಿ) ಎಂಬಿವರನ್ನು ಆರಿಸಲಾಗಿದೆ.
ಗೆಸ್ಟ್ ಅಧ್ಯಾಪಕರ ವೇತನ ಹೆಚ್ಚಳ, ಸೇವಾ ಸುರಕ್ಷತೆ ಮತ್ತು ಮಾನ್ಯತೆಗಾಗಿ ಒಂದಾಗಿ ನಿಲ್ಲುವ ವೇದಿಕೆಯಾಗುವುದು ನಮ್ಮ ಸಂಘಟನೆ ರೂಪೀಕರಿಸುವುದರ ಪ್ರಧಾನ ಉದ್ದೇಶವಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದರು.