ಸಾರ್ವಕಾಲಿಕ ಗರಿಷ್ಠ ದಾಖಲೆ: ಪವನ್‌ಗೆ 1 ಲಕ್ಷ ರೂ. ಗಡಿ ದಾಟಿ ನಾಗಾಲೋಟ ಮುಂದುವರಿಸಿದ ಚಿನ್ನದ ಬೆಲೆ

ತಿರುವನಂತಪುರ:  ಚಿನ್ನದ ಬೆಲೆಯ ನಾಗಾಲೋಟ ಇನ್ನೂ ಮುಂದುವರಿದಿದೆ. ನಿನ್ನೆ ಪವನ್‌ಗೆ 99,840 ರೂ. ಆಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಬೆಳಿಗ್ಗೆ 1,760 ರೂ.ಗಳ ಏರಿಕೆ ಉಂಟಾಗಿ   ಈಗ 1,01,600 ರೂ.ಗೇರಿ ಸಾರ್ವಕಾಲಿಕ ಗರಿಷ್ಠ ದಾಖಲೆ ನಿರ್ಮಿಸಿದೆ.

ಈ ವರ್ಷ ಜನವರಿಯಲ್ಲಿ 1 ಪವನ್ ಚಿನ್ನದ ಬೆಲೆ ೫೭ ಸಾವಿರ ರೂ. ಆಗಿತ್ತು. ವರ್ಷದ ಕೊನೆಯ ತಿಂಗಳಾದ ಇಂದು ಅದು 1,01,600 ರೂ.ಗೇರಿದೆ. ಇದು ಚಿನ್ನದ ಬೆಲೆಯ ನಾಗಾಲೋಟ ಇನ್ನೂ ಮುಂದುವರಿ ಯಲಿದೆಯೆಂಬುವುದರ  ಒಂದು ಸೂಚನೆಯಾಗಿದೆ.

ಜಾಗತಿಕ ಬಿಕ್ಕಟ್ಟಿನ ನಡುವೆ  ದೇಶೀಯ ಮಾರುಕಟ್ಟೆಗಳಲ್ಲಿ ಚಿನ್ನ ಮಾತ್ರವಲ್ಲ ಬೆಳ್ಳಿಯ ಬೆಲೆಯೂ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.  ದೆಹಲಿಯಲ್ಲಿ ಒಂದು ಕಿಲೋ ಬೆಳ್ಳಿಯ ಬೆಲೆ ಈಗ 2.21 ಲಕ್ಷ ರೂ.ಗೇರಿದೆ. ಚಿನ್ನದ ಬೆಲೆ ಸಾರ್ವಕಾಲಿಕ ಗಡಿದಾಟಿರುವುದು ಆಭರಣ ಪ್ರಿಯರಿಗೆ ಬಿಕ್ ಶಾಕ್ ನೀಡಿದೆ.  ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಉಂಟಾಗಿದ್ದು 10 ಗ್ರಾಂನ ಬೆಲೆ 1.38 ಲಕ್ಷ ರೂ.ಗೆ ತಲುಪಿದೆ.

RELATED NEWS

You cannot copy contents of this page