ಪೈವಳಿಕೆ: ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ೧೮ನೇ ವಾರ್ಷಿಕೋತ್ಸವ ಇಂದು ಹಾಗೂ ನಾಳೆ ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಲಿದ್ದು, ಇಂದು ಬೆಳಿಗ್ಗೆ ಮಂದಿರದ ಪ್ರಧಾನ ಅರ್ಚಕ ವೇ|ಮೂ| ವೆಂಕಟರಮಣ ಮೂಡಿತ್ತಾಯ ದೀಪ ಪ್ರಜ್ವಲನೆ ಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಭಜನೆ ಪ್ರಾರಂಭ ಗೊಂಡಿತು. ದ್ವಾದಶ ನಾಳೀಕೇರ ಗಣಯಾಗ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ೭ಕ್ಕೆ ನೃತ್ಯ ಸಂಭ್ರಮ, ೯ಕ್ಕೆ ಯಕ್ಷಗಾನ ನಾಟ್ಯ ವೈಭವ, ೧೦ಕ್ಕೆ ಕಲಾ ವೈಭವ ನಡೆದು ನಾಳೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ.







