ಕುಂಬಳೆ ಅಗ್ರಿಕಲ್ಚರಿಸ್ಟ್ ಸಹಕಾರಿ ಸಂಘ ವಾರ್ಷಿಕ ಮಹಾಸಭೆಯಲ್ಲಿ ಭಾವಚಿತ್ರ ಅನಾವರಣ

ಕಾಸರಗೋಡು: ಕುಂಬಳೆ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದ ಪಿ. ಕೃಷ್ಣ ಚೆಟ್ಟಿಯಾರ್ ಅವರ ಭಾವಚಿತ್ರ ಅನಾವರಣಗೊಳಿಸಲಾಯಿತು. ಶಾಸಕ ಸಿ.ಎಚ್. ಕುಂಞಂಬು, ಅಸಿಸ್ಟೆಂಟ್ ರಿಜಿಸ್ಟ್ರಾರ್ ಜನರಲ್ ರವೀಂದ್ರ,ಸಂಘದ ಎ ಕ್ಲಾಸ್ ಸದಸ್ಯರ ಮಕ್ಕಳಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಪಿ. ಕೃಷ್ಣ ಚೆಟ್ಟಿಯಾರ್ ಸ್ಮಾರಕ ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ವಿತರಿಸಿದರು. ಸಂಘದ ಅಧ್ಯಕ್ಷ ಕೆ. ಶಿವಪ್ಪ ರೈ ಅಧ್ಯಕ್ಷತೆ ವಹಿಸಿದರು. ಸಹಕಾರಿಗಳಾದ  ಪಿ. ರಘುದೇವನ್, ಸಿ.ಎ ಸುಬೈರ್, ಡಿ.ಎನ್. ರಾಧಾಕೃಷ್ಣನ್ ಶುಭ ಕೋರಿದರು. ಕೆ. ಜಯಕುಮಾರ್ ವರದಿ, ಆಯ-ವ್ಯಯ ಮಂಡಿಸಿದರು. ಉಪಾಧ್ಯಕ್ಷ ರತ್ನಾಕರ ಜಿ ಸ್ವಾಗತಿಸಿ, ನಿರ್ದೇಶಕ ಕೆ.ಸಿ.ಸಲೀಂ ವಂದಿಸಿದರು.

You cannot copy contents of this page