ಕುಂಬಳೆ ಠಾಣೆ ಎಸ್‌ಐ ಆಗಿ ಅನೂಬ್, ಸಿಐ ಆಗಿ ಅನೂಪ್ ಕೃಷ್ಣ ನೇಮಕ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆಯಲ್ಲಿ ನೂತನ ಎಸ್‌ಐ ಆಗಿ ಎಸ್.ಅನೂಬ್ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಆರ್.ಪಿ. ಅನೂಪ್‌ಕೃಷ್ಣ ಅಧಿಕಾರ ವಹಿಸಿಕೊಂಡಿ ದ್ದಾರೆ. ಎಸ್‌ಐ ಅನೂಬ್‌ರನ್ನು ವಿದ್ಯಾನಗರ ಪೊಲೀಸ್ ಠಾಣೆಯಿಂದ ಕುಂಬಳೆಗೆ ವರ್ಗಾಯಿಸಲಾಗಿದೆ. ತಿರುವನಂ ತಪುರ ಕಾಟಾಕಡ ನಿವಾಸಿಯಾದ ಇವರು ಈ ಮೊದಲು ಕಲ್ಲಿಕೋಟೆ, ಪಂದಿರಾಕಾವ್, ಫರೂಕ್ ಠಾಣೆಗಳಲ್ಲಿ ಎಸ್‌ಐ ಆಗಿದ್ದರು.   ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ನೇಮಕಗೊಂಡ ಆರ್‌ಪಿ ಅನೂಪ್‌ಕೃಷ್ಣ ತಿರುವನಂತಪುರ ಕೊಡಪ್ಪನಕುನ್ನು ನಿವಾಸಿಯಾಗಿದ್ದಾರೆ. ಈ ಹಿಂದೆ ತಿರುವನಂತಪುರ, ಕೋಟ್ಟಯಂ, ಕೊಲ್ಲಂ, ಪತ್ತನಂತಿಟ್ಟ, ಕುಂಬಳೆ ಕರಾವಳಿ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಬಳಿಕ ಬದಿಯಡ್ಕ ಠಾಣೆಯಲ್ಲಿ ನೇಮಕಗೊಂ ಡಿದ್ದರು.  ಇನ್ನು ಮುಂದೆ ಇವರಿಗೆ ಬದಿಯಡ್ಕ ಹಾಗೂ ಕುಂಬಳೆ ಠಾಣೆಯ ಹೊಣೆಗಾರಿಕೆ ಇರುವುದು.  ಇವರಿಗೆ ಈ ಹಿಂದೆ ಎರಡು ಬಾರಿ ಬ್ಯಾಡ್ಜ್ ಆಫ್ ಆನರ್ ಪುರಸ್ಕಾರ ಲಭಿಸಿತ್ತು. ಬದಿಯಡ್ಕ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿ ನೇಮಕಗೊಂಡ ಬಳಿಕ ಇಲ್ಲಿ ದಾಖಲಿಸಲಾದ ಎಲ್ಲಾ ಪ್ರಕರಣಗಳ ಆರೋಪಿಗಳನ್ನು ಪತ್ತೆಹಚ್ಚಿ ಸೆರೆಹಿಡಿಯಲು ಇವರಿಗೆ ಸಾಧ್ಯವಾಗಿದೆ

RELATED NEWS

You cannot copy contents of this page