ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಬಂಟ್ವಾಳ ನಿವಾಸಿ ಸೆರೆ: ಬಂಧಿತ ಹಲವು ಪ್ರಕರಣಗಳ ಆರೋಪಿ

ಕುಂಬಳೆ:  ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಬಂಟ್ವಾಳ ನಿವಾಸಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ನಾಫಿಕೊಂಬ ಬಂಟ್ವಾಳ ಜೈನರಪೇಟೆ ನಿವಾಸಿ ಮೊಹಮ್ಮದ್ ಬಶೀರ್ ಎ.ಜೆ(38) ಬಂಧಿತ ವ್ಯಕ್ತಿ. ನಿನ್ನೆ ಶಿರಿಯಾ ಗ್ರಾಮದ ಮುಟ್ಟಂ  ರೈಲ್ವೇ ಗೇಟ್ ಬಳಿ ಶಂಕಾಸ್ಪದ ರೀತಿಯಲ್ಲಿ ಈತ ಪತ್ತೆಯಾಗಿದ್ದಾನೆಂದೂ ಅದರಂತೆ ಆತನನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನು  ಬಂಟ್ವಾಳದಲ್ಲಿ ನಡೆದ ಎರಡು ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನಲ್ಲದೆ ಕಣ್ಣೂರಿನಲ್ಲಿ ಇತ್ತೀಚೆಗೆ ಸೆರೆಗೀಡಾದ ಕಳವು ಆರೋಪಿಗಳ ತಂಡದಲ್ಲಿ ಒಳಗೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page