ಬಾಯಾರು ನಿವಾಸಿಯ ಲ್ಯಾಪ್‌ಟಾಪ್ ರೈಲಿನಲ್ಲಿ ಕಳವುಗೈದ ಆರೋಪಿ ಬಂಧನ: ಇನ್ನೊಂದು ಸಾಧನೆಗೈದ ಆರ್‌ಪಿಎಫ್, ರೈಲ್ವೇ ಪೊಲೀಸ್

 ಕಾಸರಗೋಡು: ರೈಲು ಪ್ರಯಾ ಣಿಕನ ಲ್ಯಾಪ್‌ಟಾಪ್ ಕಳವುಗೈದ ಪ್ರಕರಣದಲ್ಲಿ ಆರೋಪಿಯನ್ನು ಗಂಟೆಗಳೊಳಗೆ ಸೆರೆಹಿಡಿದು  ರೈಲ್ವೇ ಪೊಲೀಸ್ ಹಾಗೂ ಆರ್‌ಪಿಎಫ್ ಇನ್ನೊಂದು ಸಾಧನೆಗೈದಿದೆ.  ಚೆರ್ವತ್ತೂರು ಪಡನ್ನ ನಿವಾಸಿ ಕೆ.ಸುಧಾಕರನ್ (56) ಎಂಬಾತನನ್ನು ಬಂಧಿಸಲಾಗಿದೆ.  ಬಾಯಾರು ಬೆರಿಪದವು ಬಳ್ಳೂರು ನಿವಾಸಿ ಇಬ್ರಾಹಿಂ ಇಶಾನ್ ಎಂಬವರ ೮೦ ಸಾವಿರ ರೂಪಾಯಿ ಮೌಲ್ಯದ  ಲ್ಯಾಪ್‌ಟಾಪ್‌ನ್ನು ಸುಧಾಕರನ್ ಕಳವುಗೈದಿದ್ದಾನೆನ್ನಲಾಗಿದೆ. 

ಇಬ್ರಾಹಿಂ ಇಶಾನ್  ಎರಡು ದಿನಗಳ ಹಿಂದೆ ಕಲ್ಲಿಕೋಟೆ ಫರೂಕ್‌ನಿಂದ ಏರನಾಡ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದು, ಕಣ್ಣೂರಿಗೆ ತಲುಪಿದಾಗಲೇ ಅವರ ಲ್ಯಾಪ್‌ಟಾಪ್ ಸಹಿತ ಬ್ಯಾಗ್ ಕಳವಿಗೀಡಾಗಿರುವುದು ಗಮನಕ್ಕೆ ಬಂದಿದೆ.  ಈ ಬಗ್ಗೆ ಅವರು ಕಣ್ಣೂರು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಸಿಸಿ ಟಿವಿ ದೃಶ್ಯಗಳನ್ನು ಕೇಂದ್ರೀಕರಿಸಿ ಪೊಲೀಸರು ನಡೆಸಿದ ತನಿಖೆಯಲ್ಲಿ  ಕಳ್ಳನ ಗುರುತು ಪತ್ತೆಹಚ್ಚಲಾಗಿದೆ. ಕೂಡಲೇ ಆತನಿಗಾಗಿ ಶೋಧ ನಡೆಸಿದ ಪೊಲೀಸರು ಕೆಲವೇ ಗಂಟೆಗಳೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರ್‌ಪಿಎಫ್ ಇನ್‌ಸ್ಪೆಕ್ಟರ್ ರಮೇಶ್ ಕುಮಾರ್, ರೈಲ್ವೇ ಎಸ್‌ಐ  ಸಂತೋಷ್, ಆರ್‌ಪಿಎಫ್ ಎಎಸ್‌ಐ ಸಂಜಯ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಅಜೀಶ್,  ವಿಜೇಶ್, ರೈಲ್ವೇ ಇಂಟೆಲಿಜೆನ್ಸ್ ಸಿವಿಲ್ ಪೊಲೀಸ್ ಆಫೀಸರ್ ಜಿತಿನ್ ಎಂಬಿವರು ಆರೋಪಿಯನ್ನು ಸೆರೆಹಿಡಿದ ತಂಡದಲ್ಲಿದ್ದರು.

RELATED NEWS

You cannot copy contents of this page