ಕುಂಬಳೆಯ ಲಾಡ್ಜ್ ಕೊಠಡಿಯಲ್ಲಿ ಮಾದಕವಸ್ತು ಬಳಸುತ್ತಿದ್ದ ಮೂವರು ಬಂಧನ

ಕುಂಬಳೆ: ಕುಂಬಳೆಯ ಲಾಡ್ಜ್‌ಯೊಂದರ ಕೊಠಡಿಯಲ್ಲಿ ಮಾದಕವಸ್ತು ಉಪಯೋಗಿಸುತ್ತಿದ್ದ ಮೂವರು ಯುವಕರನ್ನು ಬಂಧಿಸಲಾಗಿದೆ. ಕುಂಬಳೆ ಶ್ರೀ ನಿತ್ಯಾನಂದ ಮಠದ ಸಮೀಪ ಬಟ್ಟುಂಞಿ ಹೌಸ್‌ನ ಸಿ.ಕೆ. ಕೇತನ್, ಕುಂಟಗೇರಡ್ಕ ಜಿಡಬ್ಲ್ಯುಎಲ್‌ಪಿ ಶಾಲೆ ಸಮೀಪದ ನಿಸಾರ್ ಮಂಜಿಲ್‌ನ ಅಬ್ದುಲ್ ನಿಸಾರ್, ಕರ್ನಾಟಕದ ಪುತ್ತೂರು ಗಾಳಿಮುಖ ನಿವಾಸಿ ಬ್ರಿಜೇಶ್ ಎಂಬಿವರನ್ನು ಕುಂಬಳೆ ಎಕ್ಸೈಸ್ ಇನ್‌ಸ್ಪೆಕ್ಟರ್ ಕೆ.ವಿ. ಶ್ರಾವಣ್ ನೇತೃತ್ವದ ತಂಡ ಬಂಧಿಸಿದೆ. ನಿನ್ನೆ ರಾತ್ರಿ 10 ಗಂಟೆಗೆ ಕುಂಬಳೆ ರೈಲ್ವೇ ನಿಲ್ದಾಣದಿಂದ ಸಿ.ಎಚ್.ಸಿ.ಗೆ ತೆರಳುವ ರಸ್ತೆಯಲ್ಲಿ ರಾಕೇಶ್ ಕಾಂಪ್ಲೆಕ್ಸ್ ಎಂಬ ಲಾಡ್ಜ್‌ನಿಂದ ಇವರನ್ನು ಬಂಧಿಸಲಾಗಿದೆ. ಈ ಪೈಕಿ ಒಬ್ಬನ ಕೈಯಿಂದ ಹಾಗೂ ಇವರು ಸಂಚರಿಸಿದ ಸ್ಕೂಟರ್‌ನಿಂದ 2.772 ಗ್ರಾಂ ಮೆಥಾಫಿಟಾಮಿನ್ ಪತ್ತೆಹಚ್ಚಲಾಗಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಗ್ರೇಡ್ ಕೆ. ಪೀತಾಂಬರನ್, ಪ್ರಿವೆಂಟೀವ್ ಆಫೀಸರ್ ಗ್ರೇಡ್ ನಿತೀಶ್ ವೈಕತ್ತ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಅಖಿಲೇಶ್, ಸೂರ್ಜಿತ್, ಸಿವಿಲ್ ಎಕ್ಸೈಸ್ ಆಫೀಸರ್ ಪ್ರವೀಣ್ ಕುಮಾರ್ ಎಂಬಿವರು ಕಾರ್ಯಾಚರಣೆ ತಂಡದಲ್ಲಿದ್ದರು.

RELATED NEWS

You cannot copy contents of this page