ಪೈವಳಿಕೆ ಸರ್ವೀಸ್ ಸಹಕಾರಿ ಬ್ಯಾಂಕ್‌ಗೆ ಅಶ್ವತ್ಥ್ ಪೂಜಾರಿ ಲಾಲ್‌ಭಾಗ್ ಅಧ್ಯಕ್ಷರಾಗಿ ಪುನರಾಯ್ಕೆ

ಪೈವಳಿಕೆ: ಪೈವಳಿಕೆ ಸರ್ವೀಸ್ ಸಹಕಾರಿ ಬ್ಯಾಂಕ್ ನಂ. ೩೯೮ನೇ ಅಧ್ಯಕ್ಷರಾಗಿ ಅಶ್ವಥ್ ಪೂಜಾರಿ ಲಾಲ್‌ಭಾಗ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪುಷ್ಪ ಜಯರಾಮ ಬಾಯಿಕಟ್ಟೆ ಆಯ್ಕೆಯಾಗಿದ್ದಾರೆ. ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಅಶ್ವಥ್ ಪೂಜಾರಿ ಲಾಲ್‌ಭಾಗ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಪುಷ್ಪ ಜಯರಾಮ ಬಾಯಿಕಟ್ಟೆ ಅವರಿಗೆ ಆಡಳಿತ ಮಂಡಳಿ ಸದಸ್ಯರು ಹಾಗೂ ಸಹಕಾರ ಕ್ಷೇತ್ರದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

RELATED NEWS

You cannot copy contents of this page