ಕಾಸರಗೋಡು: ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂ ಡರಿ ಶಾಲೆಯಲ್ಲಿ ಕಿರಿಯ ವಿದ್ಯಾರ್ಥಿ ಗಳಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ೧೦ನೇ ತರಗತಿಯ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ಅಮಾನ ತುಗೊಳಿಸಿ ಮುಖ್ಯೋ ಪಾಧ್ಯಾಯ ಕ್ರಮ ಕೈಗೊಂಡಿದ್ದಾರೆ. ಈ ನಾಲ್ವರು ವಿದ್ಯಾರ್ಥಿಗಳು ೯ನೇ ತರಗತಿಯ ವಿದ್ಯಾರ್ಥಿಗಳಿಗೆ ಹಲ್ಲೆಗೈದು ಗಾಯ ಗೊಳಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಕುಂಬಳೆ ಪೊಲೀಸರು ಅಮಾನತಿಗೊಳಗಾದ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಚೈಲ್ಡ್ ಪ್ರೊಟೆಕ್ಟ್ ಆಫೀಸರ್‌ಗೆ ಎಸ್‌ಬಿಆರ್ ( ಸೋಶ್ಯಲ್ ಬ್ಯಾಕ್ ಗ್ರೌಂಡ್ ರಿಪೋರ್ಟ್) ಸಲ್ಲಿಸುವು ದಾಗಿ ಪೊಲೀಸರು ತಿಳಿಸಿದ್ದಾರೆ.






