ವೈದ್ಯರಿಗೆ ಹಲ್ಲೆ : ಇಬ್ಬರ ಸೆರೆ

ಉಪ್ಪಳ: ವೈದ್ಯರಿಗೆ ಹಲ್ಲೆಗೈದು ಗಾಯಗೊಳಿಸಿದ ಪ್ರಕರಣದಲ್ಲಿ ಆರೋಪಿಗಳಾದ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಕೋಡಿಬೈಲು ನಿವಾಸಿ ಉಮ್ಮರ್ (45), ಈತನ ಸಹೋದರ ಕೋಡಿಬೈಲು ಅಡ್ಕತ್ತೊಟ್ಟಿಯ ಹೈದರಾಲಿ (33) ಎಂಬಿವರು ಬಂಧಿತ ಆರೋಪಿಗಳಾ ಗಿದ್ದಾರೆ.

 ಉಪ್ಪಳ ರೈಲು ನಿಲ್ದಾಣ ರಸ್ತೆಯ ದೇವಿಪ್ರಸಾದ್ ಮಾವೆ ಆಸ್ಪತ್ರೆಯ ವೈದ್ಯ ಕುಮಾರ್ ಶಾಶ್ವತ್(೪೨)ರಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸ ಲಾಗಿದೆ.  ಈ ತಿಂಗಳ 4ರಂದು ರಾತ್ರಿ 8.30ಕ್ಕೆ ಆಸ್ಪತ್ರೆ ಆವರಣ ದೊಳಗೆ ಆರೋಪಿಗಳು ವೈದ್ಯರಿಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ.

You cannot copy contents of this page