ಪೊಲೀಸರ ಮೇಲೆ ಹಲ್ಲೆ:ಇಬ್ಬರ ಬಂಧನ

ಕಾಸರಗೋಡು: ಕಾಸರಗೋಡು ಕೆಎಸ್‌ಆರ್‌ಟಿಸಿ ಸ್ ನಿಲ್ದಾಣ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾ ಚರಿಸುವ ಮಲೆನಾಡ್ ಕಫೆ ಹೋಟೆಲ್‌ನಲ್ಲಿ  ಘರ್ಷಣೆ ನಡೆಯುತ್ತಿದೆಯೆಂಬ ಮಾಹಿತಿ ಯಂತೆ ಅಲ್ಲಿಗೆ ತಲುಪಿದ ಪೊಲೀಸರ ಮೇಲೆ ಹಲ್ಲೆಗೈದುದಾಗಿ ದೂರ ಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಅಶೋಕನಗರ ಮುನ್ಸಿಪಲ್ ಕ್ವಾರ್ಟರ್ಸ್‌ನ ಸುಧೀಶ್ (42), ಕಾಞಂಗಾಡ್ ಕುಶಾಲನಗರದ ದೇವಿಪ್ರಸಾದ್ (37) ಎಂಬಿವರನ್ನು ಕಾಸರಗೋಡು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊನ್ನೆ ಸಂಜೆ 6 ಗಂಟೆ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಸ್ ನಿಲ್ದಾಣದ ಹೋಟೆಲ್‌ನಲ್ಲಿ ಘರ್ಷಣೆ ನಡೆಯುತ್ತಿದೆಯೆಂಬ ಮಾಹಿತಿಯಂತೆ ಎಸ್‌ಐಗಳಾದ  ನೆಜಿಲ್‌ರಾಜ್ ಎಂ, ರಾಜನ್, ಸುಭಾಷ್ ಎಂಬಿವರು ಅಲ್ಲಿಗೆ ತಲುಪಿದ್ದರು. ಅಕ್ರಮಿಗಳನ್ನು ಹಿಂಜರಿಸಲು ಪ್ರಯತ್ನಿಸುತ್ತಿದ್ದಾಗ ಪೊಲೀಸ್ ಅಧಿಕಾರಿಗಳ  ಸಮವಸ್ತ್ರವನ್ನು ಹಿಡಿದೆಳೆದು ಹಲ್ಲೆಗೈದಿರುವುದಾಗಿ ದೂರಲಾಗಿದೆ. ಸೆರೆಗೀಡಾದ ಇಬ್ಬರ ವಿರುದ್ಧ ಹೋಟೆಲ್ ಮಾಲಕ ನೀಡಿದ ದೂರಿನಂತೆ ಇನ್ನೊಂದು ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page