ಮಂಜೇಶ್ವರ: ಮೀಂಜ ಬಟ್ಯಪದವಿ ನಲ್ಲಿ ಗುಂಡು ಹಾರಿಸಿ ವ್ಯಾಪಾರಿಯನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋ ಪಿಗಳಿಗಾಗಿ ಪೊಲೀಸರು ತನಿಖೆ ತೀವ್ರಗೊ ಳಿಸಿದ್ದಾರೆ. ಖಾದರ್ ಮದನಕ್ಕಲ್, ಮೀಯಪದವು ರಹೀಂ, ಅಬೂಬಕ್ಕರ್ ಸಿದ್ದಿಕ್ ಹಾಗೂ ಕಂಡರೆ ಪತ್ತೆಹಚ್ಚಬಹು ದಾದ ಇನ್ನೋರ್ವನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಕರ್ನಾಟಕಕ್ಕೆ ಪರಾರಿ ಯಾದ ಬಗ್ಗೆ ಮಾಹಿತಿ ಲಭಿಸಿ ದ್ದು, ಈ ಹಿನ್ನೆಲೆಯಲ್ಲಿ ತನಿಖೆಯನ್ನು ಅತ್ತ ವಿಸ್ತರಿಸಲಾಗಿದೆಯೆಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಮಧ್ಯಾಹ್ನ 12 ಗಂಟೆ ವೇಳೆ ಬಟ್ಯಪದವಿನಲ್ಲಿ ಗುಂಡು ಹಾರಾಟ ಘಟನೆ ನಡೆದಿದೆ. ಆಲ್ಟೋ ಕಾರಿನಲ್ಲಿ ತಲುಪಿದ ತಂಡ ಅಲ್ಲಿನ ಎಎಸ್ ಜನರಲ್ ಸ್ಟೋರ್ ಮಾಲಕನೂ ಬಟ್ಯಪದವು ಬೊಂಬಾಯಿ ಕ್ವಾರ್ಟರ್ಸ್ ನಿವಾಸಿಯಾದ ಶುಹೈಬ್ ಮೊಯೀನ್ ಶೇಕ್ (28) ಎಂಬವರಿಗೆ ಹಲ್ಲೆಗೈದಿದೆ. ಅನಂತರ ಶುಹೈಬ್ ಮೊಯೀನ್ ಶೇಕ್ರಿಗೆ ಆರೋಪಿಗಳು ಗುಂಡು ಹಾರಿಸಿದ್ದಾರೆ. ಆದರೆ ಗುಂಡು ತಗಲಿದೆ ಶುಹೈಬ್ ಮೊಯೀನ್ ಶೇಕ್ ಕೂದಲೆಳೆ ಅಂತರದಿಂದ ಅಪಾಯ ದಿಂದ ಪಾರಾಗಿದ್ದಾರೆ.
ಕೌಟುಂಬಿಕ ಸಮಸ್ಯೆಗೆ ಸಂಬಂಧಿಸಿ ಕೆಲವು ದಿನಗಳ ಹಿಂದೆ ಶುಹೈಬ್ ಮೊಯೀನ್ ಶೇಕ್ ಹಾಗೂ ಮಚ್ಚಂಪಾಡಿ ನಿವಾಸಿಯ ಮಧ್ಯೆ ವಿವಾದವುಂಟಾಗಿತ್ತೆನ್ನ ಲಾಗಿದೆ. ಇದೇ ಕಾರಣದಿಂದ ನಿನ್ನೆ ಮಧ್ಯಾಹ್ನ ತಂಡ ಬಟ್ಯಪದವಿಗೆ ತಲುಪಿ ಶುಹೈಬ್ರಿಗೆ ಹಲ್ಲೆಗೈದು ಗುಂಡು ಹಾರಿಸಿರುವುದಾಗಿ ಹೇಳಲಾಗುತ್ತಿದೆ. ಅಲ್ಪ ಬಿಡುವಿನ ಬಳಿಕ ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ಗುಂಡು ಹಾರಾಟ ಪ್ರಕರಣ ನಡೆದಿರುವುದು ಈ ಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳನ್ನು ಸೆರೆಹಿಡಿಯಲು ವ್ಯಾಪಕ ಕಾರ್ಯಾಚರಣೆ ಆರಂಭಿಸಿದ್ದಾರೆ.






