ಹೊಸದುರ್ಗ: ಕರಾಟೆ ಕಲಿಯಲು ಬಂದ 14ರ ಹರೆಯದ ಬಾಲಕಿಗೆ ತರಬೇತುದಾರ ಕಿರುಕುಳ ನೀಡಲೆತ್ನಿಸಿದ ಬಗ್ಗೆ ದೂರಲಾಗಿದೆ. ಈ ಸಂಬಂಧ ತರಬೇತುದಾರನಾದ ಮುರಾಳ ಎಂಬಲ್ಲಿನ ಟಿ.ಕೆ. ಪ್ರಸನ್ನ ಎಂಬಾತನ ವಿರುದ್ಧ ತಳಿಪರಂಬ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ತಳಿಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಯಾದ ಬಾಲಕಿಗೆ ಈತ ಕಳೆದ ಜನವರಿ ತಿಂಗಳಲ್ಲಿ ವಳ್ಳಕ್ಕೀಲ್ ಪಾರ್ಕ್‌ನಲ್ಲಿ ಕಿರುಕುಳ ನೀಡಲೆತ್ನಿಸಿ ರುವುದಾಗಿ ಆರೋಪಿಸಲಾಗಿದೆ.







