ಅಧಿಕೃತ ಕಾರ್ಯಕ್ರಮಗಳಲ್ಲಿ ತ್ಯಾಜ್ಯಮುಕ್ತ ಪ್ರತಿಜ್ಞೆ

ತಿರುವನಂತಪುರ: ತ್ಯಾಜ್ಯಮುಕ್ತ ನವಕೇರಳಂ ಯೋಜನೆ ಅಂಗವಾಗಿ ಇಂದಿನಿಂದ ಎಲ್ಲಾ ಅಧಿಕೃತ ಕಾರ್ಯ ಕ್ರಮಗಳನ್ನು ತ್ಯಾಜ್ಯಮುಕ್ತ ಪ್ರತಿಜ್ಞೆಯೊಂದಿಗೆ ಆರಂಭಿಸುವಂತೆ ಸರಕಾರ ನಿರ್ದೇಶ ಹೊರಡಿಸಿದೆ. ಇದಕ್ಕೆ ಇಂದು ಎರ್ನಾಕುಳಂ ಜನರಲ್ ಆಸ್ಪತ್ರೆಯ ಕ್ಯಾನ್ಸರ್ ಬ್ಲೋಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಪ್ರತಿಜ್ಞೆ ನುಡಿದು ಚಾಲನೆ ನೀಡಲಿದ್ದಾರೆ. ತ್ಯಾಜ್ಯ ನಿರ್ಮೂಲನೆಯ ಎರಡನೇ ಹಂತದ ಕಾರ್ಯಕ್ರಮಗಳೂ ಇಂದು ಆರಂಭಗೊಂಡಿದೆ.

ದೇಲಂಪಾಡಿ ಶ್ರೀ ಅಯ್ಯಪ್ಪ ದೀಪೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮುಳ್ಳೇರಿಯ: ದೇಲಂಪಾಡಿ ಶ್ರೀ ಧರ್ಮಶಾಸ್ತ ಭಜನಾ ಮಂದಿರದಲ್ಲಿ ನವಂಬರ್ ನಲ್ಲಿ ನಡೆಯಲಿರುವ ಶ್ರೀ ಅಯ್ಯಪ್ಪ ದೀಪೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಲಾಯಿತು. ದೀಪೋತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ್ ನಾಯರ್ ಅಧ್ಯಕ್ಷತೆ ವಹಿಸಿದರು. ಧಾರ್ಮಿಕ ಮುಂದಾಳು, ಉದ್ಯಮಿ ಬಿ. ವಸಂತ ಪೈ ಬದಿಯಡ್ಕ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕುಂಬಡಾಜೆ ಪಂ. ಸದಸ್ಯ ಸಂಜೀವ ಶೆಟ್ಟಿ ಮೊಟ್ಟಕುಂಜೆ , ಬ್ಲಾಕ್ ಪಂಚಾಯತ್ ಸದಸ್ಯೆ ಯಶೋಧ, ಕಾರಡ್ಕ ಪಂಚಾಯತ್ ಉಪಾಧ್ಯಕ್ಷೆ ಜನನಿ ಎಂ, ಸದಸ್ಯ ಸಂತೋಷ್ ಸಿ.ಎಂ , ಗುರುಸ್ವಾಮಿ ವಿಠಲಶೆಟ್ಟಿ, …

ಬಿಜೆಪಿ ಪಾಳಯಕ್ಕೆ ಸೇರಿದ ಜೆ.ಡಿ (ಎಸ್) ಎಡರಂಗದಲ್ಲಿ  ಮುಂದುವರಿಯುವಂತಿಲ್ಲ-ಸಿಪಿಎಂ ಮುನ್ನೆಚ್ಚರಿಕೆ

ತಿರುವನಂತಪುರ: ಎಚ್.ಡಿ. ದೇವೇಗೌಡ ಸಾರಥ್ಯದ ಜೆಡಿ(ಎಸ್) ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ದಲ್ಲಿ ಸೇರ್ಪಡೆಗೊಂಡಿರುವ ಹಿನ್ನೆಲೆ ಯಲ್ಲಿ ಆ ಪಕ್ಷದ ಕೇರಳ ಘಟಕ ಕೇರಳ ದಲ್ಲಿ ಎಡರಂಗದ ಘಟಕ ಪಕ್ಷವಾಗಿ ಇನ್ನು ಮುಂದುವರಿಯುವಂತಿಲ್ಲವೆಂದು ಸಿಪಿಎಂ ಸ್ಪಷ್ಟಪಡಿಸಿದೆ. ಈ ವಿಷಯದಲ್ಲಿ ತುರ್ತಾಗಿ ಪರಿಹಾರ ಮಾರ್ಗ ಕಂಡುಕೊಳ್ಳಬೇಕಾಗಿದೆಯೆಂಬ ನಿರ್ದೇ ಶವನ್ನು ಜೆಡಿಎಸ್‌ನ ಕೇರಳ ಘಟಕಕ್ಕೆ ಸಿಪಿಎಂ ನೀಡಿದೆ. ಕೇರಳದಲ್ಲಿ ಈಗ ಎನ್‌ಡಿಎ-ಎಡರಂಗ ಮೈತ್ರಿ ಕೂಟ ಆಳುತ್ತಿದೆ ಎಂದು ಯುಡಿಎಫ್ ಆರೋಪಿಸಿ ರಂಗಕ್ಕಿಳಿದಿದ್ದು ಅದರಿಂದಾಗಿ ಸಿಪಿಎಂ ಜೆಡಿಎಸ್‌ಗೆ ಈ ತುರ್ತು ನಿರ್ದೇಶ …

ತ್ಯಾಜ್ಯ ಸಂಗ್ರಹಕ್ಕೆ ಕುಂಬಳೆಯಲ್ಲೊಂದು ಸರಕಾರಿ ಕಚೇರಿ ಕಟ್ಟಡ

ಕುಂಬಳೆ: ಕೃಷಿ ಇಲಾಖೆ ಅಸಿ. ಡೈರೆಕ್ಟರ್ ಕಚೇರಿಗೆ ಕುಂಬಳೆ ಪಂಚಾಯತ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಕೊಡುಗೆಯಾಗಿ ಒಪ್ಪಿಸಿದೆ. ಶುಚಿತ್ವದ ಮಹತ್ವ ತಿಳಿಸುವ ತ್ರಿಸ್ತರ ಸ್ಥಳೀಯಾಡಳಿತ ಸಂಸ್ಥೆಗಳ  ಮುಖ್ಯಸ್ಥರು, ಜಿಲ್ಲಾ ಅಧಿಕಾರಿಗಳು ಪರಿಶುದ್ಧತೆಯ ಕಾವಲುಗಾರರಾದ ಸರಕಾರಿ ವಿಭಾಗಗಳು ಹಾಗೂ ಸರಕಾರ ಅದಕ್ಕೆ ಕಾವಲು ನಿಂತಿದೆ. ಶೇಡಿಕಾವ್‌ನಲ್ಲಿ ಇತ್ತೀಚೆಗಿನವರೆಗೆ ಕಾರ್ಯಾಚರಿಸಿದ್ದ ಅಗ್ರಿಕಲ್ಚರ್ ಅಸಿ. ಡೈರೆಕ್ಟರ್  ಕಚೇರಿಯ ಪ್ರವೇಶದ್ವಾರ, ಮುಂಭಾಗದಲ್ಲಿ ಮಾತ್ರವಲ್ಲದೆ ಕಚೇರಿಯೊಳಗೂ ತ್ಯಾಜ್ಯವನ್ನು ರಾಶಿಹಾಕಿರುವುದು ಕಂಡುಬರುತ್ತಿದೆ. ರಾಷ್ಟ್ರಪಿತ ಮಹಾತ್ಮಾಗಾಂಧಿಯವರ ಜನ್ಮ ದಿನಾಚರಣೆಗೆ ಇನ್ನೊಂದು ದಿನ ಮಾತ್ರ ಬಾಕಿಯಿರುವಾಗಲೇ ಸರಕಾರಿ ಕಚೇರಿ ಯೊಳಗೆ …

ನಾರಂಪಾಡಿ ನಿವಾಸಿ ಮಹಿಳೆ, ಪುತ್ರನ ದರೋಡೆ: ಆರು ಮಂದಿ ಆರೋಪಿಗಳ ಬಂಧನ

ಕಾಸರಗೋಡು: ಬದಿಯಡ್ಕ ಬಳಿಯ ನಾರಂಪಾಡಿ ನಿವಾಸಿಯಾದ ಕಸ್ತೂರಿ ರೈ, ಅವರ ಪುತ್ರ ಕರ್ನಾಟಕದ ಸುಳ್ಯಪದವು ಸಮೀಪ ಕುದ್ಕಾಡಿ ತೋಟದ ಮೂಲೆಯಲ್ಲಿ ವಾಸಿಸುವ ಗುರುಪ್ರಸಾದ್ ರೈ ಎಂಬಿವರಿಗೆ ಕೋವಿ ತೋರಿಸಿ ಬೆದರಿಕೆಯೊಡ್ಡಿ ಚಿನ್ನಾಭರಣ ಹಾಗೂ ಹಣ ದರೋಡೆ ನಡೆಸಿದ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಬಳಿಯ ಮಂಜಲ್ತೋಡಿ ನಿವಾಸಿ ಕಿರಣ್ ಟಿ, ಶೇಣಿ ಗ್ರಾಮದ ಹೊಸಗದ್ದೆ ನಿವಾಸಿ ವಸಂತ್ ಎಂ, ಎಡನಾಡು ಗ್ರಾಮದ ಸೀತಾಂಗೋಳಿ ರಾಜೀವ ಗಾಂಧಿ ಕಾಲನಿ ನಿವಾಸಿಗಳಾದ ಮಹಮ್ಮದ್ ಫೈಝಲ್, …

ಪೈಂಟಿಂಗ್ ಕಾರ್ಮಿಕ ಸಾವನ್ನಪ್ಪಿದ ಪ್ರಕರಣ: ನೆರೆ ಮನೆ ನಿವಾಸಿ ಸೆರೆ

ಕಾಸರಗೋಡು:  ಕೇಳುಗುಡ್ಡೆ ಅಯ್ಯಪ್ಪನಗರ ನಿವಾಸಿ ಪೈಂಟಿಂಗ್ ಕಾರ್ಮಿಕ ಸದಾನಂದ (೬೪)ಎಂಬವರು  ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಅವರ ನೆರೆಮನೆ ನಿವಾಸಿಯನ್ನು ಕಾಸರಗೋಡು ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ಬಂಧಿಸಿದ್ದಾರೆ. ಕೇಳುಗುಡ್ಡೆ ಅಯ್ಯಪ್ಪ ನಗರದ ಲಕ್ಷ್ಮಿ ನಿವಾಸದ ಕೆ. ಸೂರಜ್ (೩೬) ಎಂಬಾತ ಬಂಧಿತನಾದ ಆರೋಪಿ. ಈತ ಪೈಂಟಿಂಗ್ ಕಾರ್ಮಿಕನಾಗಿದ್ದಾನೆ. ಈತನನ್ನು ಇಂದು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ (೧) ನ್ಯಾಯಾಲಯದಲ್ಲಿ ಹಾಜರುಪಡಿಸ ಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ ೨೬ರಂದು ರಾತ್ರಿ ಕೇಳುಗುಡ್ಡೆಯಲ್ಲಿ ಸದಾನಂದ ಹಾಗೂ ಸೂರಜ್ …

ತಲೆಮರೆಸಿಕೊಂಡಿದ್ದ ಪೋಕ್ಸೋ ಆರೋಪಿ ಸೆರೆ

ಮುಳ್ಳೇರಿಯ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿ ಆದೂರು ಠಾಣೆಯಲ್ಲಿ ಕೇಸು ದಾಖ ಲಿಸಲಾಗಿದ್ದ ಕಣ್ಣೂರು  ಚಪ್ಪಾರ ಪದವ್ ಪುದಿಯಪುರಯಿಲ್ ವೀಡ್ ಬಿನು ಯಾನೆ ವೆಳ್ಳಿಂಬಿನು ವನ್ನು ಆದೂರು ಪೊಲೀಸರು ಸೆರೆಹಿಡಿದರು. ಕಳೆದ ಒಂದು ವರ್ಷದಿಂದ ಈತ ತಲೆಮರೆಸಿಕೊಂ ಡಿದ್ದ ರಹಸ್ಯ ಮಾಹಿತಿಯಂತೆ ಆದೂರು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಬಾಲು ಬಿ ನಾಯರ್ ನೇತೃತ್ವದಲ್ಲಿ ಮೀಯ ಪದವಿನಿಂದ ಸೆರೆಹಿಡಿಯಲಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾ ಚರಣೆಯಲ್ಲಿ ಸಿಪಿಒಗಳಾದ ರಜೀಶ್, ಉತ್ತೇಶ್ ಸಹಕರಿಸಿದ್ದರು. ಆರೋಪಿ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಕುಂಬಳೆ: ೪.೯೧೮ ಗ್ರಾಂ ಎಂಡಿಎಂಎ ವಶ: ಯುವಕ ಸೆರೆ

ಕಾಸರಗೋಡು: ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್ಸ್‌ಪೆಕ್ಟರ್ ಶಂಕರ್ ಜಿ.ಎ. ಅವರ ನೇತೃತ್ವದ ತಂಡ ಕುಂಬಳೆ ರೈಲು ನಿಲ್ದಾಣ ಪರಿಸರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ೪.೯೧೮ ಗ್ರಾಂ ಎಂಡಿಎಂಎ ಮಾದಕ ದ್ರವ್ಯ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಕುಂಬಳೆ ಕೊಪಾಡಿ ಮುಂಡಪಳ್ಳಂ ನಿವಾಸಿ ರೂಪೇಶ್ ಎಸ್. (೨೨) ಎಂಬಾತನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಎಸ್‌ಡಿಪಿಎಸ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ದಂಧೆಯಲ್ಲಿ ಇನ್ನೂ …

ಕಾಸರಗೋಡು ನಿವಾಸಿಯ ಕಾರಿನಲ್ಲಿ ಸಾಗಿಸುತ್ತಿದ್ದ ೧.೭೫ ಕೋಟಿ ರೂ. ಕಾಳಧನ ವಶ: ಓರ್ವ ಸೆರೆ, ಇನ್ನೋರ್ವ ಪರಾರಿ

ಕಾಸರಗೋಡು: ಕಾಸರಗೋಡು ನಿವಾಸಿಯ ಕಾರಿನಲ್ಲಿ ಸರಿಯಾದ ದಾಖಲು ಪತ್ರಗಳಿಲ್ಲದೆ ಸಾಗಿಸಲಾಗುತ್ತಿದ್ದ ೧.೭೫ ಕೋಟಿ ರೂ.ವನ್ನು ತಲಶ್ಶೇರಿಯಿಂದ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮಹಾರಾಷ್ಟ್ರ ಸಾಂಗ್ಲಿ ನಿವಾಸಿ ಸ್ವಪ್ಲಿನ್ ಲಕ್ಷ್ಮಣ್ (೨೭) ಎಂಬಾತನನ್ನು ಬಂಧಿಸಲಾಗಿದೆ. ಆ ವೇಳೆ   ಕಾರಿನಲ್ಲಿದ್ದ ಓರ್ವ ಪೊಲೀಸರ ಕೈಗೆ ಸಿಲುಕದೆ ತಪ್ಪಿಸಿಕೊಂಡಿದ್ದಾನೆ. ಮಾಲು ಪತ್ತೆಯಾದ ಕಾರು ಕಾಸರಗೋಡು ಕ್ಲಾಯಿಕ್ಕೋಡು ನಿವಾಸಿಯದ್ದಾಗಿದೆ ಎಂಬುವುದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಅದರಿಂದಾಗಿ ಆ ಕಾರು ಮಾಲಕನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಲಾದ ಹಣ …

ಕಾಲೇಜು ಚುನಾವಣೆ : ೧೧ ಕಾಲೇಜು ಎಸ್‌ಎಫ್‌ಐಗೆ, ೮ ಕೆಎಸ್‌ಯು ಮೈತ್ರಿ, ೨ ಎಬಿವಿಪಿಗೆ

ಕಾಸರಗೋಡು: ಕಾಲೇಜು ಯೂನಿ ಯನ್ ಚುನಾವಣೆಯಲ್ಲಿ ೧೯ ಕಾಲೇಜು ಗಳಲ್ಲಿ ೧೧ ಕಾಲೇಜುಗಳಲ್ಲೂ ಎಸ್ ಎಫ್‌ಐ ಗೆದ್ದಿದೆ. ೬ ಕಾಲೇಜುಗಳಲ್ಲಿ ಕೆಎಸ್‌ಯು-ಎಂಎಸ್‌ಎಫ್ ಮೈತ್ರಿಕೂಟ ಜಯಗಳಿಸಿದೆ. ಮುನ್ನಾಡ್ ಪೀಪಲ್ಸ್, ಪೆರಿಯ ಎಸ್.ಎನ್, ಕಾಞಂಗಾಡು ನೆಹರೂ ಎಂಬೆಡೆಗಳಲ್ಲಿ ಸಂಪೂರ್ಣ ಸೀಟ್ ನಲ್ಲೂ ಎಸ್‌ಎಫ್‌ಐ ಜಯಗಳಿಸಿದೆ. ನೆಟ್ಟಣಿಗೆ ಬಜ ಕಾಲೇಜಿನಲ್ಲಿ ೭ ಸೀಟು, ಉದುಮ ಕಾಲೇಜಿನಲ್ಲಿ ೧೫ರಲ್ಲಿ ೧೩ ಎಸ್‌ಎಫ್‌ಐ ಜಯಗಳಿಸಿದೆ. ಎಳೇರಿ ತಟ್ಟ್, ಕರಿಂದಳಂ, ಪಳ್ಳಿಪಾರ ಐಎಚ್ ಆರ್‌ಡಿ, ನೀಲೇಶ್ವರ ಪಿ.ಕೆ. ರಾಜನ್ ಸ್ಮಾರಕ, ಮಡಿಕೈ ಕಾಲಿಚ್ಚಾನಡ್ಕಂದಲ್ಲೂ ಎಸ್‌ಎಫ್‌ಐ ಜಯಗಳಿಸಿದೆ. …