ದೇಲಂಪಾಡಿ ಶ್ರೀ ಅಯ್ಯಪ್ಪ ದೀಪೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮುಳ್ಳೇರಿಯ: ದೇಲಂಪಾಡಿ ಶ್ರೀ ಧರ್ಮಶಾಸ್ತ ಭಜನಾ ಮಂದಿರದಲ್ಲಿ ನವಂಬರ್ ನಲ್ಲಿ ನಡೆಯಲಿರುವ ಶ್ರೀ ಅಯ್ಯಪ್ಪ ದೀಪೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಲಾಯಿತು. ದೀಪೋತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ್ ನಾಯರ್ ಅಧ್ಯಕ್ಷತೆ ವಹಿಸಿದರು. ಧಾರ್ಮಿಕ ಮುಂದಾಳು, ಉದ್ಯಮಿ ಬಿ. ವಸಂತ ಪೈ ಬದಿಯಡ್ಕ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕುಂಬಡಾಜೆ ಪಂ. ಸದಸ್ಯ ಸಂಜೀವ ಶೆಟ್ಟಿ ಮೊಟ್ಟಕುಂಜೆ , ಬ್ಲಾಕ್ ಪಂಚಾಯತ್ ಸದಸ್ಯೆ ಯಶೋಧ, ಕಾರಡ್ಕ ಪಂಚಾಯತ್ ಉಪಾಧ್ಯಕ್ಷೆ ಜನನಿ ಎಂ, ಸದಸ್ಯ ಸಂತೋಷ್ ಸಿ.ಎಂ , ಗುರುಸ್ವಾಮಿ ವಿಠಲಶೆಟ್ಟಿ, ಕೆ.ಇ ಪಾಣೂರು, ಪುರುಷೋತ್ತಮನ್, ಮಧುಸೂದನ, ಹರಿಪ್ರಸಾದ್ ಎಂ ಎಸ್, ಚಂದು ಮಾಸ್ಟರ್ , ರಾಘವ ಕರಿಂಬುವಳಪ್ಪು, ಸಂಜೀವ ರೈ, ರಾಘವನ್ ಶುಭ ಹಾರೈಸಿದರು.ಮಂದಿರ ಸಮಿತಿ ಪದಾಧಿಕಾರಿಗಳಾದ ನಾರಾಯಣಶೆಟ್ಟಿ, ಜಿ.ಕೆ ಶೆಟ್ಟಿ, ಜಗದೀಶ್, ಕಿಶೋರ್, ಪ್ರವೀಣ್ ಕುಮಾರ್, ಭಾಸ್ಕರ, ರವಿಚಂದ್ರ ರಾವ್ ಉಪಸ್ಥಿತರಿದ್ದರು. ಪ್ರದೀಪ್ ಕೆ ವಿ ಸ್ವಾಗತಿಸಿ , ಯತೀಶ್ ಕುಮಾರ್ ರೈ ವಂದಿಸಿದರು. ಗಿರೀಶ್ ಪ್ರಾರ್ಥನೆ ಹಾಡಿದರು. ಸುರೇಶ್ ಯಾದವ್ ನಿರೂಪಿಸಿದರು. ಅಯ್ಯಪ್ಪ ತಿರುವಿಳಕ್ಕ್ ಮಹೋತ್ಸವ ಉಪಸಮಿತಿ ಅಧ್ಯಕ್ಷರು, ಸದಸ್ಯರು, ಮಾತೃ ಸಮಿತಿ ಸದಸ್ಯರು, ಕುಟುಂಬ ಶ್ರೀ ಹಾಗೂ ಸ್ಥಳೀಯ ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page