ಕೆ. ಸುರೇಂದ್ರನ್ ನ್ಯಾಯಾಲಯಕ್ಕೆ ಇಂದೂ ಹಾಜರಾಗಿಲ್ಲ

ಕಾಸರಗೋಡು:ಮಂಜೇಶ್ವರ ವಿಧಾನಸಭಾ ಚುನಾವಣೆ ವಿಷಯದಲ್ಲಿ ಆರೋಪ ಹೊಂದಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಕೇಸಿನ ವಿಚಾರಣೆ ನಡೆಯುವ ನ್ಯಾಯಾಲ ಯಕ್ಕೆ ಇಂದೂ ಹಾಜರಾಗಲು ಸಾಧ್ಯತೆ ಇಲ್ಲ. ಜಿಲ್ಲಾ ಸೆಷನ್ಸ್ ನ್ಯಾಯಾಲಯ ಕೆ. ಸುರೇಂದ್ರನರಿಗೆ ಇಂದು ಹಾಜರಾಗಬೇಕೆಂದು ನಿರ್ದೇಶ ನೀಡಿತ್ತು. ಆದರೆ ಕೆಲವು ಕಾರಣಾಂತರಗಳಿಂದ ಇಂದು ಸುರೇಂದ್ರನ್ ಬಹುತೇಕ ಹಾಜರಾಗುವ ಸಾಧ್ಯತೆ ಇಲ್ಲ. ನ್ಯಾಯಾಲಯದಲ್ಲಿ ಮಧ್ಯಾಹ್ನವರಗೆ ಅವರು ಹಾಜರಾಗಿಲ್ಲ.

ಆಸ್ಪತ್ರೆಗೆಂದು ಹೊರಟ ವ್ಯಕ್ತಿ ರೈಲುಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಆಸ್ಪತ್ರೆಗೆ ತೆರಳುವುದಾಗಿ ತಿಳಿಸಿ ಮನೆಯಿಂದ ಹೊರಟ ವ್ಯಕ್ತಿ ರೈಲು ಹಳಿ ಸಮೀಪ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರೈಲಿನಿಂದ ಬಿದ್ದು ಮೃತಪಟ್ಟಿರಬಹುದೆಂದು ಸಂಶಯಿಸಲಾಗುತ್ತಿದೆ. ಕರ್ನಾ ಟಕದ ಸಕಲೇಶಪುರ ಬೆಳಕಾಡುವಿನ ರಾಜು (೭೫) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ಮೊಗ್ರಾಲ್ ಸೇತುವೆ ಸಮೀಪ ರಾಜುವಿನ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ತಲುಪಿದ ಸಂಬಂಧಿಕರು ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಿದ್ದಾರೆ. ನಿನ್ನೆ ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿ ರಾಜು ಮನೆಯಿಂದ ಹೊರ ಟಿದ್ದರೆಂದೂ,  ಅಲ್ಲಿಂದ ಯಾಕಾಗಿ ಕಾಸರಗೋಡು …

ಮಹಿಳಾ ಮೀಸಲಾತಿ ಮಸೂದೆ: ಇಬ್ಬರಿಂದ ವಿರೋಧ

ನವದೆಹಲಿ: ಬಹು ನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆ ಭಾರೀ ಬಹುಮತದಿಂದ ಲೋಕಸಭೆ ನಿನ್ನೆ ಅಂಗೀಕರಿಸಿದೆ. ೪೫೪ ಮತಗಳು ಮಸೂದೆಯಪರವಾಗಿ ಚಲಾಯಿಸಲ್ಪಟ್ಟರೆ, ಎರಡು ಮತಗಳು ಮಾತ್ರವೇ ವಿರುದ್ಧವಾಗಿ ಚಲಾಯಿಸಲ್ಪಟ್ಟಿದೆ. ಎಐಎಂಐಎಂ ಪಕ್ಷದ ವರಿಷ್ಠ ನೇತಾರ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮತ್ತು ಅದೇ ಪಕ್ಷದ ಔರಂಗಾಬಾದ್ ಲೋಕಸಭಾ ಕ್ಷೇತ್ರದ ಸಂಸದ ಇಮ್ತಿಯಾಸ್ ಜಲೀಲ್ ಸಯ್ಯದ್ ಎಂಬಿವರು ಮಸೂದೆ ವಿರುದ್ಧ ಮತ ಚಲಾಯಿಸಿದ್ದಾರೆ. ಮಹಿಳಾ ಮೀಸಲಾತಿ ವಿಧೇಯಕವನ್ನು ತಾವು ವಿರೋಧಿಸುವುದಾಗಿ ಆಲ್ ಇಂಡಿಯಾ ಮಜ್ಲಿಸ್-ಎ- ಇತ್ತಿಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮಸೂದೆ …

ಪೈವಳಿಕೆ ಪಂಚಾಯತ್ ಎರಡನೇ ವಾರ್ಡ್ ಸದಸ್ಯೆ ರಾಜೀನಾಮೆ

ಕುಂಬಳೆ: ಸಿಪಿಎಂ ನೇತೃತ್ವವನ್ನು ಬೆಚ್ಚಿ ಬೀಳಿಸಿ ಸಿಪಿಎಂನ ಶಕ್ತಿ ಕೇಂದ್ರ ವಾದ ಪೈವಳಿಕೆ ಪಂಚಾಯತ್‌ನ ಸಿರಂ ತಡ್ಕ ವಾರ್ಡ್‌ನಲ್ಲಿ ಗೆಲುವು ಸಾಧಿಸಿದ ಮುಸ್ಲಿಂ ಲೀಗ್‌ನ ಪಂಚಾಯತ್ ಸದಸ್ಯೆ ರಾಜೀನಾಮೆ ನೀಡಿದ್ದಾರೆ. ಎರಡನೇ ವಾರ್ಡ್ ಸದಸ್ಯೆಯಾದ ಸಿಯಾಸುನ್ನಿಸ ಎಂಬವರು ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ಪತ್ರವನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಪಂಚಾಯತ್ ಸೆಕ್ರೆಟರಿಗೆ ಕಳುಹಿ ಸಿಕೊಟ್ಟಿದ್ದಾರೆ. ಹಲವು ಕಾಲದಿಂದ ಪೈವಳಿಕೆ ಪಂಚಾಯತ್‌ನ ಸಿರಂತಡ್ಕ ವಾರ್ಡ್‌ನಲ್ಲಿ ಸಿಪಿಎಂ ಅಭ್ಯರ್ಥಿ ಗೆಲುವು ಸಾಧಿಸಿ ಪಂಚಾಯತ್ ಆಡಳಿತಸಮಿತಿಗೆ ತಲುಪುತ್ತಿದ್ದರು. ಕಳೆದ ಚುನಾವಣೆಯಲ್ಲಿ ಎಡರಂಗದಲ್ಲಿ …

ಅಂಗಡಿಗೆ ತಲುಪಿ ಮಹಿಳೆಯ ಸರ ಎಗರಿಸಿ  ಪರಾರಿಯಾದ ಇಬ್ಬರು ಆರೋಪಿಗಳು ಸೆರೆ

ಕಾಸರಗೋಡು: ಅಂಗಡಿಗೆ ತಲುಪಿ ನೀರು ಖರೀದಿಸಿದ ಬಳಿಕ ಅಂಗಡಿಯ ಮಾಲಕನ ಪತ್ನಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾದ ಇಬ್ಬರು ಆರೋಪಿ ಗಳು ಸೆರೆಗೀಡಾಗಿದ್ದಾರೆ. ಕೋಟಿ ಕುಳಂ ವಿಲ್ಲೇಜ್ ವೆಡಿತ್ತರಕ್ಕಾಲ್‌ನ ಫಾತಿಮ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಮುಹಮ್ಮದ್ ಇಜಾಸ್ ಎಂ.ಕೆ. (೨೪), ಪನಯಾಲ್ ವಿಲ್ಲೇಜ್ ಪಾಕಂ ಚೇರ್ಕಪ್ಪಾರ ಹಸ್ನ ಮಂಜಿಲ್‌ನ ಇಬ್ರಾಹಿಂ ಬಾದುಶ (೨೪) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗೆಳ ೧೦ರಂದು ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಮಡಿಕೈ ಚದುರಕ್ಕಿಣರ್ ಎಂಬಲ್ಲಿನ ಅಂಗಡಿಗೆ ತಲುಪಿದ …

ಬೈಕ್‌ನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ವಶ: ಆರೋಪಿ ಸೆರೆ

ಕಾಸರಗೋಡು: ಬೈಕ್‌ನಲ್ಲಿ ಸಾಗಿ ಸುತ್ತಿದ್ದ ೪.೨೯೭ ಗ್ರಾಂ ಮಾದಕ ದ್ರವ್ಯ ವಾದ ಎಂಡಿಎಂಎಯನ್ನು ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ಸಂಬಂಧ ಕರ್ನಾಟಕ ಪುತ್ತೂರು ಕಬಕ ವಿದ್ಯಾಪುರದ ಮುಸ್ತಫಾ ಶೇಖ್ (೩೨) ಎಂಬಾತನನ್ನು  ಬಂಧಿಸಲಾಗಿದೆ. ಈತ ಚಲಾಯಿಸುತ್ತಿದ್ದ ಕರ್ನಾಟಕ ನೋಂ ದಾವಣೆಯ ಬೈಕ್‌ನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂ ಡಿದ್ದಾರೆ. ಈತ ಕಳೆದ ಮೂರು ವರ್ಷ ದಿಂದ ಮುಳಿಯಾರು ಬೋವಿಕ್ಕಾನದ ಲ್ಲಿರುವ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದನು. ಟೈಲ್ಸ್ ಕಾರ್ಮಿಕನಾಗಿ  ದ್ದನೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಸರಗೋಡು ಅಬಕಾರಿ ರೇಂಜ್ …

ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ: ಮಲತಂದೆ ವಶಕ್ಕೆ

ಕಾಸರಗೋಡು: ಹತ್ತನೇ ತರಗತಿಯ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆಕೆಯ ಮಲತಂದೆ ವಿರುದ್ಧ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ ಬಾಲಕಿ ಯೊಂದಿಗೆ ಅನುಚಿತವಾಗಿ ವರ್ತಿಸಿ ದುದಾಗಿ ಆರೋಪಿಸಿ ಆಕೆ ನೀಡಿದ ದೂರಿನಂತೆ ಆಕೆಯ ೪೨ ವರ್ಷದ ಮಲತಂದೆ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಆತನನ್ನು ಪೊಲೀ ಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಒಣ ಗಾಂಜಾ ವಶ: ಸ್ಕೂಟರ್ ಸಹಿತ ಓರ್ವ ಸೆರೆ

ಕಾಸರಗೋಡು:  ಕಾಸರ ಗೋಡು ಎಕ್ಸೈಸ್ ಎನ್‌ಫೋರ್ಸ್ ಮೆಂಟ್ ಆಂಡ್ ಆಂಟೀ ನಾರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್‌ಸ್ಪೆಕ್ಟರ್  ಶಂಕರ್ ಜಿ.ಎ ನೇತೃತ್ವದ  ತಂಡ ನಡೆಸಿದ ವಾಹನ ತಪಾಸಣೆಯಲ್ಲಿ  ಸ್ಕೂಟರ್ ನಲ್ಲಿ ಸಾಗಿಸುತ್ತಿದ್ದ ೧೦೦ ಗ್ರಾಂ ಒಣ ಗಾಂಜಾ ಪತ್ತೆಹಚ್ಚಿ ವಶಪಡಿಸಲಾ ಗಿದೆ. ಈ ಸಂಬಂಧ ಮಧೂರು ಚೇನೆಕ್ಕೋ ಡಿನ ರಾಂಬೋ  ಅಲಿಯಾಸ್ ಅಬ್ದುಲ್ ಖಾದರ್ (೩೫) ಎಂಬಾತನನ್ನು ಬಂಧಿಸಲಾ ಗಿದೆ.  ಸ್ಕೂಟರ್‌ನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ನಗರದ ನುಳ್ಳಿಪ್ಪಾಡಿಯಲ್ಲಿ ನಿನ್ನೆ   ರಾತ್ರಿ  ಈ ಕಾರ್ಯಾಚರಣೆ ನಡೆದಿದೆ. ಈ …

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೃಹತ್ ಚಿನ್ನ ಬೇಟೆ: ಜಿಲ್ಲೆಯ ಇಬ್ಬರು ಸೆರೆ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೃಹತ್ ಚಿನ್ನ ಸಾಗಾಟ ಪತ್ತೆಹಚ್ಚಲಾಗಿದೆ. ಆರೋಪಿಗಳಾದ ಇಬ್ಬರು ಜಿಲ್ಲೆಯ ನಿವಾಸಿಗಳನ್ನು ಸೆರೆ ಹಿಡಿಯಲಾಗಿದೆ. ನಿನ್ನೆ ಬೆಳಿಗ್ಗೆ ಬಹರೈನ್‌ನಿಂದ ಬಂದ ವಿಮಾನದಲ್ಲಿನ ಪ್ರಯಾಣಿಕರಾದ ಉಪ್ಪಳ ನಿವಾಸಿ ಅಬ್ದುಲ್ ಜಲೀಲ್ ಎಂಬಾತನಿಂದ ೬೯೮ ಗ್ರಾಂ ಚಿನ್ನ ಮಿಶ್ರಿತವನ್ನು ವಶಪಡಿಸಲಾಗಿದೆ. ಕ್ಯಾಪ್ಸೂಲ್ ರೂಪದಲ್ಲಿ ಗುದದ್ವಾರದಲ್ಲಿ ಬಚ್ಚಿಟ್ಟು ಚಿನ್ನವನ್ನು ಸಾಗಿಸಲಾಗಿದೆ. ವಶಪಡಿಸಿದ ಚಿನ್ನಕ್ಕೆ ೪೧,೯೪,೯೮೦ ರೂ. ಮೌಲ್ಯ ಅಂದಾಜಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ದುಬಾಯಿಯಿಂದ ಮಂU ಳೂರಿಗಿರುವ ವಿಮಾನದಲ್ಲಿ ಸಂಚರಿಸಿದ ಕಾಸರಗೋಡು ನಿವಾಸಿ ಅಸರುದ್ದೀನ್ ನಿಂದ ೨೩೦ ಗ್ರಾಂ …

ಯುವಕರೊಳಗೆ  ಹೊಡೆದಾಟ: ಇಬ್ಬರ ಸೆರೆ

ಕುಂಬಳೆ: ಸೂರಂಬೈಲು ಬಸ್ ತಂಗುದಾಣ ಸಮೀಪ ಇಂದು ಮುಂಜಾನೆ ಹೊಡೆದಾಡುತ್ತಿದ್ದ ಇಬ್ಬರನ್ನು ಕುಂಬಳೆ ಎಸ್.ಐ. ವಿ.ಕೆ. ಅನೀಶ್ ಸೆರೆ ಹಿಡಿದಿದ್ದಾರೆ. ಸೂರಂಬೈಲು ನಿವಾಸಿಗಳಾದ ಕೃತಿಕ್ (೨೫), ಸುದೀಪ್ (೨೩) ಎಂಬಿವರು ಬಂಧಿತ ವ್ಯಕ್ತಿಗಳು. ಮುಂಜಾನೆ ೧.೩೦ರ ವೇಳೆ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮರಳುತ್ತಿದ್ದು ಈ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದನ್ನು ಕಂಡ ಎಸ್.ಐ. ಇಬ್ಬರನ್ನು ಬಂಧಿಸಿದ್ದಾರೆ.