ಸರಿಯಾದ ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ ೧೯.೬೦ ಲಕ್ಷ ರೂ. ವಶ: ಯುವಕನ ವಿರುದ್ಧ ಕೇಸು

ಕಾಸರಗೋಡು: ಸರಿಯಾದ ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಕಾಳಧನವೆಂದು ಶಂಕಿಸಲಾಗುತ್ತಿರುವ ೧೯,೬೦,೫೦೦ ರೂಪಾಯಿಯನ್ನು ಕಾಸರಗೋಡು ಪೊಲೀಸರು ಪತ್ತೆಹಚ್ಚಿ ವಶಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಕುಂಬಳೆ ಬಂಬ್ರಾಣ ಕಿದೂರು ಶಹಬಾದ್ ಮಂಜಿಲ್‌ನ ಕೆ.ಎಚ್. ಅಬೂಬಕರ್ ಸಿದ್ದಿಕ್ (೪೬) ಎಂಬಾತನನ್ನು ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ವಿಷ್ಣುಪ್ರಸಾದ್ ನೇತೃತ್ವದ ಪೊಲೀಸರು ಸೆರೆಹಿಡಿದಿದ್ದಾರೆ. ವಶಪಡಿಸಲಾದ ಮಾಲಿನಲ್ಲಿ ೫೦೦ ರೂ. ಮುಖಬೆಲೆಯ ತಲಾ ೧೦೦ರ ೩೯ ನೋಟುಗಳ ಕಂತು ಮತ್ತು ೫೦೦ ರೂ. ಮುಖಬೆಲೆಯ ೨೧ ನೋಟುಗಳನ್ನೊಳ ಗೊಂಡ ಕಂತೆಗಳು ಒಳಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ. ವಿವಿಧ …

ಯುವತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಕಾಟುಕುಕ್ಕೆ ಬಳಿ ಯುವತಿಯೋರ್ವೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾಳೆ. ಕಾಟುಕುಕ್ಕೆ ಬಳಿಯ ದಂಬೆ ಎಂಬಲ್ಲಿನ ಸೋಮಶೇಖರ ಎಂಬವರ ಪತ್ನಿ ಕವಿತ (೨೬) ಮೃತ ಯುವತಿ. ಕೃಷಿ ಕೆಲಸಕ್ಕೆ ತೆರಳಿದ್ದ ಪತಿ ಸಂಜೆ ಮನೆಗೆ ಮರಳಿದಾಗ ಕವಿತ ನಾಪತ್ತೆಯಾಗಿ ದ್ದರು. ಇದರಿಂದ ಹುಡುಕಾಡಿದಾಗ ಮನೆ ಸಮೀಪ ಮರದಲ್ಲಿ ನೇಣು ಬಿಗಿದು  ಸಾವಿಗೀಡಾದ ಸ್ಥಿತಿಯಲ್ಲಿ ಕವಿತಾ ಪತ್ತೆಯಾಗಿದ್ದಾರೆ. ಎರಡೂವರೆ ವರ್ಷಗಳ ಹಿಂದೆಯಷ್ಟೇ ಕವಿತಾರ ವಿವಾಹ ನಡೆದಿದೆ. ಇವರಿಗೆ ಕೃಪಾರ್ಚನೆ ಎಂಬ ಒಂದೂವರೆ ವರ್ಷದ ಹೆಣ್ಣು ಮಗುವಿದೆ. …

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಜಿಲ್ಲೆಗೆ ಹೆಮ್ಮೆ ತಂದ ಎರಡು ಪ್ರಶಸ್ತಿಗಳು

ಕಾಸರಗೋಡು: ೬೯ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಿಸಿದಾಗ ಕನ್ನಡಕ್ಕೆ ಲಭಿಸಿದ ಮಾನ್ಯತೆಯಿಂದ ಜಿಲ್ಲೆಗೂ ಹೆಮ್ಮೆ ಉಂಟಾಗಿದೆ. ರಕ್ಷಿತ್ ಶೆಟ್ಟಿ ನಟಿಸಿದ ‘ಚಾರ್ಲಿ ೭೭೭’ ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಪೀಚರ್ ಫಿಲ್ಮಿ ಗೌರವ ಲಭಿಸಿ ದಾಗ ಅದನ್ನು ನಿರ್ದೇ ಶಿಸಿದ ಕಿರಣ್‌ರಾಜ್ ಕಾಸರಗೋಡಿನವರು ಎಂಬುದು ಜಿಲ್ಲೆಯ ವರಿಗೆ ಅಭಿಮಾನ ಮೂಡಿಸಿದೆ. ಇದೇ ವೇಳೆ ಸ್ಪೆಷಲ್ ಜ್ಯೂರಿ ಅವಾರ್ಡ್ ಬಾಡೂರು ನಿವಾಸಿ ಬಾ.ನಾ. ಸುಬ್ರಹ್ಮಣ್ಯರಿಗೆ ಲಭಿಸಿದೆ. ಈ ಎರಡು ಪ್ರಶಸ್ತಿಗಳಿಂದಾಗಿ ದೇಶೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಜಿಲ್ಲೆಯೂ ಸ್ಥಾನ ಪಡೆಯಿತು. ಕನ್ನಡಾಭಿಮಾನಿಗಳಿಗೆ …

ವ್ಯಾನ್ ಢಿಕ್ಕಿ ಹೊಡೆದು ೧೬ರ ಬಾಲಕ ಮೃತಪಟ್ಟ ಪ್ರಕರಣ: ತಲೆಮರೆಸಿಕೊಂಡ ಆರೋಪಿ ಸೆರೆ

ಮಂಜೇಶ್ವರ: ಕಾಸರಗೋಡು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ನರಹತ್ಯಾ ಪ್ರಕರಣ ಹಾಗೂ ಕರ್ನಾಟಕದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಶ್ರೀಗಂಧ ಸಾಗಾಟ ಪ್ರಕರಣದಲ್ಲಿ ಆರೋಪಿಯಾದ ವರ್ಕಾಡಿ ನಿವಾಸಿ ೨೭ ವರ್ಷಗಳ ಬಳಿಕ ಸೆರೆಗೀಡಾಗಿದ್ದಾನೆ. ವರ್ಕಾಡಿ ಕುಂಡಾಪು ವಿನ ಎಸ್.ಎ. ಅಶ್ರಫ್ ಎಂಬಾತನನ್ನು ಮಂಜೇಶ್ವರ  ಪೊಲೀಸರ ಸಹಾಯದೊಂದಿಗೆ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.೨೭ ವರ್ಷಗಳ ಹಿಂದೆ ಅಶ್ರಫ್‌ನನ್ನು ಬೆಳ್ತಂಗಡಿ ಪೊಲೀಸರು ಶ್ರೀಗಂಧ ಪ್ರಕರಣಕ್ಕೆ ಸಂಬಂಧಿಸಿ ಸೆರೆಹಿಡಿದಿದ್ದರು.  ಅನಂತರ ಜಾಮೀನಿನಲ್ಲಿ  ಬಿಡುಗಡೆ ಗೊಂಡ ಈತ ಮುಂಬಯಿ, ಗಲ್ಫ್ ಎಂಬಿ ಡೆಗಳಲ್ಲಿ …

ಕರುವನ್ನೂರು ಬ್ಯಾಂಕ್ ವಂಚನೆ: ಮಾಜಿ ಸಚಿವ ಎ.ಸಿ. ಮೊಯ್ದೀನ್‌ಗೆ ಇ.ಡಿ. ನೋಟೀಸ್

ಕೊಚ್ಚಿ: ಕರುವನ್ನೂರು ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ನೇತಾರ, ಶಾಸಕನಾದ ಎ.ಸಿ. ಮೊಯ್ದೀನ್‌ಗೆ ಇ.ಡಿ. ನೋಟೀಸು ಜ್ಯಾರಿಗೊಳಿಸಿದೆ. ಈ ತಿಂಗಳ ೩೧ರಂದು ಬೆಳಿಗ್ಗೆ ೧೧ಕ್ಕೆ ಕೊಚ್ಚಿಯ ಇ.ಡಿ. ಕಚೇರಿಯಲ್ಲಿ ಹಾಜರಾಗುವಂತೆ ನೋಟೀಸ್‌ನಲ್ಲಿ ತಿಳಿಸಲಾಗಿದೆ. ಬೇನಾಮಿ ಸಾಲ ವ್ಯವಹಾರ ಸಹಿತ ವಿಷಯಗಳಲ್ಲಿ ತನಿಖೆಯ ಅಂಗವಾಗಿ ಇ.ಡಿ. ಎ.ಸಿ.  ಮೊಯ್ದೀನ್‌ರಿಂದ ಹೇಳಿಕೆ ದಾಖಲಿಸಲಿದೆ. ಬೇನಾಮಿ ವ್ಯವಹಾರದಲ್ಲಿ ಭಾಗಿಯಾದ ವರಿಗೂ ಇ.ಡಿ. ನೋಟೀಸ್ ಕಳುಹಿಸಿದೆ. ಜನಸಾಮಾನ್ಯರ ಭೂಮಿಯನ್ನು ಅವರು ತಿಳಿಯದೆ ಅಡವಿರಿಸಿ ಬೇನಾಮಿಗಳು ಸಾಲ ಪಡೆದು ವಂಚಿಸಿದ್ದಾರೆಂದು ಇ.ಡಿ. ತಿಳಿಸಿದೆ. …

೧೧೦ ಪ್ಯಾಕೆಟ್ ಹೊಗೆಸೊಪ್ಪು ಉತ್ಪನ್ನ ವಶ: ಓರ್ವ ಸೆರೆ

ಮಂಜೇಶ್ವರ: ಉಪ್ಪಳ ಶಾಲೆ ಪರಿಸರದಲ್ಲಿನ ಗೂಡಂಗಡಿ ಬಳಿ ನಿಂತಿದ್ದ ವ್ಯಕ್ತಿಯಿಂದ ೧೧೦ ಪ್ಯಾಕೆಟ್ ಹೊಗೆಸೊಪ್ಪು ಉತ್ಪನ್ನಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿದ್ದಾರೆ. ಈ ಸಂಬಂಧ ಬಾಕ್ರಬೈಲು ನಿವಾಸಿ ಮೊಯ್ದೀನ್ ಕುಂಞಿ (೫೩)ನನ್ನು ಸೆರೆ ಹಿಡಿಯಲಾಗಿದೆ. ಎಸ್.ಐ. ನಿಖಿಲ್ ಹಾಗೂ ತಂಡ ಪಟ್ರೋಲಿಂಗ್ ನಡೆಸುತ್ತಿದ್ದಾಗ ಶಂಕೆ ತೋರಿ ತಪಾಸಣೆ ನಡೆಸಿದಾಗ ಮೊಯ್ದೀನ್ ಕುಂಞಿಯ ಬಳಿ ಇದ್ದ ಚೀಲದಲ್ಲಿ  ಮಾಲು ಪತ್ತೆಯಾಗಿದೆ. ಪೊಲೀಸರಾದ ಶುಕೂರ್, ಶ್ರೀಜಿತ್ ಸಹಕರಿಸಿದ್ದರು.

ಪುತ್ತೂರು ನಗರದಲ್ಲಿ ಹಾಡಹಗಲೇ ಯುವತಿಯ ಬರ್ಬರ ಕೊಲೆ: ಬೆಚ್ಚಿ ಬಿದ್ದ ನಾಡು

ಪುತ್ತೂರು: ಪುತ್ತೂರು ನಗರದಲ್ಲಿ ನಿನ್ನೆ ಹಾಡಹಗಲೇ ನಡೆದ ಯುವತಿಯ ಕೊಲೆ  ನಾಡನ್ನು ಬೆಚ್ಚಿ ಬೀಳಿಸಿದೆ. ಅಳಿಕೆ ಗ್ರಾಮದ ಆದಾಳ ನಿವಾ ಸಿಯೂ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ಫ್ಯಾನ್ಸಿ ಅಂಗಡಿಯ ನೌಕರೆಯಾದ ಗೌರಿ (೧೮) ಎಂಬಾಕೆ  ಕೊಲೆಗೀಡಾದ ಯುವತಿ. ಈ ಸಂಬಂಧ ಆರೋಪಿಯಾದ ಬೆಳ್ತಂಗಡಿ ತಾಲೂಕು ವೇಣೂರು ಸಮೀಪದ ನಿವಾಸಿ ಪದ್ಮರಾಜ್ (೨೩) ಎಂಬಾತನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ನಿನ್ನೆ ಮಧ್ಯಾಹ ೧.೫೫ರ ವೇಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಸಮೀಪ ರಸ್ತೆಯಲ್ಲಿ ಯುವತಿಯನ್ನು …

ವಿಮಾನ ನಿಲ್ದಾಣದಿಂದ ೬೨.೧೫ ಲಕ್ಷ ರೂ. ಮೌಲ್ಯದ ಚಿನ್ನ ವಶ: ಕಾಸರಗೋಡು ನಿವಾಸಿ ಕಸ್ಟಡಿಗೆ

ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಕಸ್ಟಮ್ಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ೬೨.೧೫ ಲಕ್ಷ ರೂ. ಮೌಲ್ಯದ ೧೦೪೧.೧೧ ಗ್ರಾಂ ಚಿನ್ನ ಪತ್ತೆಹಚ್ಚಿದೆ. ಅಬುದಾಬಿಯಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಕಾಸರಗೋಡು ನಿವಾಸಿ ಶಫೀಕ್ ವಾಳಾವಳಪ್ಪಿಲ್ ಎಂಬಾತನಿಂದ ಈ ಮಾಲು ವಶಪಡಿಸಲಾಗಿದೆ. ಈತ ಚಿನ್ನವನ್ನು ಪೇಸ್ಟ್ ರೂಪದಲ್ಲಾಗಿಸಿ  ತನ್ನ ಶರೀರದೊಳಗೆ ಬಚ್ಚಿಟ್ಟಿದ್ದನೆಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಆತನ್ನು ಕಸ್ಟಮ್ಸ್ ವಶಕ್ಕೆ ತೆಗೆದುಕೊಂಡು ವಿಚಾರ ಣೆಗೊಳಪಡಿಸಿದೆ.

ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸುವ ಆರೋಪಿ ಸೆರೆ

ಕಾಸರಗೋಡು: ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ  ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರಗಳನ್ನು ಎಗರಿಸಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ  ಡಾ. ವೈಭವ್ ಸಕ್ಸೇನಾ ಅವರು ರೂಪೀಕರಿಸಿದ ವಿಶೇಷ ಪೊಲೀಸರ ತಂಡ ಬಂಧಿಸಿದೆ. ಬೇಕಲಕ್ಕೆ ಸಮೀಪದ ಕೂವತ್ತೊಟ್ಟಿ ನಿವಾಸಿ ಶಮ್ನಾಸ್ (೩೧) ಬಂಧಿತ ಆರೋಪಿಯಾಗಿದ್ದಾನೆ. ವಿದ್ಯಾನಗರ, ಬೇಕಲ, ಮೇಲ್ಪರಂಬ, ಬೇಡಡ್ಕ ಸೇರಿ ದಂತೆ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳ ಲ್ಲಾಗಿ ಹಲವು ಮಹಿಳೆಯರ ಕುತ್ತಿಗೆಯಿಂದ …

ಚಂದ್ರನ ಮೇಲೆ ಸಂಚಾರ ಆರಂಭಿಸಿದ ಪ್ರಗ್ಯಾನ್ ರೋವರ್

ಬೆಂಗಳೂರು: ಚಂದ್ರನ ಮೇಲೈ ಮೇಲೆ ನಿನ್ನೆ ಸಂಜೆ ಅತ್ಯಂತ ಸುರಕ್ಷಿv ವಾಗಿ ಇಳಿದ ವಿಕ್ರಮ್ ಲ್ಯಾಂಡರ್ ಇದೀಗ ಮುಂದಿನ ಹಂತ ಆರಂಭಿಸಿದೆ. ಪ್ರಗ್ಯಾನ್ ರೋವರ್ ವಿಕ್ರಮ್ ಲ್ಯಾಂಡರ್‌ನಿಂದ ಹೊರ ಬಂದಿದ್ದು, ಚಂದ್ರನ ಮೇಲೆ ನಡಿಗೆಯನ್ನು ಆರಂ ಭಿಸಿದೆ ಎಂದು ಭಾರತೀಯ ಬಾಹ್ಯಾ ಕಾಶ ಸಂಶೋಧನಾ ಕೇಂದ್ರ (ಇಸ್ರೋ) ಇಂದು ಬೆಳಿಗ್ಗೆ ಟ್ವೀಟ್ ಮಾಡಿದೆ. ಚಂದ್ರಯಾನ-೩ ಚಂದ್ರನ ಮೇಲೆ ತನ್ನ ಐತಿಹಾಸಿಕ ಲ್ಯಾಂಡಿಂಗ್ ಮಾಡಿದ ಕೆಲವೇ ಗಂಟೆಗಳ ನಂತರ ಯಶಸ್ವಿಯಾಗಿ ಮುಂದಿನ ಹಂತದ  ಕಾರ್ಯಾಚರಣೆ ಯಲ್ಲಿ ತೊಡಗಿದೆ. ಪ್ರಗ್ಯಾನ್ …