ವಿಮಾನ ನಿಲ್ದಾಣದಿಂದ ೬೨.೧೫ ಲಕ್ಷ ರೂ. ಮೌಲ್ಯದ ಚಿನ್ನ ವಶ: ಕಾಸರಗೋಡು ನಿವಾಸಿ ಕಸ್ಟಡಿಗೆ

ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಕಸ್ಟಮ್ಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ೬೨.೧೫ ಲಕ್ಷ ರೂ. ಮೌಲ್ಯದ ೧೦೪೧.೧೧ ಗ್ರಾಂ ಚಿನ್ನ ಪತ್ತೆಹಚ್ಚಿದೆ.

ಅಬುದಾಬಿಯಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಕಾಸರಗೋಡು ನಿವಾಸಿ ಶಫೀಕ್ ವಾಳಾವಳಪ್ಪಿಲ್ ಎಂಬಾತನಿಂದ ಈ ಮಾಲು ವಶಪಡಿಸಲಾಗಿದೆ.

ಈತ ಚಿನ್ನವನ್ನು ಪೇಸ್ಟ್ ರೂಪದಲ್ಲಾಗಿಸಿ  ತನ್ನ ಶರೀರದೊಳಗೆ ಬಚ್ಚಿಟ್ಟಿದ್ದನೆಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಆತನ್ನು ಕಸ್ಟಮ್ಸ್ ವಶಕ್ಕೆ ತೆಗೆದುಕೊಂಡು ವಿಚಾರ ಣೆಗೊಳಪಡಿಸಿದೆ.

Leave a Reply

Your email address will not be published. Required fields are marked *

You cannot copy content of this page