ಯುವಕನ ಅಪಹರಣ: ಕಾರು ವಶ

ಕಾಸರಗೋಡು: ಗಲ್ಫ್‌ನಿಂದ ಕಳುಹಿಸಿಕೊಟ್ಟ ಚಿನ್ನದ ಹೆಸರಲ್ಲಿ  ಯುವಕನನ್ನು ತಂಡ ಅಪಹರಿಸಿದ ಪ್ರಕರಣದಲ್ಲಿ ತನಿಖೆ ಮುಂದು ವರಿಸಿದ ಪೊಲೀಸರು ಸ್ವಿಫ್ಟ್ ಕಾರೊಂದನ್ನು ಪತ್ತೆಹಚ್ಚಿ ವಶ ಪಡಿಸಿಕೊಂಡಿದ್ದಾರೆ. ಮೀಪುಗುರಿ ಗಲ್ಫ್ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಅಹಮ್ಮದ್ ಜಾಬಿರ್ (೩೬)ರನ್ನು ಅಪಹರಿಸಿದ ಪ್ರಕರಣದಲ್ಲಿ ಕಾರನ್ನು ವಶಪಡಿಸಲಾಗಿದೆ. ಮೊನ್ನೆ ರಾತ್ರಿ ೧೨ ಗಂಟೆ ವೇಳೆ ತಂಡವೊಂದು ತಲುಪಿ ಅಹಮ್ಮದ್ ಜಾಬಿರ್‌ರನ್ನು ಅಪಹ ರಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ದೂರು ಲಭಿಸಿದ ಪೊಲೀ ಸರು ಕಾರ್ಯಾಚರಣೆ ನಡೆಸಿ ಗಂಟೆಗಳೊಳಗೆ ಅಣಂಗೂರು ನಿವಾಸಿಗಳಾದ ಅಸರುದ್ದೀನ್ (೨೬), ಖಾದರ್ …

ಹತ್ಯೆ ಸಹಿತ ವಿವಿಧ ಅಪರಾಧ ಕೃತ್ಯಗಳ ಆರೋಪಿ ಕಾಪಾ ಪ್ರಕಾರ ಸೆರೆ

ಕುಂಬಳೆ: ಹತ್ಯೆ ಸಹಿತ ವಿವಿಧ ಪ್ರಕರಣಗಳಲ್ಲಿ ಆರೋಪಿಯಾದ ವ್ಯಕ್ತಿ ವಿರುದ್ಧ ಪೊಲೀಸರು ಕಾಪಾ ಕಾಯ್ದೆ ಪ್ರಕಾರ ಕೇಸು ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಬಂದ್ಯೋಡು ಅಡ್ಕ ಬೈದಲದ ಅಬ್ದುಲ್ ಲತೀಫ್ ಯಾನೆ ಕಳಿತ್ತೋಕ್ ಲತೀಫ್ ವಿರುದ್ಧ ಕಾಪಾ ಪ್ರಕಾರ ಕೇಸು ದಾಖಲಿಸಲಾಗಿದೆ. ಅಡ್ಕ ಬೈದಲದ ಮುಜೀಬ್ ರಹ್ಮಾನ್ ಎಂಬವರ ಮನೆಗೆ ಇತ್ತೀಚೆಗೆ ಅತಿಕ್ರಮಿಸಿ ನುಗ್ಗಿ ಆಕ್ರಮಣ ನಡೆಸಿ, ಅವರ ಕಾರಿಗೆ ಹಾನಿಗೈದ ಪ್ರಕರಣದಲ್ಲಿ  ಅಬ್ದುಲ್ ಲತೀಫ್ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಈತನ ವಿರುದ್ಧ ಪೊಲೀಸರು ಹತ್ಯೆಯತ್ನ ಪ್ರಕರಣ ದಾಖಲಿಸಿಕೊಂಡು …

ರೈಲು ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು

ಹೊಸದುರ್ಗ: ವ್ಯಕ್ತಿಯೋರ್ವ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನೀಲೇಶ್ವರ ಮನ್ನಂಪು ರತ್ತ್‌ಕಾವ್ ಸಮೀಪ ಸಂಭವಿಸಿದೆ. ಮಡಿಕೈ ಕಾಲಿಚ್ಚಾಂಪೊದಿ ನಿವಾಸಿ ವೆಳ್ಳು ವೀಟಿಲ್ ಕುಂಞಿ ರಾಮನ್ ಎಂಬವರು ಮೃತ ವ್ಯಕ್ತಿ.  ಇಂದು ಬೆಳಿಗ್ಗೆ ೭ ಗಂಟೆಗೆ ಚೆರುವತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಇವರಿಗೆ ಢಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ರೈಲು ಸಂಚಾರ ಅರ್ಧಗಂಟೆ ವಿಳಂಬವಾಯಿತು.

ಯುವಮೋರ್ಛಾ ನೇತಾರ, ತಂದೆಯ ನಿಗೂಢ ಸಾವು: ತನಿಖಾಧಿಕಾರಿಯ ಬದಲಾವಣೆಗೆ ಒತ್ತಾಯ

ಕುಂಬಳೆ: ಯುವಮೋರ್ಛಾ ನೇತಾರ ನಿಗೂಢ ರೀತಿಯಲ್ಲಿ ಸಾವಿಗೀಡಾದ ಬೆನ್ನಲ್ಲೇ ತಂದೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದ ಘಟನೆಗೆ ಸಂಬಂಧಿಸಿ ದಾಖಲಿಸಲಾದ  ಪ್ರಕರಣದ ತನಿಖೆ ನಡೆಸುವ ಎಸ್‌ಐಯನ್ನು  ಬದಲಾಯಿಸಬೇಕೆಂಬ ಬೇಡಿಕೆ ತೀವ್ರಗೊಂಡಿದೆ. ಈ ಕುರಿತು ಕ್ರಿಯಾ ಸಮಿತಿ ಪದಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾ ರಿಗೆ ಮನವಿ ಸಲ್ಲಿಸಿದ್ದಾರೆ. ಕ್ರಿಯಾ ಸಮಿತಿ ಚೆಯರ್‌ಮ್ಯಾನ್ ಪ್ರದೀಪ್ ಆರಿಕ್ಕಾಡಿ, ಕನ್ವೀನರ್ ಮೋಹನ ಬಂಬ್ರಾಣ ಎಂಬಿವರು ಇಂದು ಮನವಿ ಸಲ್ಲಿಸಿದ್ದಾರೆ. ಬಂಬ್ರಾಣ ಕಲ್ಕುಳದ ಕ್ವಾರ್ಟ ರ್ಸ್‌ನಲ್ಲಿ ವಾಸಿಸುತ್ತಿದ್ದ ಯುವ ಮೋರ್ಛಾ  ಕುಂಬಳೆ ಮಂಡಲ …

ರೈಲುಗಳಿಗೆ ಕಲ್ಲು ತೂರಾಟ: ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಡಿಜಿಪಿ ನಿರ್ದೇಶ

ಕಾಸರಗೋಡು: ರಾಜ್ಯದಲ್ಲಿ ರೈಲುಗಳಿಗೆ ಇತ್ತೀಚೆಗಿನಿಂದ ವ್ಯಾಪಕವಾಗಿ ಕಲ್ಲು ತೂರಾಟ ನಡೆಸುವುದನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ತಡೆಗಟ್ಟಲು ಕಠಿಣ ಕ್ರಮ ಜರಗಿಸುವಂತೆ ರಾಜ್ಯ ಪೊಲೀಸ್  ಮಹಾ ನಿರ್ದೇಶಕ (ಡಿಜಿಪಿ) ಡಾ. ಶೇಖ್ ದರ್ಬೇಶ್ ಸಾಹಿಬ್ ರಾಜ್ಯದ ಎಲ್ಲಾ ಜಿಲ್ಲೆಗಳ ವರಿಷ್ಠ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದಾರೆ. ಈ ನಿರ್ದೇಶವನ್ನು ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸ್ ಕಚೇರಿಗಳಿಗೆ ಈಗಾಗಲೇ ಕಳುಹಿಸಿಕೊಡಲಾಗಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಗಳ ನೇರ ನೇತೃತ್ವದಲ್ಲೇ    ಸಮಗ್ರ ತನಿಖೆ ನಡೆಸಬೇಕು. ಅಕ್ರಮಿಗಳನ್ನು ಪತ್ತೆಹಚ್ಚಲು ರೈಲುಗಳಿಗೆ ಕಲ್ಲು ತೂರಾಟ …

ಮಾಜಿ ಸಚಿವ, ಶಾಸಕ ಎ.ಸಿ. ಮೊದೀನ್ ನಿವಾಸ, ಕಚೇರಿಗೆ ಇ.ಡಿ. ದಾಳಿ

ತೃಶೂರು:  ಮಾಜಿ ಸಚಿವ ಹಾಗೂ ಶಾಸಕರೂ ಆಗಿರುವ ಸಿಪಿಎಂ ನೇತಾರ ಎ.ಸಿ. ಮೊದೀನ್‌ರ ಮನೆಗೆ ಇಂದು ಬೆಳಿಗ್ಗೆ ಎನ್‌ಫೋರ್ಸ್‌ಮೆಂಟ್ (ಇಡಿ) ದಾಳಿ ನಡೆಸಿದೆ. ವಡಕಾಂಚೇರಿ ತೆಕ್ಕುಂಕರೆ ಯಲ್ಲಿರುವ ಮೊದೀನ್‌ರ ಮನೆಗೆ ಕೊಚ್ಚಿಯಿಂದ ಬಂದ ೧೨ ಮಂದಿ ಇ.ಡಿ ಅಧಿಕಾರಿಗಳು   ಇಂದು ಬೆಳಿಗ್ಗೆ ದಾಳಿ ನಡೆಸಿ ಪರಿಶೀಲನೆ ಆರಂಭಿಸಿದ್ದಾರೆ. ಮಾತ್ರವಲ್ಲ ಕುನ್ನಂಕುಳದಲ್ಲಿರುವ ಎ.ಸಿ. ಮೊದೀನ್‌ರ ಕಚೇರಿಗೂ ಇ.ಡಿ  ದಾಳಿ ನಡೆಸಿದೆ. ಕರುವಣ್ಣೂರು ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಎ.ಸಿ ಮೊದೀನ್ ಅವರ ಸಂಬಂಧಿಕರು ಒಳಪಟ್ಟಿರುವುದಾಗಿ ಈ ಹಿಂದೆಯೇ ಆರೋಪ ಉಂಟಾಗಿತ್ತು. …

ಕರ್ನಾಟಕ ಮದ್ಯದೊಂದಿಗೆ ಓರ್ವ ಸೆರೆ, ಬೈಕ್ ವಶ

 ಮಂಜೇಶ್ವರ: ಬಾಯಾರು ಗ್ರಾಮದ ಧರ್ಮತ್ತಡ್ಕದಲ್ಲಿ ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್ ನ ಪ್ರಿವೆಂಟೀವ್ ಆಫೀಸರ್ ಜೇಮ್ಸ್ ಅಬ್ರಹಾಂ ಕುರಿಯಾ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ  ೧೨.೯೬ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಿಕೊಂಡಿದೆ. ಈ ಸಂಬಂಧ ಧರ್ಮತ್ತಡ್ಕದ ಶಿವಪ್ರಸಾದ್ ವಿ (೪೧) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಅಬಕಾರಿ ಪ್ರಕರಣ ದಾಖಲಿಸ ಲಾಗಿದೆ. ಮಾಲು ಸಾಗಿಸಲು ಬಳಸಲಾದ ಬೈಕ್ ವಶಕ್ಕೆತೆಗೆದು ಕೊಳ್ಳಲಾಗಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ವಶಪಡಿಸಿದ ಮಾಲುಗಳನ್ನು ಬಳಿಕ ಕುಂಬಳೆ ಅಬಕಾರಿ ರೇಂಜ್‌ಗೆ ಹಸ್ತಾಂತರಿಸಲಾಗಿದೆ. …

ವಿವಿಧ ಇಲಾಖೆಗಳು ಜಂಟಿಯಾಗಿ ಮಾರುಕಟ್ಟೆ ತಪಾಸಣೆ: ೪೫ ಅಂಗಡಿಗಳಲ್ಲಿ ಅವ್ಯವಹಾರ ಪತ್ತೆ

ಕಾಸರಗೋಡು: ಹಬ್ಬಗಳ ಸಮಯದಲ್ಲಿ ಕಾಳಸಂತೆ, ಸಾಮಗ್ರಿಯನ್ನು ಅನಗತ್ಯ ಸಂಗ್ರಹಿಸಿಡುವುದನ್ನು ತಡೆಹಿಡಿಯಲು ಜಿಲ್ಲೆಯ ವಿವಿಧ ಭಾಗಗಳಲ್ಲಾಗಿ ಕಂದಾಯ, ಸಾರ್ವಜನಿಕ ವಿತರಣೆ, ಲೀಗಲ್ ಮೆಟ್ರೋಲಜಿ ಎಂಬೀ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಸಾರ್ವಜನಿಕ ಮಾರುಕಟ್ಟೆಗಳಲ್ಲಿ ತಪಾಸಣೆ ನಡೆಸಿದರು. ಜಿಲ್ಲೆಯ ಒಟ್ಟು ೧೪೦ರಷ್ಟು ಅಂಗಡಿಗಳನ್ನು ಪರಿಶೀಲಿಸಿದರು. ಅವ್ಯವಹಾರ ಪತ್ತೆಹಚ್ಚಿದ ೪೫ರಷ್ಟು ಅಂಗಡಿಗಳಿಗೆ  ನೋಟೀಸ್ ನೀಡುವುದಕ್ಕಿರುವ ಕ್ರಮ ಕೈಗೊಂಡಿದ್ದಾರೆ. ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಅಸಿಸ್ಟೆಂಟ್ ಕಲೆಕ್ಟರ್ ದಿಲೀಪ್ ಕೆ. ಕೈನಿಕ್ಕರ ಇವರ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ. ಎಡಿಎಂಕೆ ನವೀನ್ ಬಾಬು, ಜಿಲ್ಲಾ ಸಪ್ಲೈ ಆಫೀಸರ್ …

ವಾಹನ ಅಪಘಾತದಲ್ಲಿ ಮೊಗ್ರಾಲ್ ಪುತ್ತೂರಿನ ಯುವಕರಿಬ್ಬರ ದುರ್ಮರಣ

ಕಾಸರಗೋಡು: ಬೈಕ್ ಮತ್ತು ಮೀನು ಲಾರಿ ಪರಸ್ಪರ ಢಿಕ್ಕಿ ಹೊಡೆದು ಮೊಗ್ರಾಲ್ ಪುತ್ತೂರಿನ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕಣ್ಣೂರು ತಾಳಾಪ್ಪಿಲ್‌ನಲ್ಲಿ ನಿನ್ನೆ ಮುಂಜಾನೆ ನಡೆದಿದೆ. ಮೊಗ್ರಾಲ್ ಪುತ್ತೂರು ಸಮೀಪದ ಚೌಕಿ ಬದರ್ ನಗರದ ಪೆರಿಯಡ್ಕ  ಹೌಸ್‌ನ ಮೊಹಮ್ಮದ್-ನಫೀಸಾ ದಂಪತಿಯ ಪುತ್ರ ಮನಾಫ್ (೨೧) ಮತ್ತು ಬದರ್‌ನಗರದ ರಫೀಕ್-ಜಮೀಲ ದಂಪತಿ ಪುತ್ರ  ಲತೀಫ್ (೨೪) ಸಾವನ್ನಪ್ಪಿದ ದುರ್ದೈವಿಗಳು. ಇವರಿಬ್ಬರು ಸ್ನೇಹಿತರಾಗಿದ್ದಾರೆ. ಇವರಿಬ್ಬರು  ಬೈಕ್‌ನಲ್ಲಿ ಕಣ್ಣೂರು ಭಾಗದಿಂದ ನಿನ್ನೆ ಮುಂಜಾನೆ ಕಾಸರಗೋಡಿಗೆ ಬರುತ್ತಿದ್ದ ದಾರಿ ಮಧ್ಯೆ ಕಣ್ಣೂರು …

ಚಿನ್ನದ ವ್ಯವಹಾರದ ಹೆಸರಲ್ಲಿ ರಾತ್ರಿ ವೇಳೆ ಯುವಕನ ಅಪಹರಣ: ತಾಸಿನೊಳಗಾಗಿ ಇಬ್ಬರ ಸೆರೆ

ಕಾಸರಗೋಡು: ಚಿನ್ನದ ವ್ಯವ ಹಾರಕ್ಕೆ ಸಂಬಂಧಿಸಿ ತಂಡವೊಂದು ಯುವಕನನ್ನು ಅಪಹರಿಸಿ, ಅದು ನಡೆದ ಕೆಲವೇ ತಾಸುಗಳೊಳಗಾಗಿ ಅಪಹರಣಗಾರರನ್ನು ಪೊಲೀಸರು ಬಂಧಿಸುವವಲ್ಲೂ ಸಫಲರಾಗಿದ್ದಾರೆ. ಕೂಡ್ಲು ಮೀಪುಗುರಿ ಗಲ್ಫ್ ಕ್ವಾರ್ಟರ್ಸ್‌ನ ಅಹಮ್ಮದ್ ಜಾಬೀರ್ (೩೬) ಎಂಬ ಯುವಕ ಸ್ನೇಹಿತನೋರ್ವನೊಂದಿಗೆ ಮೊನ್ನೆ ರಾತ್ರಿ ೧೨ ಗಂಟೆಗೆ ನಿಂತಿದ್ದ ವೇಳೆ ಅಲ್ಲಿಗೆ ಕಾರಿನಲ್ಲಿ ಬಂದ ತಂಡ ಅಹಮ್ಮದ್ ಜಾಬೀರ್‌ನನ್ನು ಕಾರಿಗೇರಿಸಿ ಅಪಹರಿಸಿದೆ ಎಂದು ಆರೋಪಿಸಲಾಗಿದೆ. ಆ ವೇಳೆ ಅಹಮ್ಮದ್ ಜಾಬೀರ್ ಜತೆ ಇದ್ದ ಆತನ ಸ್ನೇಹಿತನ ಮೇಲೆ ಅಪಹg ಣಗಾರರು ಹಲ್ಲೆ ನಡೆಸಿ …