ಹತ್ಯೆ ಸಹಿತ ವಿವಿಧ ಅಪರಾಧ ಕೃತ್ಯಗಳ ಆರೋಪಿ ಕಾಪಾ ಪ್ರಕಾರ ಸೆರೆ
ಕುಂಬಳೆ: ಹತ್ಯೆ ಸಹಿತ ವಿವಿಧ ಪ್ರಕರಣಗಳಲ್ಲಿ ಆರೋಪಿಯಾದ ವ್ಯಕ್ತಿ ವಿರುದ್ಧ ಪೊಲೀಸರು ಕಾಪಾ ಕಾಯ್ದೆ ಪ್ರಕಾರ ಕೇಸು ದಾಖಲಿಸಿ ಆತನನ್ನು ಬಂಧಿಸಿದ್ದಾರೆ.
ಬಂದ್ಯೋಡು ಅಡ್ಕ ಬೈದಲದ ಅಬ್ದುಲ್ ಲತೀಫ್ ಯಾನೆ ಕಳಿತ್ತೋಕ್ ಲತೀಫ್ ವಿರುದ್ಧ ಕಾಪಾ ಪ್ರಕಾರ ಕೇಸು ದಾಖಲಿಸಲಾಗಿದೆ. ಅಡ್ಕ ಬೈದಲದ ಮುಜೀಬ್ ರಹ್ಮಾನ್ ಎಂಬವರ ಮನೆಗೆ ಇತ್ತೀಚೆಗೆ ಅತಿಕ್ರಮಿಸಿ ನುಗ್ಗಿ ಆಕ್ರಮಣ ನಡೆಸಿ, ಅವರ ಕಾರಿಗೆ ಹಾನಿಗೈದ ಪ್ರಕರಣದಲ್ಲಿ ಅಬ್ದುಲ್ ಲತೀಫ್ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಈತನ ವಿರುದ್ಧ ಪೊಲೀಸರು ಹತ್ಯೆಯತ್ನ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು. ಇದನ್ನು ನ್ಯಾಯಾಂಗ ಬಂಧನಕ್ಕೊಳಗಾದ ಅಬ್ದುಲ್ ಲತೀಫ್ ಇದೀಗ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿದ್ದಾನೆ. ಅಡ್ಕ ಬೈದಲದ ಮುಜೀಬ್ ರಹ್ಮಾನ್ರ ಮನೆಗೆ ನುಗ್ಗಿ ಆಕ್ರಮಣ ನಡೆಸಿರುವ ಸಹಿತ ಒಂಭತ್ತು ಪ್ರಕರಣಗಳು ಅಬ್ದುಲ್ ಲತೀಫ್ ವಿರುದ್ಧ ದಾಖಲಾಗಿವೆ. ಉಪ್ಪಳದ ಅಲ್ತಾಫ್ ಹತ್ಯೆ ಪ್ರಕರಣದಲ್ಲೂ ಈತ ಆರೋಪಿ ಯಾಗಿದ್ದಾನೆ. ಅಲ್ಲದೆ ಮೂರು ಹತ್ಯೆಯತ್ನ ಪ್ರಕರಣ, ಒಂದು ದರೋಡೆ ಪ್ರಕರಣ ಹಾಗೂ ತಿಂಗಳುಗಳ ಹಿಂದೆ ಮಂಜೇಶ್ವರ ಪೊಲೀಸರ ಮೇಲೆ ಕೋವಿ ತೋರಿಸಿ ಬೆದರಿಕೆಯೊಡ್ಡಿದ ಪ್ರಕರಣ ದಲ್ಲೂ ಈತ ಆರೋಪಿಯಾಗಿದ್ದಾನೆ. ಹೀಗೆ ಒಟ್ಟು ನಾಲ್ಕು ಆರ್ಮ್ಸ್ ಆಕ್ಟ್ ಪ್ರಕಾರ ಈತನ ವಿರುದ್ಧ ಕೇಸುಗಳಿವೆ ಯೆಂದು ಪೊಲೀಸರು ತಿಳಿಸಿದ್ದಾರೆ.
ಹೀಗೆ ಈತ ವಿವಿಧ ಅಪರಾಧ ಕೃತ್ಯಗಳಲ್ಲಿ ಆರೋಪಿಯಾದ ಹಿನ್ನೆಲೆಯಲ್ಲಿ ಕುಂಬಳೆ ಪೊಲೀಸರು ಕಣ್ಣೂರು ಸೆಂಟ್ರಲ್ ಜೈಲಿಗೆ ತೆರಳಿ ಈತನ ವಿರುದ್ಧ ಕಾಪಾ ಪ್ರಕಾರ ಕೇಸು ದಾಖಲಿಸಿ ಬಂಧನ ದಾಖಲಿಸಿದ್ದಾರೆ.