ಉಪ ಚುನಾವಣೆ ವಿಧಾನಸಭಾ ಅಧಿವೇಶನ ತಾತ್ಕಾಲಿಕ ಮುಂದೂಡಿಕೆ

ತಿರುವನಂತಪುರ: ಪುದುಪಳ್ಳಿ ವಿಧಾನಸಭೆಗೆ ಸೆ. ೫ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಅಧಿವೇಶನವನ್ನು  ನಾಳೆಯಿಂದ ತಾತ್ಕಾಲಿಕವಾಗಿ  ಮುಂದೂಡುವ ತೀರ್ಮಾನ ಕೈಗೊಳ್ಳಲಾಗಿದೆ. ಸೆ. ೧೧ರ ಬಳಿಕ ಅಧಿವೇಶನ ಮತ್ತೆ ಪುನರಾರಂಭಗೊಳ್ಳಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಮಗಳು ಟಿ. ವೀಣಾರಿಗೆ ಸಿಎಂಆರ್‌ಎಲ್ ಎಂಬ ಕಂಪೆನಿಯಿಂದ ಮಾಸಿಕ ರೂಪದಲ್ಲಿ ಒಟ್ಟು ೧.೭೨ ಕೋಟಿ ರೂ. ಲಭಿಸಿದೆ ಎಂಬ ಆರೋಪಗಳು ಎದ್ದು ಬಂದಿದ್ದು, ಆ ವಿಷಯವನ್ನು ವಿಪಕ್ಷೀಯರು ವಿಧಾನಸಭೆಯಲ್ಲಿ ಎತ್ತುವ ಸಾಧ್ಯತೆ ಇರುವಂತೆಯೇ ವಿಧಾನಸಭಾ ಅಧಿವೇಶನವನ್ನು ಉಪಚುನಾ ವಣೆಯ ಹೆಸರಲ್ಲಿ ತಾತ್ಕಾಲಿಕವಾಗಿ ಮುಂದೂ …

‘ಮಣಿಪುರ ಮೂಲಕ ನೀವು ಭಾರತವನ್ನು ಕೊಂದಿದ್ದೀರಿ: ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ‘ಕಳೆದ ಬಾರಿ ನಾನು ಲೋಕಸಭೆ ಅಧಿವೇಶನದಲ್ಲಿ ಮಾತನಾಡಿದ್ದಾಗ ನನ್ನ ಮಾತುಗಳನ್ನು ಅದಾನಿ ಮೇಲೆ ಕೇಂದ್ರೀಕರಿಸಿದ್ದೆ. ಇದರಿಂದ ನಿಮ್ಮ ಹಿರಿಯ ನಾಯಕನಿಗೆ ನೋವಾಗಿರಬಹುದು. ಆ ನೋವು ನಿಮ್ಮ ಮೇಲೆ ಕೂಡ ಪರಿಣಾಮ ಬೀರಿರಬಹುದು ಎಂದು ನಾನು ಭಾವಿಸುತ್ತೇನೆ. ಅದಕ್ಕೆ ನಿಮ್ಮ ಬಳಿ ಇಂದು ಕ್ಷಮೆ ಕೋರುತ್ತೇನೆ. ಆದರೆ ಅಂದು ನಾನು ಆಡಿರುವ ಮಾತು ಸತ್ಯ. ಇವತ್ತು ಬಿಜೆಪಿಯಲ್ಲಿರುವ ನನ್ನ ಸ್ನೇಹಿತರು ಭಯಪಡಬೇಕಾಗಿಲ್ಲ, ಏಕೆಂದರೆ ನನ್ನ ಇಂದಿನ ಭಾಷಣ ಅದಾನಿ ಮೇಲೆ ಕೇಂದ್ರೀಕರಿಸಿಲ್ಲ’ ಹೀಗೆ ಹೇಳುತ್ತಲೇ ಪ್ರಧಾನಿ ಮೋದಿ …

ಬೈಕ್ ಕಳವು: ಇಬ್ಬರು ವಲಸೆ ಕಾರ್ಮಿಕರ ಸೆರೆ

ಕಾಸರಗೋಡು: ಹೊಸದುರ್ಗ ರೈಲು ನಿಲ್ದಾಣ ಸಮೀಪ ನಿಲ್ಲಿಸಲಾಗಿದ್ದ ಎರಡು ಬೈಕ್‌ಗಳನ್ನು ಕಳವುಗೈದ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ವಲಸೆ ಕಾರ್ಮಿ ಕರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.  ಹೊಸದಿಲ್ಲಿ ನಿವಾಸಿಗಳಾಗಿದ್ದು ಈಗ ಪಳ್ಳಿಕ್ಕೆರೆಯ ಕ್ವಾರ್ಟರ್ಸ್‌ವೊಂದ ರಲ್ಲಿ ವಾಸಿಸುತ್ತಿರುವ ಅಸ್ಲಾಂಖಾನ್ (೨೨) ಮತ್ತು ಮೊಹಮ್ಮದ್ ಫರ್ಹಾನ್ (೧೯) ಎಂಬಿವರು ಬಂಧಿತ ಆರೋಪಿ ಗಳಾಗಿದ್ದಾರೆ. ಅಗೋಸ್ತ್ ೨ ಮತ್ತು ೫ರಂದು ಎರಡು ಬೈಕ್‌ಗಳು ಹೊಸ ದುರ್ಗ ರೈಲು ನಿಲ್ದಾಣ ಸಮೀಪದಿಂದ ಕಳವುಹೋಗಿತ್ತು. ಅ.೨ರಂದು ಹೊಸ ದುರ್ಗ ತೋಯಮ್ಮಲ್ ನಿವಾಸಿ ಅಬ್ದುಲ್ ಅಸೀಸ್ ಎಂಬವರ …

ಕುಂಬಳೆ ಪೊಲೀಸ್ ಠಾಣೆ  ಪರಿಸರದಲ್ಲಿ ನಾಗರಹಾವು ಪ್ರತ್ಯಕ್ಷ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ಪರಿಸರದಲ್ಲಿ ನಾಗರಹಾ ವೊಂದು ಪ್ರತ್ಯಕ್ಷಗೊಂಡು ಭಯಮೂಡಿಸಿದೆ. ಠಾಣೆಯ ಕಂಪೌಂಡ್ ಬಳಿ ನಿಲುಗಡೆಗೊಳಿಸಿದ್ದ ವಾಹನದ ಅಡಿಭಾಗದಲ್ಲಿ ನಿನ್ನೆ ಸಂಜೆ ಹಾವು ಕಾಣಿಸಿದೆ. ವಾಹನದ ಅಡಿಭಾಗದಲ್ಲಿ ಯಾವುದೋ ಜೀವಿ ಚಲಿಸುವುದು ಕಂಡುಬಂದಿತ್ತು. ಇದರಿಂದ ಪೊಲೀಸರು ಅಲ್ಲಿಗೆ ತೆರಳಿ ನೋಡಿದಾಗ ನಾಗರಹಾವು ಹೆಡೆ ಬಿಚ್ಚಿ ನಿಂತಿದೆ. ದೀರ್ಘ ಹೊತ್ತು ಹಾವು ಅಲ್ಲಿಯೇ ಉಳಿದುಕೊಂಡಿತ್ತು. ಇದು ಪೊಲೀಸರಿಗೆ ಹಾಗೂ ಸ್ಥಳೀಯರಿಗೆ ಭಯ ಹುಟ್ಟಿಸಿದೆ. ಈಬಗ್ಗೆ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ತಲುಪಿ ಹಾವನ್ನು ಹಿಡಿದು ಕೊಂಡೊಯ್ಯು …

ರಾಷ್ಟ್ರಧ್ವಜಕ್ಕೆ ಅಗೌರವ ಯುವಕನ ವಿರುದ್ಧ ಕೇಸು

ಕಾಸರಗೋಡು: ಅಂಗಡಿಯಲ್ಲಿ ಮಾರಾಟಕ್ಕಿರಿಸಿದ್ದ ರಾಷ್ಟ್ರಧ್ವಜವನ್ನು ಕೆಳಗೆ ಹಾಕಿ ಅಗೌರವ ತೋರಿದ ಬಗ್ಗೆ ಆರೋಪವುಂಟಾಗಿದೆ. ಈ ಬಗ್ಗೆ ಪೊಯಿನಾಚಿಯ ಅಂಗಡಿ ಯೊಂದರ  ಮಾಲಕಿ ನೀಡಿದ ದೂರಿನಂತೆ ಪೊಯೀನಾಚಿ ಆಡ್ಯಂ ನಿವಾಸಿ  ಶ್ರೀಜಿತ್ (೩೫) ಎಂಬಾತನ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. ನಿನ್ನೆ ಅಂಗಡಿಗೆ ಬಂದ ಶ್ರೀಜಿತ್ ಅಲ್ಲಿ ಮಾರಾಟಕ್ಕಿರಿಸಿದ್ದ ರಾಷ್ಟ್ರಧ್ವಜವನ್ನು ನೆಲಕ್ಕೆ ಹಾಕಿದ್ದಾನೆನ್ನಲಾಗಿದೆ. ರಾಷ್ಟ್ರಧ್ವಜದ ಬಣ್ಣ ಹೆಚ್ಚಿದೆ ಎಂದು ಆರೋಪಿಸಿ ಈತ ಈ ಕೃತ್ಯ ನಡೆಸಿದ್ದಾನೆಂದು ದೂರಲಾಗಿದೆ.

ವಿಧಾನಸಭೆ: ಏಕರೂಪ ನಾಗರಿಕ ಸಂಹಿತೆ ವಿರುದ್ದ ನಿರ್ಣಯಕ್ಕೆ ಸರ್ವಾನುಮತ ಅಂಗೀಕಾರ

ತಿರುವನಂತಪುರ: ಭಾರತ ದಲ್ಲಿ ಏಕರೂಪ ನಾಗರಿಕ ಸಂಹಿತೆ ಜ್ಯಾರಿಗೊಳಿಸದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ರಾಜ್ಯ ವಿಧಾನಸಭ ನಿನ್ನೆ ಸರ್ವಾ ನುಮತದಿಂದ ಅಂಗೀಕರಿಸಿದೆ. ಸಂಘ ಪರಿವಾರ ಯುಸಿಸಿ ಸಂವಿಧಾನಕ್ಕೆ ಅನುಗುಣವಾಗಿಲ್ಲ. ಆದರೆ ಇದು ಮನುಸ್ಮತಿ ಆದರಿಸಿದೆ ಎಂದು  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಸ್ಕೂಟರ್ ಕಳವು: ಕೇಸು ದಾಖಲು

ಮಂಜೇಶ್ವರ: ಸಂಬಂಧಿಕರ ಮನೆ ಪರಿಸರದಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ತೂಮಿನಾಡು ನಿವಾಸಿ ಅಬ್ದುಲ್ ಮುನೀರ್‌ರ ಸಹೋದರ ಡಾ. ಅಬ್ದುಲ್ ಮನ್ಸೂರ್ ಎಂಬವರ ಕರ್ನಾಟಕ ನೋಂದಾವಣೆಯ ಸ್ಕೂಟರ್ ಕಣ್ವತೀರ್ಥ ಸಂ ಬಂಧಿಕರ ಮನೆಯಲ್ಲಿ ಇರಿ ಲಾಗಿತ್ತು. ಅಲ್ಲಿಂದ ಈ ತಿಂಗಳ ೫ರಂದು ರಾತ್ರಿಯಿಂದ ೬ರಂದು ಬೆಳಿಗ್ಗೆ ಮಧ್ಯೆ  ಸ್ಕೂಟರ್‌ನ್ನು ಕಳವುಗೈದಿರುವುದಾಗಿ ಅಬ್ದುಲ್ ಮುನೀರ್ ದೂರು ನೀಡಿದ್ದಾರೆ. ಸುಮಾರು ೪೦ ಸಾವಿರ ರೂ. ಬೆಲೆ ಅಂದಾಜಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅನಧಿಕೃತ ಹೊಯ್ಗೆ ವಶ

ಕುಂಬಳೆ: ಅನಧಿಕೃತವಾಗಿ ಸಾಗಿಸುತ್ತಿದ್ದ ಒಂದು ಲೋಡ್ ಹೊಯ್ಗೆಯನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂ ಡಿದ್ದಾರೆ. ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಿ ಚಾಲಕ ಕಿದೂರಿನ ಅಬ್ದುಲ್ ಹಕೀಂ (೩೧)ನನ್ನು ಬಂಧಿಸಲಾ ಗಿದೆ. ನಿನ್ನೆ ಸಂಜೆ ಕಂಚಿಕಟ್ಟೆಯಲ್ಲಿ ಎಸ್‌ಐ ಥೋಮಸ್ ನೇತೃತ್ವದಲ್ಲಿ ಕಾರ್ಯಾಚರಣೆ  ನಡೆಸಿ ಹೊಯ್ಗೆ ವಶಪಡಿಸಲಾಗಿದೆ.

ಪೆರಡಾಲ ಶಾಲೆಯಲ್ಲಿ ‘ಪರಿಸರ ಕಡೆಗೆ ಮಕ್ಕಳ ನಡಿಗೆ’

ಬದಿಯಡ್ಕ : ಸುತ್ತಲಿನ ಪರಿಸರ ನಿರೀಕ್ಷಿಸಿದಾಗ ಜೀವಿಗಳ ಪರಸ್ಪರ ಸಂಬAಧ ಅರಿವಾಗುತ್ತದೆ. ಪ್ರತಿ ಯೊಂದು ಕೀಟ, ಚಿಟ್ಟೆ,ಉರಗ, ಹಕ್ಕಿಗಳಿಗೆ ಈ ಆವಾಸ ವ್ಯವಸ್ಥೆಯಲ್ಲಿ ಅದರದ್ದೇ ಆದ ಸ್ಥಾನವಿದೆ.ಜೀವಿಗಳ ಅಸ್ತಿತ್ವನಾಶವು ಅಸಮತೋಲನ ಕ್ಕೆ ಕಾರಣವಾಗುತ್ತದೆ ಎಂದು ಶಿಕ್ಷಕ,ಪಕ್ಷಿ ನಿರೀಕ್ಷಕ ರಾಜು ಕಿದೂರು ಹೇಳಿ ದರು. ಸರಕಾರಿ ಪ್ರೌಢಶಾಲೆ ಪೆರಡಾ ಲದ ಮಕ್ಕಳ ‘ಪರಿಸರ ಕಡೆಗೆ ಮಕ್ಕಳ ನಡಿಗೆ’ ಅಂಗವಾಗಿ ತರಗತಿ ನಡೆಸಿ ಮಾತನಾ ಡಿದರು. ಗಿಡಮರ ಗಳು, ನೀರಿನ ಮೂಲಗಳ ಉಳಿವು ಮುಂದಿನ ಸುಂದರ ಬದುಕಿಗೆ ಅವಶ್ಯ. ಭೂಮಿ …

ರಾಜ್ಯದ ೧೭ ವಾರ್ಡ್‌ಗಳಲ್ಲಿ ನಾಳೆ ಉಪಚುನಾವಣೆ

ತಿರುವನಂತಪುರ: ರಾಜ್ಯದ ೧೭ ಸ್ಥಳೀಯಾಡಳಿತ ಪಂಚಾಯತ್ ವಾರ್ಡ್‌ಗಳಲ್ಲಿ ನಾಳೆ ಉಪಚು ನಾವಣೆ ನಡೆಯಲಿದೆ. ಒಂಭತ್ತು ಜಿಲ್ಲೆಗಳಲ್ಲಾಗಿ ಎರಡು ಬ್ಲಾಕ್ ಪಂಚಾಯತ್, ಹದಿನೈದು ಗ್ರಾಮ ಪಂಚಾಯತ್ ವಾರ್ಡ್‌ಗಳಲ್ಲಿ ಉಪಚುನಾವಣೆ ನಡೆಯಲಿರುವುದು. ಒಟ್ಟು ೫೪  ಮಂದಿ ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಈ ಪೈಕಿ ೨೨ ಮಂದಿ ಮಹಿಳೆಯ ರಾಗಿದ್ದಾರೆ. ೨೦,೫೫೪ ಮಂದಿ ಪುರುಷರು, ೨೨,೭೨೫ ಮಹಿಳೆಯರ ಸಹಿತ ೪೩,೨೭೯ ಮಂದಿ ಮತದಾನ ನಡೆಸುವರು. ಮತ ಎಣಿಕೆ ೧೧ರಂದು ಬೆಳಿಗ್ಗೆ ೧೦ರಿಂದ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ.