ಉಪ್ಪಳ ಬಸ್ ನಿಲ್ದಾಣ ಪ್ರವೇಶ  ಸೂಚನಾ ಫಲಕ ಸ್ಥಾಪಿಸಲು ಆಗ್ರಹ

ಉಪ್ಪಳ: ಹೆದ್ದಾರಿಯಲ್ಲಿ ಸಾಗುವ ಸಾರಿಗೆ ಬಸ್‌ಗಳು ಉಪ್ಪಳ ಬಸ್  ನಿಲ್ದಾಣವನ್ನು ಪ್ರವೇಶಿಸುವ ವೇಳೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದ್ದು, ಇದನ್ನು ತಪ್ಪಿಸಲು ಹೆದ್ದಾರಿ ಬದಿ ಸೂಚನಾ ಫಲಕವನ್ನು ಸ್ಥಾಪಿಸ ಬೇಕೆಂದು ಸಾರ್ವಜನಿಕರು ಆಗ್ರಹಿಸಿ ದ್ದಾರೆ. ಉಪ್ಪಳ ಬಸ್ ನಿಲ್ದಾಣದಲ್ಲಿ ಸ್ಥಳದ ಕೊರತೆಯೂ ಇದ್ದು, ವಾಹನಗಳು ಹೆದ್ದಾರಿಯಿಂದ ನಿಲ್ದಾಣಕ್ಕೂ, ನಿಲಾಣದಿಂದ ಹೆದ್ದಾರಿಗೂ ಪ್ರವೇಶಿಸು ವಾಗ ಸಮಸ್ಯೆ ಉಂಟಾಗುತ್ತಿದೆ. ಹೆದ್ದಾರಿಯಲ್ಲಿ ಸಂಚರಿಸುವ ಬಸ್‌ಗಳು ಉಪ್ಪಳ ನಿಲ್ದಾಣವನ್ನು ಪ್ರವೇಶಿಸುವಾಗ ಹಿಂದಿನಿಂದ ಬರುವ ವಾಹನಗಳಿಗೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುತ್ತಿದೆ ಎಂದು ಸ್ಥಳೀಯರು …

ಹೊಸಂಗಡಿಯಲ್ಲಿ ಹೆದ್ದಾರಿ ನಿರ್ಮಾಣ  ಆಮೆ ನಡಿಗೆಯಲ್ಲಿ: ವ್ಯಾಪಾರಿಗಳಿಂದ ಪ್ರತಿಭಟನೆ

ಮಂಜೇಶ್ವರ: ಹೊಸಂಗಡಿ ಪೇಟೆಯಲ್ಲಿ ವಾಹನ ದಟ್ಟಣೆಯಿಂದ ಸಂಚಾರ ಸಮಸ್ಯೆ ಸೃಷ್ಟಿಯಾಗಿದ್ದು, ಇದರ ವಿರುದ್ಧ ವ್ಯಾಪಾರಿಗಳು ನಿನ್ನೆ ಪ್ರತಿಭಟನೆ ನಡೆಸಿದರು. ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿ ಆಮೆ ನಡಿಗೆ ಯಲ್ಲಿ ಸಾಗುತ್ತಿರುವುದೇ ಸಂಚಾರ ಸಮಸ್ಯೆಗೆ ಕಾರಣವೆಂದು ವ್ಯಾಪಾರಿ ಗಳು ಆರೋಪಿಸಿದ್ದಾರೆ. ಸರ್ವೀಸ್ ರಸ್ತೆ ನಿರ್ಮಾಣ ಹೊಸಂಗಡಿ ಪೇಟೆಯಲ್ಲಿ ಪೂರ್ತಿಯಾಗದ ಕಾರಣ ವಾಹನಗಳು ಹೆದ್ದಾರಿಯ ಇಕ್ಕಟ್ಟಾದ ಒಂದೇ ಭಾಗದಲ್ಲಿ ಸಂಚರಿಸುವ ಕಾರಣ ವಾಹನ ದಟ್ಟಣೆ ಉಂಟಾಗುತ್ತಿದೆ. ಇದು ಪೇಟೆಗೆ ತಲಪುವವರಿಗೆ ಸಮಸ್ಯೆಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಶೀಘ್ರ ಸರ್ವೀಸ್ ರಸ್ತೆ ನಿರ್ಮಿಸ …

ಸಶಸ್ತ್ರ ಪಡೆಗಳ ಧ್ವಜದಿನಾಚರಣೆ  ಜಿಲ್ಲಾ ಮಟ್ಟದ ಕಾರ್ಯಕ್ರಮ ಉದ್ಘಾಟನೆ

ಕಾಸರಗೋಡು: ಸೈನಿಕ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನ್ ನೆರವೇರಿಸಿದರು. ದೇಶಸೇವೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಸೈನಿಕರೇ ನಿಜವಾದ ದೇಶಭಕ್ತರು ಎಂದು ಶಾಸಕರು ಹೇಳಿದರು. ಸೇನೆಯಿಂದ ನಿವೃತ್ತಿ ಹೊಂದಿದ ನಂತರ ವಿಶ್ರಾಂತಿ ಜೀವನ ನಡೆಸುವವರು ಹೆಚ್ಚಿನ ಗೌರವ ಮತ್ತು ಕಾಳಜಿಗೆ ಅರ್ಹರಾಗಿದ್ದು ಅವರನ್ನು ಸಮಾಜ ಜೊತೆಗೂಡಿಸಬೇಕೆಂದು ಶಾಸಕರು ಹೇಳಿದರು. ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.ಡಿ.ಎಂ ಕೆ.ನವೀನ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಹುತಾತ್ಮರಾದ ವೀರ ಯೋಧರ …

ಮಂಜೇಶ್ವರದಲ್ಲಿ ವಿದ್ಯುತ್ ಕಂಬಕ್ಕೆ ನೇಣುಬಿಗಿದು ಸಾವಿಗೀಡಾದ ವ್ಯಕ್ತಿ ತಿರುವನಂತಪುರ ನಿವಾಸಿ

ಮಂಜೇಶ್ವರ: ಮಂಜೇಶ್ವರ ರೈಲ್ವೇ ಹಳಿ ಸಮೀಪ ವಿದ್ಯುತ್ ಕಂಬಕ್ಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ತಿರುವನಂತಪುರ ನಿವಾಸಿ ಮೀನು ಕಾರ್ಮಿಕನಾದ ಕ್ಸೇವಿಯರ್ (೪೬) ಎಂಬವರೆಂದು ಗುರುತುಹಚ್ಚಲಾಗಿದೆ. ಇತ್ತೀಚೆಗೆ ಇವರು ಮೀನುಗಾರಿಕೆಗೆಂದು ಬೋಟ್‌ನಲ್ಲಿ ಮುಂಬಯಿ ಭಾಗಕ್ಕೆ ತೆರಳಿದ್ದರು. ಅರ್ಧಕ್ಕೆ ತಲುಪಿದಾಗ ಕ್ಸೇವಿಯ ರ್‌ಗೆ ಅಸೌಖ್ಯವುಂ ಟಾಯಿತೆನ್ನ ಲಾಗಿದೆ. ಇದರಿಂದ ಜತೆಗಿದ್ದವರು ಬೇರೊಬ್ಬನ ಜೊತೆಗೆ ರತ್ನಗಿರಿಯಿಂದ ರೈಲು ಹತ್ತಿಸಿ ಮಂಗಳೂರಿಗೆ ಕಳುಹಿಸಿದ್ದರೆನ್ನಲಾಗಿದೆ. ಆದರೆ ಮಂಗಳೂರು ನಿಲ್ದಾಣದಲ್ಲಿಳಿದ ಬಳಿಕ ಕ್ಸೇವಿಯರ್ ನಾಪತ್ತೆಯಾಗಿರುವುದಾಗಿ  ಹೇಳಲಾಗುತ್ತಿದೆ. ಇದರಿಂದ ಜತೆಗಿದ್ದ ವ್ಯಕ್ತಿ ಮರಳಿದ್ದರು. …

ಪೊಸಡಿಗುಂಪೆಯಲ್ಲಿ ಪೈವಳಿಕೆ ಪಂ. ಸಮಿತಿ ನೇತೃತ್ವದಲ್ಲಿ ಶುಚೀಕರಣ

ಪೈವಳಿಕೆ : ಜಿಲ್ಲೆಯ ಪ್ರಸಿದ್ದ ಪ್ರವಾಸೋದ್ಯಮ ಕೇಂದ್ರವಾದ ಪೊಸಡಿ ಗುಂಪೆ ಟೂರಿಸಂ ಕೇಂದ್ರವನ್ನು ಹಸಿರು ಟೂರಿಸಂ ಕೇಂದ್ರವಾಗಿಸುವ ಉದ್ದೇಶದಿಂದ ಪೈವಳಿಕೆ ಪಂಚಾಯತ್ ಆಡಳಿತ ಸಮಿತಿಯ ನೇತೃತ್ವದಲ್ಲಿ ಜನಪರ ಶುಚೀಕರಣ ಕಾರ್ಯಕ್ರಮ ನಿನ್ನೆ ನಡೆಯಿತು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ.ಕೆ ಉದ್ಘಾಟಿಸಿದರು. ಪೈವಳಿಕೆ ಪಂಚಾಯತ್ ಅಭಿವೃದ್ಧಿ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಚಿಪ್ಪಾರು ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯರಾದ ಅಬ್ದುಲ್ಲಾ.ಕೆ, ಶ್ರೀನಿವಾಸ ಭಂಡಾರಿ,ರಹಮತ್ ರಹಿಮಾನ್, ಇರ್ಷನ.ಎಸ್, ಅವಿನಾಶ್ ಮಚಾದೋ, ನವ ಕೇರಳ ರಿಸೋರ್ಸ್ ಪರ್ಸನ್ ವಿನಯ್ …

ಕೇರಳ ರಾಜ್ಯ ಅಲ್ಪಸಂಖ್ಯಾತ ಆಯೋಗ ಸಿಟ್ಟಿಂಗ್: ಎರಡು ದೂರು ಪರಿಗಣನೆ

ಕಾಸರಗೋಡು: ಕೇರಳ ರಾಜ್ಯ ಅಲ್ಪಸಂಖ್ಯಾತ ಆಂiÀೆÆÃಗ ಸಿಟ್ಟಿಂಗ್ ನಲ್ಲಿ ಎರಡು ದೂರುಗಳನ್ನು ಪರಿಗಣಿಸಿದೆ. ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್ ಹಾಲ್ ನಲ್ಲಿ ಅಲ್ಪಸಂಖ್ಯಾತ ಕಮೀಷನ್ ಸದಸ್ಯೆ ಪಿ.ರೋಸರ ನೇತೃತ್ವದಲ್ಲಿ ಸಿಟ್ಟಿಂಗ್ ನಡೆಸಲಾಯಿತು. ಲೈಫ್ ವಸತಿ ಯೋಜನೆಯಡಿ ಮನೆ ಲಭಿಸಿದರು ಪ್ರಸ್ತುತ ಮನೆ ಕಟ್ಟಲು ಜಾಗವಿಲ್ಲದ ಪೆರಡಾಲದ ದೂರುದಾರರ ದೂರಿನಲ್ಲಿ ಪ್ರಥಮ ಆದ್ಯತೆ ನೀಡಬೇಕೆಂದು ಆಗ್ರಹಿಸಿದೆ. ಪೈರಡ್ಕದ ಸಾಹಿದಾ ಅವರ ಸ್ಕಾಲರ್ ಶಿಪ್ ಸಂಬAಧಿಸಿದ ದೂರಿನಲ್ಲಿ ನ್ಯಾಯಾಲಯದಲ್ಲಿ ಕೇಸ್ ಇರುವುದರಿಂದ ಮುಂದಿನ ಸಿಟ್ಟಿಂಗ್‌ಗೆ ದೂರನ್ನು ಮುಂದೂಡಲಾಯಿತು.ಅಲ್ಪಸAಖ್ಯಾತರ ಸವಲತ್ತುಗ ಳನ್ನೂ ಹಕ್ಕುಗಳನ್ನೂ …

ನಾಪತ್ತೆಯಾಗಿದ್ದ ಯುವಕ ನಿರ್ಜನ ಹಿತ್ತಿಲಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಮನೆಯಿಂದ ಆಸ್ಪತ್ರೆ ಗೆಂದು ಹೊರಟು ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕ ಕಾಡುಪೊದೆ ತುಂಬಿರುವ ನಿರ್ಜನ ಹಿತ್ತಿಲಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮುಳಿಗದ್ದೆ ತಾಲ್ತಾಜೆ ಕೊರಗ ಕಾಲನಿಯ ಮತ್ತಾಡಿ ಎಂಬವರ  ಪುತ್ರ ಗೋಪಾಲ (೨೮) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರ ಮೃತದೇಹ ನಿನ್ನೆ ರಾತ್ರಿ ಪೆರುವೋಡಿ ಕುಡಾನ ಎಂಬಲ್ಲಿನ ಕಾಡು ಪೊದೆಗಳಿರುವ ಹಿತ್ತಿಲಲ್ಲಿ ಪತ್ತೆಯಾಗಿದೆ. ಘಟನೆ ಸ್ಥಳಕ್ಕೆ ಇಂದು ಬೆಳಿಗ್ಗೆ ಮಂಜೇಶ್ವರ ಸಿ.ಐ ರಜೀಶ್, ಎಸ್.ಐ ಪ್ರಶಾಂತ್ ಮೊದಲಾದವರು ತಲುಪಿದ್ದು, ಮೃತದೇಹವನ್ನು ಮಹಜರು ನಡೆಸಿದ  ಬಳಿಕ ಮಂಗಲ್ಪಾಡಿ ತಾಲೂಕು …

ಪರಾರಿಯಾದ ೧೭ರ ಹರೆಯದ ಬಾಲಕಿ ಮಗುವಿಗೆ ಜನ್ಮ: ಪ್ರಿಯತಮನ ವಿರುದ್ಧ ಪೋಕ್ಸೋ ಕೇಸು

ಬದಿಯಡ್ಕ: ಪ್ರಿಯ ತಮನೊಂ ದಿಗೆ ಪರಾರಿಯಾದ ೧೭ರ ಹರೆಯದ ಯುವತಿ ಗರ್ಭಿಣಿಯಾಗಿ ಬಳಿಕ  ಮಗುವಿಗೆ ಜನ್ಮ ನೀಡಿ ಅದರ ಹೆಸರಲ್ಲಿ ಆಕೆಯ ಪ್ರಿಯತಮನ ವಿರುದ್ಧ ಬದಿಯಡ್ಕ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಯುವತಿ ಮತ್ತು ಆದೂರು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅವರ ಮದುವೆಗೆ ಮನೆಯವರು ಒಪ್ಪಿಗೆ ನೀಡಿರಲಿಲ್ಲ. ಅದ ರಿಂದಾಗಿ ಇವರಿಬ್ಬರು ಮನೆಯವರಿಗೆ ತಿಳಿಸದೆ ಪರಾರಿಯಾಗಿದ್ದರು. ಬಳಿಕ  ಬದಿಯಡ್ಕ ಪೊಲೀಸ್ ಠಾಣೆಗೊ ಳಪಟ್ಟ …

ಮೂರು ರಾಜ್ಯಗಳ ಮುಖ್ಯಮಂತ್ರಿ ಹುದ್ದೆ ಬಿಜೆಪಿ ಉನ್ನತ ಮಟ್ಟದ ಸಭೆ ಇಂದು

ಹೊಸದಿಲ್ಲಿ: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡ್‌ಗಳಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬೆನ್ನಲ್ಲೇ, ಈ ಮೂರೂ ರಾಜ್ಯಗಳ ಹೊಸ ಮುಖ್ಯ ಮಂತ್ರಿ ಹುದ್ದೆಗಾಗಿ ಹೆಸರನ್ನು ಅಂತಿಮ ಗೊಳಿಸುವ  ಬಿಜೆಪಿಯ ಉನ್ನತ ಮಟ್ಟದ ಸಭೆ ದಿಲ್ಲಿಯಲ್ಲಿ ಇಂದು ನಡೆಯಲಿದೆ. ಆದರೆ ಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಬಿಜೆಪಿ ಈ ತನಕ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮುಖ್ಯಮಂತ್ರಿ ಹುದ್ದೆಗಳಿಗೆ ಹೊಸ ಮುಖಗಳನ್ನು ಪರಿಚಯಿಸುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ವರದಿಗಳು ಸೂಚಿಸುತ್ತಿವೆ. ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಬಿಜೆಪಿ ಇನ್ನೂ ಸಸ್ಪೆನ್ಸ್ ಆಗಿಯೂ ಉಳಿಸಿಕೊಂಡಿದೆ. …

ಯುವತಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ತಲೆಮರೆಸಿಕೊಂಡಿದ್ದ ಬಹುಪತ್ನಿವಲ್ಲಭ ೩೦ ವರ್ಷದ ಬಳಿಕ ಸೆರೆ

ಕಾಸರಗೋಡು: ೧೭ರ ಹರೆಯದ ಯುವತಿಯನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ೩೦ ವರ್ಷಗಳ ಬಳಿಕ ಪೊಲೀಸರು  ಬಂಧಿಸಿದ್ದಾರೆ. ಕಲ್ಲಿಕೋಟೆ ಪೇರಾಂಬ್ರ ಚಾಲಕ್ಕರದ ಕೋಮತ್ತ್ ರವೀಂದ್ರನ್ (೫೬) ಬಂಧಿತನಾದ ಆರೋಪಿ. ಹಲವೆಡೆಗಳಲ್ಲಿ ವಿಷ್ಣುದಾಸ್, ಅನ್ವರ್, ಅಬ್ದುಲ್ ರಹ್ಮಾನ್, ಕೃಷ್ಣದಾಸ್ ಸೇರಿದಂತೆ ಇತರ ಹಲವು ನಕಲಿ ಹೆಸರುಗಳಲ್ಲಿ ಕಳೆದ ೩೦ ವರ್ಷಗಳಿಂದ ಈತ ತಲೆಮರೆಸಿಕೊಂಡು ಜೀವಿಸುತ್ತಿದ್ದನು. ೧೯೯೮ ಫೆಬ್ರವರಿ ೧೫ರಂದು ಪಯ್ಯನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಪ್ರದೇಶದ ೧೭ರ ಹರೆಯದ ಯುವತಿಯೋರ್ವೆಯನ್ನು ಅಪಹರಿಸಿ ಆಕೆಗೆ ಲೈಂಗಿಕ ಕಿರುಕುಳ …