ಪರಾರಿಯಾದ ೧೭ರ ಹರೆಯದ ಬಾಲಕಿ ಮಗುವಿಗೆ ಜನ್ಮ: ಪ್ರಿಯತಮನ ವಿರುದ್ಧ ಪೋಕ್ಸೋ ಕೇಸು

ಬದಿಯಡ್ಕ: ಪ್ರಿಯ ತಮನೊಂ ದಿಗೆ ಪರಾರಿಯಾದ ೧೭ರ ಹರೆಯದ ಯುವತಿ ಗರ್ಭಿಣಿಯಾಗಿ ಬಳಿಕ  ಮಗುವಿಗೆ ಜನ್ಮ ನೀಡಿ ಅದರ ಹೆಸರಲ್ಲಿ ಆಕೆಯ ಪ್ರಿಯತಮನ ವಿರುದ್ಧ ಬದಿಯಡ್ಕ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಯುವತಿ ಮತ್ತು ಆದೂರು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅವರ ಮದುವೆಗೆ ಮನೆಯವರು ಒಪ್ಪಿಗೆ ನೀಡಿರಲಿಲ್ಲ. ಅದ ರಿಂದಾಗಿ ಇವರಿಬ್ಬರು ಮನೆಯವರಿಗೆ ತಿಳಿಸದೆ ಪರಾರಿಯಾಗಿದ್ದರು. ಬಳಿಕ  ಬದಿಯಡ್ಕ ಪೊಲೀಸ್ ಠಾಣೆಗೊ ಳಪಟ್ಟ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸತೊಡಗಿದ್ದರು. ಈಮಧ್ಯೆ ಯುವತಿ ಗರ್ಭಿಣಿಯಾಗಿ  ಮಂಗಳೂ ರಿನ ಆಸ್ಪತ್ರೆಯಲ್ಲಿ ದಾಖಲಿಸಿ ಅಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಯ ಪ್ರಾಯ ಪೂರ್ತಿಯಾಗದ ಹಿನ್ನೆಲೆಯಲ್ಲಿ ಆಕೆಯ ಪ್ರಿಯತಮನ ವಿರುದ್ಧ ಪೊಲೀಸರು ಈಗ ಪೋಕ್ಸೋ ಕಾನೂನುಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page