ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ಬೇಳ ಗ್ರಾಮದ ಮಾನ್ಯದಲ್ಲಿ ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಆಫೀಸರ್ ಜೋಸೆಫ್‌ರ ನೇತೃತ್ವದ ಅಬಕಾರಿ ತಂಡ ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ೬.೮೪೦ ಲೀಟರ್ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪಳ್ಳವೀಟಿಲ್ ಅಬ್ದುಲ್ ಸನಾಫ್ (೧೯) ಎಂಬಾತನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ನಂತರ ಆತನನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ನಾಲ್ಕು ರಾಜ್ಯಗಳಲ್ಲಿ ಮತ ಎಣಿಕೆ ನಾಳೆ: ಮಿಜೋರಾಂನಲ್ಲಿ ಸೋಮವಾರ

ದಿಲ್ಲಿ: ಇತ್ತೀಚೆಗೆ ವಿಧಾನಸಭಾ ಚುನಾವಣೆ ನಡೆದ ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಮತ ಎಣಿಕೆ ನಾಳೆ ನಡೆಯಲಿದೆ. ಮಧ್ಯಪ್ರದೇಶದಲ್ಲಿ  ೨೩೦ ಸೀಟುಗಳು,  ರಾಜಸ್ಥಾನದಲ್ಲಿ ೧೯೯, ಛತ್ತೀಸ್‌ಗಢದಲ್ಲಿ ೯೦, ತೆಲಂಗಾನದಲ್ಲಿ ೧೯೯  ಸೀಟುಗಳಿಗೆ ನಡೆದ ಚುನಾವಣೆಯ  ಮತ ಎಣಿಕೆ ನಾಳೆ  ಬೆಳಿಗ್ಗೆ ೮ ಗಂಟೆಗೆ ಆರಂ ಭಗೊಳ್ಳಲಿದೆ. ಮಧ್ಯಾಹ್ನದೊಳಗೆ ಪೂರ್ಣ ಫಲಿತಾಂಶ ಪ್ರಕಟಗೊಳ್ಳುವ  ಸಾಧ್ಯತೆ ಇದೆ. ಇದೇ ವೇಳೆ ಮಿಜೋರಾಂ ರಾಜ್ಯದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಸೋಮವಾರಕ್ಕೆ ಮುಂದೂಡಲಾಗಿದೆ.  ರಾಜಸ್ತಾನ ಹಾಗೂ ಮಧ್ಯಪ್ರದೇಶ ದಲ್ಲಿ ಬಿಜೆಪಿ, …

ಮತ್ತೆ ದಾಖಲೆ ಸೃಷ್ಟಿಸಿದ ಚಿನ್ನದ ದರ

ಕಾಸರಗೋಡು: ರಾಜ್ಯದಲ್ಲಿ ಚಿನ್ನದ ದರ ಮತ್ತೊಮ್ಮೆ ದಾಖಲೆ ಸೃಷ್ಟಿಸಿದೆ.  ಇಂದು ಒಂದು ಗ್ರಾಂ ಚಿನ್ನದ ದರ ೫೮೪೫ ರೂ. ಆಗಿದ್ದು, ಈ ಮೂಲಕ ಪವನ್‌ಗೆ ೪೬,೭೬೦ ರೂ.ಗೇರಿದೆ. ನವಂಬರ್ ೨೯ರಂದು  ಒಂದು ಪವನ್ ಚಿನ್ನಕ್ಕೆ ೪೬,೪೮೦ ರೂ. ಆಗಿತ್ತು. ೩೦ರಂದು ಅದು ೪೬,೦೦೦ರೂ.ಗೆ ಇಳಿದಿತ್ತು. ನಿನ್ನೆ ೪೬,೧೬೦ ರೂ.ಆಗಿದ್ದರೆ ಇಂದು ಅದರಲ್ಲಿ  ೬೦೦ ರೂ.ಗಳ ಹೆಚ್ಚಳವಾಗಿದೆ.

ವೇತನ, ಪಿಂಚಣಿ ನೀಡಲು ಹಣವಿಲ್ಲ: ಭಾರೀ ಆರ್ಥಿಕ ಸಂದಿಗ್ಧತೆ; ರಾಜ್ಯದಲ್ಲಿ ಟ್ರಶರಿ ನಿಯಂತ್ರಣ

ತಿರುವನಂತಪುರ: ಒಂದೆಡೆ ಕೇರಳ ಸರಕಾರದ ನವಕೇರಳ ಸಭೆ ಕಾರ್ಯಕ್ರಮ ನಡೆಯುತ್ತಿದ್ದರೆ  ಮತ್ತೊಂದೆಡೆ ಸರಕಾರದ ಖಜಾನೆಯಲ್ಲಿ ಹಣವಿಲ್ಲದೆ ಸರಕಾರಿ ನೌಕರರಿಗೆ ವೇತನ ಹಾಗೂ ಪಿಂಚಣಿ ನೀಡಲು ಹಣವಿಲ್ಲದೆ ಟ್ರಶರಿ ನಿಯಂತ್ರಣ ಹೇರಲಾಗಿದೆ. ಇನ್ನು ಮುಂದೆ ಒಂದು ಲಕ್ಷರೂಪಾಯಿಗಿಂತ ಹೆಚ್ಚು ಮೊತ್ತದ ಬಿಲ್‌ಗಳನ್ನು  ನೀಡಿ ಹಣ ಪಡೆಯಬೇಕಾದರೆ ಟೋಕನ್ ವ್ಯವಸ್ಥೆ ಏರ್ಪಡಿಸಲಾಗಿದೆ. ಸರಕಾರಿ ನೌಕರರಿಗೆ ತಿಂಗಳ ಮೊದಲ ಮೂರು ಕಚೇರಿ ದಿನಗಳಲ್ಲಿ ವೇತನ ನೀಡಲಾಗುತ್ತಿದೆ. ಮೊದಲ ದಿನ ಸೆಕ್ರೆಟರಿಯೇಟ್, ನ್ಯಾಯಾಲಯದ ನೌಕರರಿಗೆ, ಎರಡನೇ ದಿನ ಆರೋಗ್ಯ ವಿಭಾಗ ಹಾಗೂ ಪೊಲೀಸ್ …

ಅಮಿತ ಕರ್ತವ್ಯದ ಹೊರೆ, ತೀವ್ರ ಮಾನಸಿಕ ಒತ್ತಡ ರಾಜ್ಯದಲ್ಲಿ ೬೯ ಪೊಲೀಸರು ಆತ್ಮಹತ್ಯೆಗೆ ಶರಣು

ಕಾಸರಗೋಡು: ಅಮಿತ ಕರ್ತವ್ಯದ ಹೊರೆ, ತೀವ್ರ ಮಾನಸಿಕ ಒತ್ತಡ ಹಾಗೂ ಕೌಟುಂಬಿಕ ಸಮಸ್ಯೆ ಇತ್ಯಾದಿ ಕಾರಣಗಳಿಂದ ೨೦೧೯ ಜನವರಿಯಿಂದ ೨೦೨೩ ಸೆಪ್ಟಂಬರ್ ತಿಂಗಳ ತನಕದ  ಅವಧಿಯಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳ ಒಟ್ಟು ೬೯ ಪೊಲೀಸರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗೆ ಆತ್ಮಹತ್ಯೆಗೈದವರಲ್ಲಿ ಓರ್ವ ಪೊಲೀಸ್ ಇನ್ಸ್‌ಪೆಕ್ಟರ್, ೧೨ ಎಸ್‌ಐಗಳು, ೮ ಎಎಸ್‌ಐಗಳು, ೧೬ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳು ಮತ್ತು ೩೨ ಸಿವಿಲ್ ಪೊಲೀಸ್ ಆಫೀಸರ್‌ಗಳು ಒಳಗೊಂಡಿದ್ದಾರೆ. ರಾಜ್ಯ ಗೃಹ ಇಲಾಖೆಯ ವರದಿಯಲ್ಲಿ ಈ ಲೆಕ್ಕಾಚಾರ ನೀಡಲಾಗಿದೆ. …

ಅತ್ತೆ ಸಾವನ್ನಪ್ಪಿದ ನಾಲ್ಕನೇ ದಿನ ಅಳಿಯ ನೇಣುಬಿಗಿದು ಸಾವು

ಕಾಸರಗೋಡು: ಪತ್ನಿಯ ತಾಯಿ ಸಾವನ್ನಪ್ಪಿದ ನಾಲ್ಕನೇ ದಿನದಂದು ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಚಿತ್ತಾರಿಕ್ಕಲ್ ಕಮ್ಮಡಂ ನಿವಾಸಿ ಟಿ.ಜಿ. ವಿಜಯನ್ (೪೦) ಸಾವನ್ನಪ್ಪಿದ ವ್ಯಕ್ತಿ. ಇವರು ಅವರ ಮನೆಯ ಅಡುಗೆ ಕೊಠಡಿಯೊಳಗೆ ನೇಣು ಬಿಗಿದು ಸಾವನ್ನಪ್ಪಿದ್ದಾರೆ. ಇವರ ಪತ್ನಿ ಕೆ. ರತಿಯ ತಾಯಿ ಬಿರಿಕುಳಂ ಜಾನಕಿ (ಕೊಟ್ಟಿ-೬೩) ಹೃದಯ ಸಂಬಂಧ ಅಸೌಖ್ಯದಿಂದ  ಕಳೆದ ಸೋಮವಾರ ನಿಧನ ಹೊಂದಿದ್ದರು. ಆ ಬಳಿಕ  ಪತ್ನಿ ಮತ್ತು ಮಕ್ಕಳು ತವರು ಮನೆಗೆ ಹೋಗಿದ್ದರು. ಈ ಮಧ್ಯೆ …

೩೫ ಲಕ್ಷ ರೂ.ಗಳ ಚಿನ್ನ ಗುದದ್ವಾರದಲ್ಲಿ ಬಚ್ಚಿಟ್ಟು ಸಾಗಾಟ: ದುಬಾಯಿಯಿಂದ ಬಂದಾತ ಸೆರೆ

ಮಂಗಳೂರು: ವ್ಯಕ್ತಿಯೋರ್ವ ಗುದದ್ವಾರದಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ೩೫ ಲಕ್ಷ ರೂಪಾಯಿಗಳ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಂಸ್ ಅಧಿಕಾರಿಗಳು ವಶಪಡಿಸಿ ಕೊಂಡಿ ದ್ದಾರೆ. ನ. ೨೯ರಂದು ದುಬಾಯಿ ಯಿಂದ ಏರ್ ಇಂಡಿಯ ಎಕ್ಸ್ ಪ್ರೆಸ್ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕನನ್ನು ಕಸ್ಟಂಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಆತ ಗುದದ್ವಾರದಲ್ಲಿ  ಚಿನ್ನ ಬಚ್ಚಿಟ್ಟಿರುವುದು ತಿಳಿದು ಬಂದಿದೆ. ೫೭೧ ಗ್ರಾಂ ಚಿನ್ನವನ್ನು ಈತ ಮಾತ್ರೆಗಳ ರೂಪದಲ್ಲಾಗಿಸಿ ಗುದ ದ್ವಾರದಲ್ಲಿ ಬಚ್ಚಿಟ್ಟಿದ್ದನು. ವಶಪಡಿ ಸಿದ ಚಿನ್ನಕ್ಕೆ ೩೫,೧೧,೬೫೦ ರೂಪಾ ಯಿ ಮೌಲ್ಯ …

ಮಹಿಳೆ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ರಾತ್ರಿ ಮನೆಯಲ್ಲಿ  ನಿದ್ರಿಸುತ್ತಿದ್ದ ಮಹಿಳೆಯೋ ರ್ವೆ ಇಂದು ಬೆಳಿಗ್ಗೆ ಅಲ್ಲೇ ಪಕ್ಕದ ರೈಲು ಹಳಿ ಬಳಿ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಹೊಸದುರ್ಗ ಸೌತ್ ಕೊವ್ವಲ್ ಸ್ಟೋರ್‌ನ ಕಂಡತ್ತಿಲ್ ಕುಂಞಿಕಣ್ಣನ್ ಎಂಬವರ ಪತ್ನಿ ಲಕ್ಷ್ಮಿ (೬೫) ಸಾವನ್ನಪ್ಪಿದ ಮಹಿಳೆ. ಲಕ್ಷ್ಮಿಯವರು ಉದರ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ಎರಡು ತಿಂಗಳಿಂದ ಚಿಕಿತ್ಸೆ  ಪಡೆಯುತ್ತಿದ್ದರು. ಐದು ತಿಂಗಳ ಹಿಂದೆ ಅವರಿಗೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ  ಹೊಟ್ಟೆಗೆ ಟ್ಯೂಬ್ ಅಳವಡಿಸುವ ಚಿಕಿತ್ಸೆಗೊಳ ಪಡಿಸಲಾಗಿತ್ತು. ನಿನ್ನೆ ರಾತ್ರಿ …

ಮೆಗಾ ಉದ್ಯೋಗ ಮೇಳ: ಮತ್ತೆ ೫೧,೦೦೦ ಕ್ಕೂ ಹೆಚ್ಚು ಮಂದಿಗೆ ನೇಮಕಾತಿ

ಹೊಸದಿಲ್ಲಿ: ಕೇಂದ್ರ ಸರಕಾರದ ಮೆಗಾ ಉದ್ಯೋಗ ಮೇಳದಂಗವಾಗಿ  ಹೊಸತಾಗಿ ೫೧,೦೦೦ಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಲಭಿಸಿದೆ. ಇದರೊಂದಿಗೆ ಇದುವರೆಗೆ ನೇಮಕಾತಿ ಲಭಿಸಿದವರ ಸಂಖ್ಯೆ ೭ ಲಕ್ಷ ದಾಟಿತು. ೧೩ ತಿಂಗಳಳಗೆ ಆರೂವರೆ ಲಕ್ಷ ಮಂದಿಗೆ ನೇಮಕಾತಿ ನೀಡಲಾಗಿದೆ.  ಹೊಸತಾಗಿ ನೇಮಕಾತಿ ಲಭಿಸಿದವರಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು. ಅಲ್ಲದೆ ನೇಮಕಾತಿ ಲಭಿಸಿದವರಿಗೆ ಪ್ರಧಾನಮಂತ್ರಿ ಶುಭಾಶಂಸನೆಗೈದರು. ಯುವಕರಿಗೆ  ಉದ್ಯೋಗಾ ವಕಾ ಶ ನೀಡಲಿರುವ ಕೇಂದ್ರ ಸರಕಾರದ ಯಜ್ಞ ಮುಂದುವರಿದಿದೆಯೆಂದು ಪ್ರಧಾನಮಂತ್ರಿ  ನುಡಿದರು.

ರಾಜ್ಯದಲ್ಲಿ ಅತೀ ಹೆಚ್ಚು ಸ್ಮಾರ್ಟ್ ಅಂಗನವಾಡಿಗಳಿರುವ ಜಿಲ್ಲೆ ಕಾಸರಗೋಡು

ಕಾಸರಗೋಡು: ಸ್ಮಾರ್ಟ್ ಅಂಗನವಾಡಿ ಕಟ್ಟಡ ನಿರ್ಮಾಣ ಯೋಜನೆ ಪ್ರಕಾರ ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ೫೭ ಅಂಗನ ವಾಡಿಗಳನ್ನು ಸ್ಮಾರ್ಟ್ ಅಂಗನ ವಾಡಿಗಳಾಗಿ ಭಡ್ತಿಗೊಳಿಸಲಾಗಿದೆ. ಇನ್ನು ೧೩೬ ಸ್ಥಳಗಳಲ್ಲಿ ಸ್ಮಾರ್ಟ್ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕೆಲಸಗಳು ಈಗ ನಡೆಯುತ್ತಿವೆ. ರಾಜ್ಯದಲ್ಲಿ ಅತೀ ಹೆಚ್ಚು ಸ್ಮಾರ್ಟ್ ಅಂಗನವಾಡಿಗಳಿರುವ ಜಿಲ್ಲೆ ಕಾಸರ ಗೋಡು  ಆಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ೩೦  ಅಂಗನವಾಡಿ ಗಳನ್ನು ಸ್ಮಾರ್ಟ್ ಅಂಗನವಾಡಿಗಳಾಗಿ ಭಡ್ತಿಗೊಳಿ ಸಲಾಗಿದೆ. ಉಳಿದಂತೆ ತಿರುವನಂತಪುರ ಜಿಲ್ಲೆಯಲ್ಲಿ ೧೮, ಕೊಲ್ಲಂ-೨೦, ಪತ್ತನಂತಿಟ್ಟ-೭, ಆಲಪ್ಪುಳ-೧೬, ಕೋಟ್ಟಯಂ-೧೧, …