ಅತ್ತೆ ಸಾವನ್ನಪ್ಪಿದ ನಾಲ್ಕನೇ ದಿನ ಅಳಿಯ ನೇಣುಬಿಗಿದು ಸಾವು

ಕಾಸರಗೋಡು: ಪತ್ನಿಯ ತಾಯಿ ಸಾವನ್ನಪ್ಪಿದ ನಾಲ್ಕನೇ ದಿನದಂದು ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಚಿತ್ತಾರಿಕ್ಕಲ್ ಕಮ್ಮಡಂ ನಿವಾಸಿ ಟಿ.ಜಿ. ವಿಜಯನ್ (೪೦) ಸಾವನ್ನಪ್ಪಿದ ವ್ಯಕ್ತಿ. ಇವರು ಅವರ ಮನೆಯ ಅಡುಗೆ ಕೊಠಡಿಯೊಳಗೆ ನೇಣು ಬಿಗಿದು ಸಾವನ್ನಪ್ಪಿದ್ದಾರೆ. ಇವರ ಪತ್ನಿ ಕೆ. ರತಿಯ ತಾಯಿ ಬಿರಿಕುಳಂ ಜಾನಕಿ (ಕೊಟ್ಟಿ-೬೩) ಹೃದಯ ಸಂಬಂಧ ಅಸೌಖ್ಯದಿಂದ  ಕಳೆದ ಸೋಮವಾರ ನಿಧನ ಹೊಂದಿದ್ದರು. ಆ ಬಳಿಕ  ಪತ್ನಿ ಮತ್ತು ಮಕ್ಕಳು ತವರು ಮನೆಗೆ ಹೋಗಿದ್ದರು. ಈ ಮಧ್ಯೆ ವಿಜಯನ್ ಅವರ ಮನೆಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದಾರೆ. ಚಿತ್ತಾರಿಕ್ಕಲ್ ಪೊಲೀಸರು ತನಿಖೆ ನಡೆಸಿ ಮೃತದೇಹವನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿದರು.

ಎಂ. ಗೋಪಾಲನ್- ಪದ್ಮಿನಿ ದಂಪತಿಯ ಪುತ್ರನಾದ ವಿಜಯನ್ ಪತ್ನಿ, ಮಕ್ಕಳಾದ ಆದಿ ವಿಜಯನ್, ಆರೋಮಲ್ ವಿಜಯನ್, ಸಹೋದರಿಯರಾದ ಟಿ.ವಿ. ಶ್ರೀಜ, ಬಿಂದು ಎಂಬಿವರನ್ನು ಅಗಲಿದ್ದಾರೆ.

RELATED NEWS

You cannot copy contents of this page