ಸಂಸದರಿಗೆ ಕಪ್ಪು ಪತಾಕೆ ಪ್ರದರ್ಶನ: ಐವರು ಎಸ್‌ಡಿಪಿಐ ಕಾರ್ಯಕರ್ತರ ಸೆರೆ

ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ನಿನ್ನೆ ಭೇಟಿ ನೀಡಿದ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರಿಗೆ ಕಪ್ಪು ಪತಾಕೆ ತೋರಿಸಲೆತ್ನಿಸಿದ ಆರೋಪದಂತೆ ಐದು ಮಂದಿ  ಎಸ್‌ಡಿಪಿಐ ಕಾರ್ಯಕರ್ತರನ್ನು ಪೊಲೀಸರು ಮುಂ ಜಾಗ್ರತಾ ಕ್ರಮದಂಗವಾಗಿ ಸೆರೆಹಿಡಿದಿದ್ದಾರೆ.  ಅಂಬಿತ್ತಾಡಿ ನಿವಾಸಿ ಅಬ್ದುಲ್ ರಹಿಮಾನ್ (೩೬), ಕುಂಜತ್ತೂರಿನ ಇಬ್ರಾಹಿಂ(೫೧), ಪಾವೂರಿನ ಅಬ್ದುಲ್ ರೌಫ್ (೨೮), ಕುಂಜತ್ತೂರು ಕೆ.ಜೆ.ಎಂ ರಸ್ತೆಯ ಸಿಯಾದ್ ಹುಸೈನ್ (೩೩), ಸತ್ಯಡ್ಕದ ಅಶ್ರಫ್ (೪೩) ಎಂಬಿವರು ಬಂಧಿತ ವ್ಯಕ್ತಿಗಳಿಗಾಗಿದ್ದು, ಬಳಿಕ ಇವರನ್ನು ಪೊಲೀಸರು  ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

ಇರಿದು ಯುವಕನನ್ನು ಕೊಲೆಗೈದ ಪ್ರಕರಣ : ಆರೋಪಿಗೆ ಜೀವಾವಧಿ ಸಜೆ, ಜುಲ್ಮಾನೆ

ಕಾಸರಗೋಡು: ಪನತ್ತಡಿ ಶಿವಪುರಂ ಚಾಮುಂಡಿಕುನ್ನುನಲ್ಲಿ  ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪನತ್ತಡಿ ಪುಲಿಕಡವಿನ ಕೆ.ಎಸ್. ಮೋಹನ್‌ದಾಸ್ ಎಂಬವರ ಮಗ ಅರುಣ್ ಮೋಹನ್ ಅಲಿಯಾಸ್ ಅರುಣ್‌ಲಾಲ್ (೩೬) ಮತ್ತು ಕೆ.ಜೆ. ಬಿಜು (೨೮) ಎಂಬವರನ್ನು ತಡೆದು ನಿಲ್ಲಿಸಿ ಚಾಕುವಿನಿಂದ ಇರಿದು ಅರುಣ್‌ಲಾಲ್‌ರನ್ನು  ಕೊಲೆಗೈದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧)ದ ನ್ಯಾಯಾಧೀಶರಾದ ಎ. ಮನೋಜ್ ಅವರು ಜೀವಾವಧಿ ಸಜೆ ಮತ್ತು ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಪನತ್ತಡಿ ಶಿವಪುರಂ ಚಾಮುಂಡಿ ಕುನ್ನು ಕೋಟೇರಿಯಿಲ್ …

ಕೂಲಿ ಕಾರ್ಮಿಕ ಕೆರೆಗೆ ಹಾರಿ ಆತ್ಮಹತ್ಯೆ

ಉಪ್ಪಳ: ಕೂಲಿಕಾರ್ಮಿಕ ನೋರ್ವ ವ್ಯಕ್ತಿಯೊಬ್ಬರ ತೋಟದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಡಂಬಾರು ಶ್ರೀ ವಿಷ್ಣುಮೂರ್ತಿ ಕ್ಷೇತ್ರ ಸಮೀಪದಲ್ಲಿರುವ ಪತ್ನಿ ಮನೆಯಲ್ಲಿ ವಾಸಿಸುವ ಕರ್ನಾಟಕ ಪಜೀರ್ ನಿವಾಸಿ ಜಯಂತ (೬೦) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ಸಂಜೆ ಕಡಂಬಾರು ಧರ್ಮೆಮಾರ್ ಎಂಬಲ್ಲಿನ  ವ್ಯಕ್ತಿಯೊಬ್ಬರ ತೋಟದ ಕೆರೆಗೆ ಹಾರಿದ್ದಾರೆ. ಕೆರೆಗೆ ಹಾರಿದ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ತಲುಪಿದ್ದಾರೆ. ಅವರು ನೀಡಿದ ಮಾಹಿತಿಯಂತೆ ಉಪ್ಪಳದಿಂದ ಅಗ್ನಿಶಾಮಕದಳ ಹಾಗೂ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಕೆರೆಯಿಂದ …

ಬಿಜೆಪಿಯ ಹಿರಿಯ ಕಾರ್ಯಕರ್ತ ನಿಧನ

ಉಪ್ಪಳ: ಇಚ್ಲಂಗೋಡು ಗೋಳಿತ್ತಡಿ ಅಕ್ಕಾರಿ ಹಿತ್ಲು ನಿವಾಸಿ ಬಿಜೆಪಿ, ಆರ್.ಎಸ್.ಎಸ್ ಸಕ್ರಿಯ ಕಾರ್ಯಕರ್ತರಾಗಿದ್ದ ರಾಧಾಕೃಷ್ಣ ಶೆಟ್ಟಿ [೬೪] ಇಂದು ಬೆಳಿಗ್ಗೆ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಒಂದು ವಾರದ ಹಿಂದೆ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಇವರು ಈ ಹಿಂದೆ ಹಲವು ವರ್ಷಗಳ ಕಾಲ ಕುಬಣೂರು ವಿದ್ಯಾನಗರದಲ್ಲಿ ವ್ಯಾಪಾರಿಯಾಗಿದ್ದರು. ಕೃಷಿಕರೂ ಆಗಿದ್ದಾರೆ. ಇಚ್ಲಂಗೋಡು ಶ್ರೀ ಮಹಾಗಣಪತಿ ಮಹಾವಿಷ್ಣು ಸದಾಶಿವ ದೇವಸ್ಥಾನದ ಆಡಳಿತ ಹಾಗೂ ಜೀರ್ಣೋದ್ದಾರ ಸಮಿತಿಗಳಲ್ಲಿ ಪದಾಧಿಕಾರಿಯಾಗಿ, ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಮಾಜಿ ನಿರ್ದೇಶಕ, …

ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ: ರಾಹುಲ್ ಗಾಂಧಿಗೆ ಮತ್ತೆ ಸಂಕಟ; ಕೋರ್ಟ್ ನೋಟೀಸು ಜ್ಯಾರಿ

ಸುಲ್ತಾನ್‌ಪುರ್: ೨೦೧೮ರಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಉತ್ತರ ಪ್ರದೇಶ ನ್ಯಾಯಾಲಯ ಸಮನ್ಸ್ ಜ್ಯಾರಿ ಗೊಳಿಸಿದೆ. ಅಂದು ಬಿಜೆಪಿ ಜಿಲ್ಲಾ  ಉಪಾಧ್ಯಕ್ಷರಾಗಿದ್ದ ವಿಜಯ್ ಮಿಶ್ರಾ ಅವರು ರಾಹುಲ್ ಗಾಂಧಿ ವಿರುದ್ಧ ದೂರು ನೀಡಿದ್ದರು. ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ, ೨೦೦೫ರಲ್ಲಿ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾರನ್ನು ಬಿಡುಗಡೆ ಮಾಡಿತ್ತು. ಪ್ರಾಮಾಣಿಕ ಮತ್ತು ಸ್ವಚ್ಛ ರಾಜಕಾರಣದಲ್ಲಿ ನಂಬಿಕೆ ಇದೆ  …

ಕುಂಬಳೆ, ಮಂಜೇಶ್ವರ, ಉಪ್ಪಳ ರೈಲ್ವೇ ನಿಲ್ದಾಣಕ್ಕೆ ಸಂಸದರ ಭೇಟಿ : ಮಂಜೇಶ್ವರದಲ್ಲಿ ಎಸ್‌ಡಿಪಿಐಯಿಂದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ

ಮಂಜೇಶ್ವರ: ಮಂಜೇಶ್ವರ ಹಾಗೂ ಉಪ್ಪಳ ರೈಲ್ವೇ ನಿಲ್ದಾಣಕ್ಕೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ನಿನ್ನೆ ಭೇಟಿ ನೀಡಿ ನಿಲ್ದಾಣಗಳ ಸಮಸ್ಯೆಯನ್ನು ಪರಿಹರಿಸಲು ಕ್ರಮಕೈಗೊಳ್ಳಲು ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು. ನಿನ್ನೆ ಮಧ್ಯಾಹ್ನ ಮಂಜೇ ಶ್ವರ ನಿಲ್ದಾಣಕ್ಕೆ ತಲುಪಿದ ಸಂಸದರ ವಿರುದ್ದ ಎಸ್.ಡಿ.ಪಿ.ಐ ಕಾರ್ಯಕರ್ತರು ಕಪುö್ಪ ಪತಾಕೆ ಯನ್ನು ತೋರಿಸಿ ಪ್ರತಿಭಟಿಸಿದರು. ರೈಲ್ವೇ ನಿಲ್ದಾಣದ ಬಗ್ಗೆ ಕಿಂಚತ್ತೂ ಗಮನ ಹರಿಸದೆ ಕೇವಲ ವೋಟ್ ಬ್ಯಾಂಕ್ ಉದ್ದೇಶದಿಂದ ಸಂಸದರು ಭೇಟಿ ವÆಡಿದ್ದಾರೆ ಎಂದು ಆರೋಪಿಸಿ ಎಸ್.ಡಿ.ಪಿ.ಐ ಕಾರ್ಯಕರು ಸಂಸದರ ವಿರುದ್ದ …

ಹುಬ್ಬಳ್ಳಿಯಿಂದ ಕೋಟ್ಟಯಂಗೆ ವಿಶೇಷ ರೈಲು

ಶಬರಿಮಲೆ: ಮಂಡಲ, ಮಕರಜ್ಯೋತಿ ಉತ್ಸವಕ್ಕೆ ಕರ್ನಾಟಕದ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಅಯ್ಯಪ್ಪ ವ್ರತಧಾರಿಗಳು ಶಬರಿಮಲೆಗೆ ಸಂದ ರ್ಶಿಸುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಕೋಟ್ಟಯಂಗೆ ವಿಶೇಷ ರೈಲು ಸಂಚಾರ ನಡೆಸಲು ದಕ್ಷಿಣ ಹಾಗೂ ಪಶ್ಚಿಮ ರೈಲ್ವೇ ನಿರ್ಧರಿಸಿದೆ. ಇದರಂತೆ ೦೭೩೦೫ ನಂಬ್ರದ ಹುಬ್ಬಳ್ಳಿ-ಕೋಟ್ಟಯಂ ಪ್ರತಿವಾರ ಎಕ್ಸ್‌ಪ್ರೆಸ್ ಡಿ.೧ರಿಂದ ಜನವರಿ ೨೦ರ ವರೆಗೆ ಸಂಚಾರ ನಡೆಸಲಿದೆ. ಪ್ರತೀ ಶನಿವಾರ ಬೆಳಿಗ್ಗೆ  ೧೦.೩೦ಕ್ಕೆ ಹೊರಡುವ ರೈಲು ಮರುದಿನ ಬೆಳಿಗ್ಗೆ ೮.೧೫ಕ್ಕೆ ಕೋಟ್ಟಯಂಗೆ ತಲುಪಲಿದೆ.೦೭೩೦೬ ನಂಬ್ರದ ಪ್ರತಿವಾರ ಎಕ್ಸ್‌ಪ್ರೆಸ್ ರೈಲು ಡಿಸೆಂಬರ್ ೩ರಿಂದ …

ಐಎಂಎ ಪದಾಧಿಕಾರಿಗಳು

ಕಾಸರಗೋಡು: ಐಎಂಎ ಕಾಸರಗೋ ಡು ಜಿಲ್ಲಾ ಸಮಿತಿ ಸಂಚಾಲಕರಾಗಿ ಡಾ| ನಾರಾಯಣ ನಾಯ್ಕ್ ಬಿ.ರವರನ್ನು ರಾಜ್ಯ ಅಧ್ಯಕ್ಷ ಡಾ| ಜೋಸೆಫ್ ಬನವನ್ ನಿರ್ದೇಶಿಸಿದರು. ಕಾಞಂಗಾಡ್‌ನ ಡಾ| ದೀಪಿಕಾ ಕಿಶೋರ್‌ರವರನ್ನು ಜಿಲ್ಲಾ ಅಧ್ಯಕ್ಷರಾಗಿಯೂ ನೋಮಿನೇಟ್ ಮಾಡಲಾಗಿದೆ.

ಕುಂಬಳೆ ಶಾಲೆ ಮೈದಾನ ಖಾಸಗಿ ಸಂಸ್ಥೆಗೆ: ನಾಗರಿಕರಿಂದ ವಿರೋಧ

ಕುಂಬಳೆ: ಕುಂಬಳೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗಾಂಧಿ ಮೈದಾನವನ್ನು ಕಣ್ಣೂರಿನ ಖಾಸಗಿ ಸಂಸ್ಥೆಗೆ ಒಂದು ವರ್ಷದ ಅವಧಿಗೆ ಒಪ್ಪಂದ ಪತ್ರ ನೀಡಿದ ಶಾಲೆಯ ಅಧಿಕೃತರು ಹಾಗೂ ಶಾಲೆಯ ರಕ್ಷಕ ಶಿಕ್ಷಕ ಸಂಘದ ವಿರುದ್ಧ ಕುಂಬಳೆಯ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ತಂಡಗಳು ಕ್ರಿಕೆಟ್, ಫುಟ್ಬಾಲ್, ಕಬಡ್ಡಿ ಪಂದ್ಯಾಟವನ್ನು ಆಯೋಜಿಸುತ್ತಿದ್ದಾರೆ.ಅದೇ ರೀತಿ ಕುಂಬಳೆ ಅಯ್ಯಪ್ಪ ಸಮಿತಿಯ ವತಿಯಿಂದ ಅಯ್ಯಪ್ಪ ದೀಪೋತ್ಸವ ನಡೆಯುತ್ತಿದೆ.ಈ ಸಂದರ್ಭದಲ್ಲಿ ಸ್ಥಳೀಯರನ್ನು ಪರಿಗಣಿಸದೆ ಕಣ್ಣೂರಿನ ಖಾಸಗಿ …

ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್  ಪಂದ್ಯಾಟ: ಲಾಂಛನ ಬಿಡುಗಡೆ

ಕುಂಬ್ಡಾಜೆ: ಕುಂಬ್ಡಾಜೆ ಬಂಟರ ಸಂಘದ ವತಿಯಿಂದ ದ. ೨, ೩ರಂದು ಬದಿಯಡ್ಕ ಬೋಳುಕಟ್ಟೆಯಲ್ಲಿ ನಡೆಯಲಿರುವ ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಲಾಂಛನವನ್ನು ಬೆಳ್ಳೂರು ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಜಯರಾಜ್ ರೈ ಎಡಮುಗೇರುಗುತ್ತು ಬಿಡುಗಡೆಗೊಳಿಸಿದರು. ಬಂಟರ ಸಂಘದ ಜಿಲ್ಲಾ ಸಮಿತಿ ಸದಸ್ಯ ಸಂಜೀವ ಶೆಟ್ಟಿ ಮೊಟ್ಟೆಕುಂಜ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿ ಕಿರಣ್ ಮಾಡ, ದೇವಾನಂದ ಶೆಟ್ಟಿ, ಸಂತೋಷ್ ರೈ ಗಾಡಿಗುಡ್ಡೆ, ಸುರೇಶ್ ಶೆಟ್ಟಿ ಮೊಟ್ಟೆಕುಂಜ, ಸಂತೋಷ್ ರೈ ಪುತ್ರಕಳ, ವಸಂತ …