ಸಂಸದರಿಗೆ ಕಪ್ಪು ಪತಾಕೆ ಪ್ರದರ್ಶನ: ಐವರು ಎಸ್‌ಡಿಪಿಐ ಕಾರ್ಯಕರ್ತರ ಸೆರೆ

ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ನಿನ್ನೆ ಭೇಟಿ ನೀಡಿದ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರಿಗೆ ಕಪ್ಪು ಪತಾಕೆ ತೋರಿಸಲೆತ್ನಿಸಿದ ಆರೋಪದಂತೆ ಐದು ಮಂದಿ  ಎಸ್‌ಡಿಪಿಐ ಕಾರ್ಯಕರ್ತರನ್ನು ಪೊಲೀಸರು ಮುಂ ಜಾಗ್ರತಾ ಕ್ರಮದಂಗವಾಗಿ ಸೆರೆಹಿಡಿದಿದ್ದಾರೆ.  ಅಂಬಿತ್ತಾಡಿ ನಿವಾಸಿ ಅಬ್ದುಲ್ ರಹಿಮಾನ್ (೩೬), ಕುಂಜತ್ತೂರಿನ ಇಬ್ರಾಹಿಂ(೫೧), ಪಾವೂರಿನ ಅಬ್ದುಲ್ ರೌಫ್ (೨೮), ಕುಂಜತ್ತೂರು ಕೆ.ಜೆ.ಎಂ ರಸ್ತೆಯ ಸಿಯಾದ್ ಹುಸೈನ್ (೩೩), ಸತ್ಯಡ್ಕದ ಅಶ್ರಫ್ (೪೩) ಎಂಬಿವರು ಬಂಧಿತ ವ್ಯಕ್ತಿಗಳಿಗಾಗಿದ್ದು, ಬಳಿಕ ಇವರನ್ನು ಪೊಲೀಸರು  ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

RELATED NEWS

You cannot copy contents of this page