ಅರಿಯಪ್ಪಾಡಿ ಈರ್ವರು ಉಳ್ಳಾಕ್ಲು ಗೆಳೆಯರ ಬಳಗದ ಮಹಾಸಭೆ

ಬದಿಯಡ್ಕ: ಅರಿಯಪ್ಪಾಡಿ ಮಾಡ ಶ್ರೀ ಈರ್ವರು ಉಳ್ಳಾಕ್ಳು ಗೆಳೆಯರ ಬಳಗದ ನೂತನ ಸಮಿತಿ ರೂಪೀಕರಣ ಹಾಗೂ ಅಧಿಕಾರ ಹಸ್ತಾಂತರ ಸಭೆ ಜರಗಿತು. ಸಮಿತಿಗೆ ನೂತನ ಅಗೌರವಾಧ್ಯಕ್ಷರಾಗಿ ಈಶ್ವರ ಪಳ್ಳ, ಅಧ್ಯಕ್ಷರಾಗಿ ರಮೇಶ್ ಅರಿಯಪ್ಪಾಡಿ, ಕಾರ್ಯದರ್ಶಿ ಯಾಗಿ ಜಯಪ್ರಕಾಶ ವಾಂತಿ ಚ್ಚಾಲು, ಕೋಶಾಧಿಕಾರಿಯಾಗಿ ಚಂದ್ರಶೇಖರ ಅರಿಯಪ್ಪಾಡಿ ಆಯ್ಕೆಯಾದರು.

ಕರ್ತವ್ಯ ಮಧ್ಯೆ ಅಪಾಯ: ಪೊಲೀಸರಿಗೆ ಆರು ತಿಂಗಳು ವೇತನ ಸಹಿತ ರಜೆ

ತಿರುವನಂತಪುರ: ಪೊಲೀಸ್ ಅಧಿಕಾರಿಗಳು ಕರ್ತವ್ಯದ ಮಧ್ಯೆ ಅಪಾಯ ಉಂಟಾದರೆ ಗುಣಮುಖ ರಾಗುವವರೆಗೆ ಪೂರ್ಣ ವೇತನ ದೊಂದಿಗೆ ರಜೆ ನೀಡಲಾಗುವುದು. ಈ ವಿಷಯ ಸ್ಪಷ್ಟಪಡಿಸಿ ಸರಕಾರ ಕೇರಳ ಸೇವಾ ಕಾಯ್ದೆಯಲ್ಲಿ ತಿದ್ದುಪಡಿ ತಂದಿದೆ. ಮೆಡಿಕಲ್ ಪ್ರಮಾಣ ಪತ್ರದ ಆಧಾರದಲ್ಲಿ ರಜೆ ಮಂಜೂರು ಮಾಡಲಾಗುವುದು. ಒಂದೇ ಬಾರಿಯಾಗಿ ಆರು ತಿಂಗಳಿಗೂ ಹೆಚ್ಚು ರಜೆ ನೀಡಬೇಕಾಗಿ ಬಂದರೆ ಆ ವಿಷಯದಲ್ಲಿ ಸರಕಾರ ತೀರ್ಮಾನ ಕೈಗೊಳ್ಳಲಿದೆ. ಚಿಕಿತ್ಸಾ ರಜೆಗೆ ಡಾಕ್ಟರ್ ಪ್ರಮಾಣಪತ್ರದೊಂದಿಗೆ ಕಚೇರಿ ವರಿಷ್ಠಾಧಿಕಾರಿಯ ಶಿಫಾರಸು ಅಗತ್ಯವಿದೆ.

ಕಲ್ಲಿಕೋಟೆ ಸಹಿತ ಹಲವೆಡೆ ಎನ್‌ಐಎ ದಾಳಿ: ಹೋಟೆಲ್ ಕಾರ್ಮಿಕ ವಶ

ಕಲ್ಲಿಕೋಟೆ: ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳೊಂದಿಗೆ ನಂಟು ಹೊಂದಿರುವುದಾಗಿ ಸ್ಪಷ್ಟ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಲಕ್ನೋದಿಂದ ಆಗಮಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಲ್ಲಿಕೋಟೆ ಸೇರಿದಂತೆ ಹಲವೆಡೆಗಳಲ್ಲಿ ದಾಳಿ ನಡೆಸಿದೆ. ಇದರಂತೆ ಕಲ್ಲಿಕೋಟೆಯಲ್ಲಿ ನಡೆಸಲಾದ ದಾಳಿಯಲ್ಲಿ ಕಲ್ಲಿಕೋಟೆ ನಗರದ ಹೋಟೆಲೊಂದರ ಕಾರ್ಮಿಕನಾದ ಯುಪಿ ಲಕ್ನೋ ನಿವಾಸಿಯಾಗಿರುವ ೧೭ರ ಹರೆಯದ ಯುವಕನನ್ನು ಎನ್‌ಐಎ ವಶಕ್ಕೆ ತೆಗೆದುಕೊಂಡು ಆತನನ್ನು ಸುಮಾರು ೪೦ ನಿಮಿಷಗಳ ತನಕ  ವಿಚಾರಣೆ ನಡೆಸಿದೆ. ಮಾತ್ರವಲ್ಲ ಲಕ್ನೋದಲ್ಲಿರುವ ಎನ್‌ಐಎ ಕಚೇರಿಯಲ್ಲಿ ಡಿಸೆಂಬರ್ ೨೭ರಂದು  ಇಂದು ಹಾಜರಾಗುವಂತೆ ನಿರ್ದೇಶಿಸಿ …

ಕಾರಿನಲ್ಲಿ ಸಾಗಿಸುತ್ತಿದ್ದ ೨೮.೫ ಗ್ರಾಂ ಎಂಡಿಎಂಎ ಸಹಿತ ಯುವಕ ಸೆರೆ

ಕಾಸರಗೋಡು: ಕಾರಿನಲ್ಲಿ ಸಾಗಿ ಸುತ್ತಿದ್ದ ೨೮.೫ ಗ್ರಾಂ ಮಾದಕ ದ್ರವ್ಯವಾದ ಎಂಡಿಎಂಎ ಸಹಿತ ಯುವಕನನ್ನು ಅಬಕಾರಿ ದಳ ಬಂಧಿಸಿದೆ. ಪಡನ್ನಗ್ರಾಮದ ತೈಕ್ಕೇಪ್ಪುರಂ ಆಲಕ್ಕಲ್ ನಿವಾಸಿ ರಸೀಲ್ ಪಿ. (೩೯) ಬಂಧಿತನಾದ ಆರೋಪಿ. ಮಾದಕದ್ರವ್ಯ ಸಾಗಿಸುವ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯನ್ವಯ ನೀಲೇಶ್ವರ ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್ಸ್ ಪೆಕ್ಟರ್ ಸುಧೀರ್ ಕೆ.ಕೆ. ಯವರ ನೇತೃತ್ವದ ತಂಡ ನಿನ್ನೆ ಮುಂಜಾನೆ ಹೊಸದುರ್ಗ ತಾಲೂಕಿನ ಕೈದಕ್ಕಾಡ್ ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ಸಹಿತ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಚಲಾಯಿಸುತ್ತಿದ್ದ …

ಕೋಳಿ ತ್ಯಾಜ್ಯ ಸಾಗಿಸುತ್ತಿದ್ದ ವಾಹನ ವಶ

ಬದಿಯಡ್ಕ: ಕೋಳಿ ತ್ಯಾಜ್ಯಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪಂಚಾಯತ್ ಅಧಿಕಾರಿಗಳು ನಿನ್ನೆ ಸಂಜೆ ಚರ್ಲಡ್ಕದಿಂದ ವಶಪಡಿಸಿಕೊಂಡಿದ್ದಾರೆ. ವಾಹನ ಚಾಲಕ ಮಾನ್ಯ ಉಳ್ಳೋಡಿ ಕಾರ್ಮಾರ್‌ನ ಅಭಿಷೇಕ್ (೨೩) ಎಂಬಾತನನ್ನು ಪಂಚಾಯತ್ ಸೆಕ್ರೆಟರಿ ಸಿ. ರಾಜೇಂದ್ರನ್, ಅಸಿಸ್ಟೆಂಟ್ ಸೆಕ್ರೆಟರಿ ವಿಜಯನ್, ಎನ್. ಶರತ್ ಎಂಬಿವರು ಸೇರಿ ಸೆರೆ ಹಿಡಿದರು. ವಾಹನವನ್ನು ಕಸ್ಟಡಿಗೆ ತೆಗೆದು ಪಂಚಾಯತ್ ಕಚೇರಿ ಬಳಿಗೆ ತಲುಪಿಸಲಾಗಿದೆ. ಬದಿಯಡ್ಕ ಪಂಚಾಯತ್‌ನ ವಿವಿಧ ಭಾಗಗಳಲ್ಲಿ ಇತ್ತೀಚೆಗಿನಿಂದ ಕೋಳಿ ತ್ಯಾಜ್ಯಗಳನ್ನು ಕೊಂಡೊಯ್ದು ಎಸೆಯುತ್ತಿರುವುದು ನಿತ್ಯ ಘಟನೆಯಾಗಿದೆ. ಇದರಿಂದ  ನಾಗರಿಕರು ಚರ್ಲಡ್ಕದಲ್ಲಿ ಕಾವಲು ನಿಂತಿದ್ದರು. …

ಐಎಸ್‌ಐ ಜೊತೆ ಸಂಪರ್ಕ: ಇಬ್ಬರ ಸೆರೆ

ಲಕ್ನೋ: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಇಂಟರ್ ಸರ್ವೀಸ್‌ನ ಇಂಟೆಲಿಜೆನ್ಸ್ (ಐಎಸ್‌ಐ) ನೊಂದಿಗೆನಂಟು ಹೊಂದಿದ ಆರೋಪದಂತೆ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹದಳ (ಯುಪಿಎಸ್‌ಟಿಎಸ್) ಅಮೃತ್‌ಗಿಲ್ (೨೫) ಎಂಬಾತನನ್ನು ರಿಯಾಜುದ್ದೀನ್ (೩೬) ಎಂಬಿಬ್ಬರನ್ನು ಬಂಧಿಸಿದೆ. ಐಎಸ್‌ಐನೊಂದಿಗೆ ಸಂಪರ್ಕ ಹೊಂದಿದ್ದ ಸೈಬರ್ ಹ್ಯಾಕರ್  ಬಿಟೆಕ್ ಪದವೀಧರ ವಸಿಯುಲ್ಲಾ ಖಾನ್ (೨೫) ಹಾಗೂ ಯುಪಿಎಸ್‌ಟಿಎಸ್ ಕಳದವಾರ ಲಕ್ನೋ ಬಂಧಿಸಿತ್ತು. ವಿಚಾರಣೆ ವೇಳೆ ಆತನಿಂದ ಲಭಿಸಿದ ಮಾಹಿತಿಯಂತೆ ಬಳಿಕ ಈ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ರಿಯಾಜುದ್ದೀನ್‌ನ ಬ್ಯಾಂಕ್ ಖಾತೆಗಳಿಗೆ ೨೦೨೦ ಮಾರ್ಚ್ ೨೨ರಿಂದ ಮತ್ತು ಎಪ್ರಿಲ್ …

ಮಗಳ ಮನೆಗೆ ತೆರಳುತ್ತಿದ್ದ ತಂದೆ ಮೀನು ಲಾರಿ ಢಿಕ್ಕಿ ಹೊಡೆದು ಮೃತ್ಯು

ಕುಂಬಳೆ: ಮಗಳ ಮನೆಗೆ ತೆರಳುತ್ತಿದ್ದ ತಂದೆ ಮೀನು ಲಾರಿ ಢಿಕ್ಕಿ ಹೊಡೆದು  ಮೃತಪಟ್ಟ  ದಾರುಣ ಘಟನೆ  ನಡೆದಿದೆ. ಪಾವೂರು ಕೆದುಂಬಾಡಿ ನಿವಾಸಿ ಬಿ.ಎಂ. ಮೊಹಮ್ಮದ್ (೬೫) ಎಂಬವರು ಮೃತಪಟ್ಟ ದುರ್ದೈವಿಯಾಗಿ ದ್ದಾರೆ. ಇವರು  ಮೊನ್ನೆ ಮಧ್ಯಾಹ್ನ  ಕಾಸರಗೋಡಿನಲ್ಲಿರುವ ಮಗಳ ಮನೆಗೆ ತನ್ನ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ  ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ  ಜುಮಾ ಮಸೀದಿ ಮುಂಭಾಗ  ಮೀನು ಲಾರಿ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರಗಾಯಗೊಂಡ ಅವರನ್ನು ಸ್ಥಳೀಯರು ಕೂಡಲೇ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದ್ದರು. ಆದರೆ ಸ್ಥಿತಿ ಗಂಭೀರ …

ಗುಜರಾತ್‌ನಲ್ಲಿ ಸಿಡಿಲು ಬಡಿದು ೨೦ ಮಂದಿ ಸಾವು

ಕಚ್: ಗುಜರಾತ್‌ನಲ್ಲಿ ನಿನ್ನೆಯಿಂದ ಸುರಿಯಲಾರಂಭಿಸಿದ ಅಕಾಲಿಕ ಮಳೆ ಮತ್ತು ಸಿಡಿಲು ಬಡಿದು ಕನಿಷ್ಠ ೨೦ ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದಾರೆ. ಹಲವು ಪ್ರದೇಶಗಳ ಮನೆಗಳು ಮತ್ತು ಬೆಳೆಗಳಿಗೂ ಬಾರೀ ಹಾನಿ  ಉಂಟಾಗಿದೆಯೆಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸಂತೃಸ್ಥರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಸ್ಥಳೀಯ ಆಡಳಿತವು ಅಗತ್ಯದ ಪರಿಹಾರ ಕಾರ್ಯಗಳಲ್ಲೂ ತೊಡಗಿದೆ. ಗುಜರಾತ್‌ನ ೨೫೨ ತಾಲೂಕುಗಳ ಪೈಕಿ ೨೩೪ ತಾಲೂಕುಗಳಲ್ಲಿ ನಿನ್ನೆಯಿಂದ ಬಾರೀ ಮಳೆ ಸುರಿಯಲಾರಂಭಿಸಿದೆ. ಇದರ ಜತೆಗೆ ಸಿಡಿಲು ಹಾಗೂ …

ರಿಕ್ಷಾ ತಡೆದು ನಿಲ್ಲಿಸಿ ಯುವಕನನ್ನು ಇರಿದು ಕೊಲೆಗೈದ ಪ್ರಕರಣ: ಆರೋಪಿ ದೋಷಿ; ಶಿಕ್ಷೆ ಘೋಷಣೆ ಇಂದು

ಕಾಸರಗೋಡು: ಆಟೋರಿಕ್ಷಾವನ್ನು ತಡೆದು ನಿಲ್ಲಿಸಿ ಯುವಕನನ್ನು ಚಾಕುವಿನಿಂದ ಇರಿದು ಕೊಲೆಗೈದ ಪ್ರಕರಣದ ಆರೋಪಿಯ ಮೇಲಿನ ಆರೋಪ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧)ರಲ್ಲಿ ನಡೆದ ವಿಚಾರಣೆಯಲ್ಲಿ ಸಾಬೀತುಗೊಂಡಿದ್ದು, ಆದ್ದರಿಂದ ಆತ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷಾ ಪ್ರಮಾಣ ಘೋಷಣೆಯನ್ನು ನ್ಯಾಯಾಲಯ ಇಂದಿಗೆ ಮೀಸಲಿರಿಸಿದೆ. ಪನತ್ತಡಿ ಶಿವಪುರಂ ಚಾಮುಂಡಿಕುನ್ನು ಕೋಚೇರಿಯಿಲ್ ಕೆ.ಎಂ. ಜೋಸೆಫ್ (೫೮) ಈ ಪ್ರಕರಣದ ಆರೋಪಿಯಾಗಿದ್ದು, ಆತ ತಪ್ಪಿತಸ್ಥನೆಂದು ನ್ಯಾಯಾಲಯ ತೀರ್ಪು ನೀಡಿದೆ. ೨೦೧೪ ಜೂನ್ ೨೫ರಂದು ಪನತ್ತಡಿ ಚಾಮುಂಡಿಕುನ್ನಿನಲ್ಲಿ ಆಟೋರಿಕ್ಷಾದಲ್ಲಿ …

ಯುವಕನ ಮೇಲೆ ಹಲ್ಲೆ: ಇಬ್ಬರ ವಿರುದ್ಧ ಕೇಸು

ಕಾಸರಗೋಡು: ನಿನ್ನೆ ಅಪರಾಹ್ನ ಕೂಡ್ಲು ಎರಿಯಾಲ್‌ನಲ್ಲಿ ಅಂಗಡಿ ಯಿಂದ ಸಾಮಗ್ರಿ ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದ ಕೂಡ್ಲು ಎರಿಯಾಲ್‌ನ ನೌಶಾದ್ ಬಿ.ಎ (೩೩) ಎಂಬಾತನ ಮೇಲೆ ಬೈಕ್‌ನಲ್ಲಿ ಬಂದು ಹಲ್ಲೆ ನಡೆಸಿ ಗಾಯಗೊಳಿಸಿದ ದೂರಿನಂತೆ ಇಬ್ಬರ     ವಿರುದ್ಧ ಕಾಸರ ಗೋಡು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಕೂಡ್ಲು ಎರಿಯಾಲ್ ನಿವಾಸಿಗಳಾದ ಫಯಾ ಮತ್ತು ಫಝಲ್ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.