ಐಎಸ್‌ಐ ಜೊತೆ ಸಂಪರ್ಕ: ಇಬ್ಬರ ಸೆರೆ

ಲಕ್ನೋ: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಇಂಟರ್ ಸರ್ವೀಸ್‌ನ ಇಂಟೆಲಿಜೆನ್ಸ್ (ಐಎಸ್‌ಐ) ನೊಂದಿಗೆನಂಟು ಹೊಂದಿದ ಆರೋಪದಂತೆ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹದಳ (ಯುಪಿಎಸ್‌ಟಿಎಸ್) ಅಮೃತ್‌ಗಿಲ್ (೨೫) ಎಂಬಾತನನ್ನು ರಿಯಾಜುದ್ದೀನ್ (೩೬) ಎಂಬಿಬ್ಬರನ್ನು ಬಂಧಿಸಿದೆ. ಐಎಸ್‌ಐನೊಂದಿಗೆ ಸಂಪರ್ಕ ಹೊಂದಿದ್ದ ಸೈಬರ್ ಹ್ಯಾಕರ್  ಬಿಟೆಕ್ ಪದವೀಧರ ವಸಿಯುಲ್ಲಾ ಖಾನ್ (೨೫) ಹಾಗೂ ಯುಪಿಎಸ್‌ಟಿಎಸ್ ಕಳದವಾರ ಲಕ್ನೋ ಬಂಧಿಸಿತ್ತು. ವಿಚಾರಣೆ ವೇಳೆ ಆತನಿಂದ ಲಭಿಸಿದ ಮಾಹಿತಿಯಂತೆ ಬಳಿಕ ಈ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ರಿಯಾಜುದ್ದೀನ್‌ನ ಬ್ಯಾಂಕ್ ಖಾತೆಗಳಿಗೆ ೨೦೨೦ ಮಾರ್ಚ್ ೨೨ರಿಂದ ಮತ್ತು ಎಪ್ರಿಲ್ ತನಕದ ಅವಧಿಯಲ್ಲಿ ೭೦ ಲಕ್ಷ ರೂ.ಗಳನ್ನು ಅಪರಿಚಿತ ಮೂಲ ಗಳಿಂದ ಜಮಾ ಮಾಡಲಾಗಿದೆ ಎಂಬುವದನ್ನು ಪತ್ತೆಹಚ್ಚಲಾಗಿದೆಯೆಂದು ತನಿಖಾ ತಂಡ ತಿಳಿಸಿದೆ.

Leave a Reply

Your email address will not be published. Required fields are marked *

You cannot copy content of this page