ಪೈವಳಿಕೆಯಲ್ಲೊಂದು ಅಪಘಾತ ವಲಯ: ವೇಗ ನಿಯಂತ್ರಕ ಸ್ಥಾಪಿಸಲು ಆಗ್ರಹ

ಪೈವಳಿಕೆ: ಕೈಕಂಬ-ಬಾಯಾರು ರಸ್ತೆಯನ್ನು ಚೇವಾರು ರಸ್ತೆ ಸಂಗಮಿ ಸುವ ಪೈವಳಿಕೆಯಲ್ಲಿ ಅಪಘಾತಗಳು ನಿತ್ಯ ಘಟನೆಯಾಗುತ್ತಿದ್ದು, ಇಲ್ಲಿ ವೇಗ ನಿಯಂತ್ರಕವನ್ನು ಅಳವಡಿಸ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇಲ್ಲಿ ಅಪಘಾತವಲಯ ಎಂಬ ಸೂಚನಾ ಬೋರ್ಡ್ ಪ್ರದರ್ಶಿಸಲು ಆಗ್ರಹಿಸಲಾ ಗಿದೆ. ಕೈಕಂಬ ಭಾಗದಿಂ ದ, ಬಾಯಾರು ಭಾಗದಿಂದ, ಚೇವಾ ರು ಭಾಗದಿಂದ ಬರುವ ವಾಹನಗಳು ಇಲ್ಲಿ ಸಂಗಮಿಸುವ ವೇಳೆ ಅಪಘಾತ ಸೃಷ್ಟಿಯಾಗುತ್ತಿದೆ. ವಾಹನಗಳು ವೇಗದಲ್ಲಿ ಸಂಚರಿಸುವುದೇ  ಅಪಘಾತಕ್ಕೆ ಕಾರಣವಾಗುತ್ತಿರುವುದು ಎಂದು ಸ್ಥಳೀಯರು ತಿಳಿಸಿದ್ದು, ಇಲ್ಲಿ  ವಾಹನಗಳ ವೇಗ ನಿಯಂತ್ರಕವನ್ನು ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ. …

ಬಿಜೆಪಿ ಜನ ಪಂಚಾಯತ್ ಕಾರ್ಯಕ್ರಮ ಯಶಸ್ವಿಗೆ ಕರೆ

ಮಂಜೇಶ್ವರ: ಕೇಂದ್ರ ಸರಕಾರದ ಯೋಜನೆಗಳ ಸಂಪೂರ್ಣ ಮಾಹಿತಿ ಹಾಗೂ ರಾಜ್ಯದ ಎಡರಂಗ ಸರಕಾರದ ಆಡಳಿತ ವೆÊಪsಲ್ಯ ಬಗ್ಗೆ ಜನತೆಗೆ ತಿಳಿ ಸಲು ಬಿಜೆಪಿ ಪ್ರತಿ ಪಂಚಾಯತ್‌ಗಳಲ್ಲಿ ಹಮ್ಮಿಕೊಂಡಿರುವ ಜನ ಪಂಚಾ ಯತ್ ಸಾರ್ವಜನಿಕ ಸಭೆ ಯಶಸ್ವಿ ಗೆiÁಳಿಸಲು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಕರೆ ನೀಡಿದೆ. ನವಂಬರ್ ೨೮ ಬಾಯರ್ ಪದವುನಲ್ಲಿ, ೩೦ ಪೆರ್ಮುದೆ ಪೇಟೆಯಲ್ಲಿ, ಡಿಸೆಂಬರ್ ೧ರಂದು ಮಿಯಾಪದವು ಪೇಟೆಯಲ್ಲಿ ಕಾರ್ಯಕ್ರಮ ಜರಗಲಿದೆ ಎಂದು ಬಿಜೆಪಿ ತಿಳಿಸಿದೆ. ಕಾರ್ಯಕ್ರಮ ದ ಯಶಸ್ವಿಗಾಗಿ ಮೀಂಜ ಬಿಜೆಪಿ ಕಾರ್ಯಕರ್ತರ …

ಅಧ್ಯಾಪಕರು, ನೌಕರರಿಂದ ಮಂಜೇಶ್ವರ ತಾಲೂಕು ಕಚೇರಿ ಮುಂಭಾಗ ಧರಣಿ

ಮಂಜೇಶ್ವರ: ಕೇಂದ್ರ ಸರಕಾರ ಕಡಿತಗೊಳಿಸಿದ, ಕೇರಳಕ್ಕೆ ಲಭಿಸ ಬೇಕಾದ ಆರ್ಥಿಕ ಪಾಲು ಮಂ ಜೂರು ಮಾಡಬೇಕು. ಪಿಎಫ್‌ಆರ್‌ಡಿಎ ಕಾನೂನು ಹಿಂತೆಗೆಯಬೇಕು. ಪಾಲುದಾರಿಕೆ ಪಿಂಚಣಿ ವ್ಯವಸ್ಥೆ ಉಪೇಕ್ಷಿಸಬೇಕು, ಬಾಕಿ ಉಳಿಸಿದ ಕ್ಷಾಮಭತ್ತೆ ಕೂಡಲೇ ಮಂಜೂರು ಮಾಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಕೌನ್ಸಿಲ್ ಆಫ್ ಸ್ಟೇಟ್ ಎಂಪ್ಲೋಯೀಸ್ ಆಂಡ್ ಟೀಚರ್ಸ್‌ನ ಆಶ್ರಯದಲ್ಲಿ ಮಂಜೇಶ್ವರ ತಾಲೂಕು ಕಚೇರಿ ಮುಂಭಾಗ ಅಧ್ಯಾಪಕರು, ನೌಕರರು ಸಾಮೂಹಿಕ ಧರಣಿ ನಡೆಸಿದರು. ಎನ್‌ಜಿಒ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಭಾನು ಪ್ರಕಾಶ್ ಉದ್ಘಾಟಿಸಿದರು. ಜೋಸ್ ಎಂ.ಎಸ್. ಅಧ್ಯಕ್ಷತೆ ವಹಿಸಿದರು. …

ಉದ್ಯೋಗ ಖಾತರಿ ಯೋಜನೆ ಕಾರ್ಮಿಕರಿಂದ  ಪೈವಳಿಕೆ ಅಂಚೆ ಕಚೇರಿ ಮಾರ್ಚ್

ಪೈವಳಿಕೆ: ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲುಗೊಳಿಸಲು ಕೇಂದ್ರ ಸರಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ ಉದ್ಯೋಗ ಖಾತರಿ ಕಾರ್ಮಿಕರ ಯೂನಿಯನ್ ಪೈವಳಿಕೆ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಪೈವಳಿಕೆ ಅಂಚೆ ಕಚೇರಿ ಮುಂಭಾಗದಲ್ಲಿ ಮಾರ್ಚ್, ಧರಣಿ ಸತ್ಯಾಗ್ರಹ ನಡೆಸಲಾಯಿತು. ಪಂಚಾಯತ್ ಸದಸ್ಯ, ಸಿಪಿಎಂ ನೇತಾರ ಶ್ರೀನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದರು. ಯೂನಿಯನ್‌ನ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಅಬ್ದುಲ್ಲ ಕೆ. ಉದ್ಘಾಟಿಸಿ ದರು. ಕರ್ಷಕ ಸಂಘದ ನೇತಾರರಾದ ಅಶೋಕ ಭಂಡಾರಿ ಕುಡಾಲ್, ಅಹಮ್ಮದ್ ಹುಸೈನ್ ಪಿ.ಕೆ. ಪೈವಳಿಕೆ, ಸಿಐಟಿಯು ಮುಖಂಡ ಚಂದ್ರನಾಕ್ …

ಮಟ್ಕಾ: ಇಬ್ಬರ ಸೆರೆ

ಮಂಜೇಶ್ವರ: ಮಟ್ಕಾ ನಿರತರಾಗಿದ್ದ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕುಂಜತ್ತೂರು ನಿವಾಸಿ ತೀರ್ಥೇಶ್ (೩೭) ಎಂಬಾತನನ್ನು ನಿನ್ನೆ ಸಂಜೆ ಕೈಕಂಬದಿಂದ ಬಂಧಿಸಿ ೪೦೦ ರೂ. ವಶಪಡಿಸಲಾಗಿದೆ. ಅದೇ ರೀತಿ ಕುಂಜತ್ತೂರು ನರಿಮೊಗರುವಿನ ಜಿತೇಶ್ (೩೨) ನನ್ನು ನಿನ್ನೆ ರಾತ್ರಿ ತೂಮಿನಾಡು ಜಂಕ್ಷನ್‌ನಿಂದ ಬಂಧಿಸಿ ೪೫೦ ರೂ. ವಶಪಡಿಸಲಾಗಿದೆ.

ಕೆಐಎಫ್‌ಇಯುಎ ಬದಿಯಡ್ಕ ಬ್ಲೋಕ್ ಮಟ್ಟದ ಸಮ್ಮೇಳನ

ಬದಿಯಡ್ಕ: ಕೇರಳ ಐರನ್ ಫಾಬ್ರಿ ಕೇಶನ್ ಆ್ಯಂಡ್ ಎಂಜಿನಿಯರಿAಗ್ ವರ್ಕ್ ಯೂನಿಟ್ ಅಸೋಸಿಯೇಶನ್ (ಕೆಐಎಫ್ ಇಯುಎ)ಯ ಬದಿಯಡ್ಕ ಬ್ಲೋಕ್ ಮಟ್ಟದ ಸಮ್ಮೇಳನ ರಾಮಲೀಲಾ ಯೋಗಾ ಕೇಂದ್ರದಲ್ಲಿ ಜರಗಿತು. ಬ್ಲೋಕ್ ಸಮಿತಿ ಉಪಾಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದÀÄ, ಮುಳ್ಳೇರಿಯ ಕೆಎಸ್ ಇಬಿಯ ಅಸಿಸ್ಟೆಂಟ್ ಇಂಜಿನಿಯರ್ ಫ್ರಾನ್ಸಿಸ್ ಜೋರ್ಜ್ ಉದ್ಘಾಟಿಸಿದರು. ಉದ್ಯಮಿ, ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಮುಖ್ಯ ಅತಿಥಿಯÁಗಿ ಪಾಲ್ಗೊಂಡಿದ್ದರು. ಸಚ್ಚಿದಾನಂದ ಬಾಯಿಕಟ್ಟೆ,ರತೀಶ್ ಶುಭಾಶಂಸನೆಗೈದರು. ಜಿಲ್ಲಾ ಕಾರ್ಯ ದರ್ಶಿ ಸುಗಧನ್ ಕೆ.ವಿ. ವರದಿ ಮಂಡಿಸಿದರು. ವಿಲ್ರೆಡ್ …

ಪುದುಕ್ಕೋಳಿಯಲ್ಲಿ ಪಾಯಿಖಾನೆಯ ಮಲಿನಜಲ ರಸ್ತೆಗೆ: ದುರ್ವಾಸನೆ ಅಸಹನೀಯ

ಬದಿಯಡ್ಕ: ನೀರ್ಚಾಲು ಪುದು ಕ್ಕೋಳಿಯಲ್ಲಿ ದುರ್ವಾಸನೆಯಿಂದ ಸಂಚರಿಸಲಾಗುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ನಿನ್ನೆ ರಾತ್ರಿ ವಾಹನದಲ್ಲಿ ಪಾಯಿಖಾನೆಯ ಮಲಿನ ನೀರನ್ನು ಇಲ್ಲಿ ಹರಿಯ ಬಿಟ್ಟಿರುವುದಾಗಿ ಶಂಕಿಸಲಾಗಿದೆ. ರಸ್ತೆಯಲ್ಲಿ ಮಲಿನ ನೀರು ತುಂಬಿ ಕೊಂಡಿದೆ. ಸಮೀಪದ ಮೋರಿಸಂಕದಡಿ ಯಲ್ಲಿ ಈ ನೀರು ಸಂಗ್ರಹಗೊಂಡು ಪರಿಸರವಿಡೀ ದುರ್ವಾಸನೆ ಹರಡುತ್ತಿದೆ. ಜೊತೆಗೆ ಇದೇ ಪರಿಸರದಲ್ಲಿ ಪ್ಲಾಸ್ಟಿಕ್ ಸಹಿತದ ತ್ಯಾಜ್ಯವನ್ನು ರಸ್ತೆಯಲ್ಲೇ ಹಾಕಿರುವುದು ಕಂಡು ಬರುತ್ತಿದೆ. ಇದು ಯಾರ ಕೆಲಸವೆಂಬುದನ್ನು ಪತ್ತೆಹಚ್ಚಲು ಸ್ಥಳೀಯರು ತೊಡಗಿದ್ದಾರೆ.

ಚಪ್ಪಲಿ, ಕಾರು ಸೇತುವೆಯಲ್ಲಿ ಉಪೇಕ್ಷಿಸಿ ಹೊಳೆಗೆ ಹಾರಿದ ವ್ಯಾಪಾರಿ: ಶೋಧ ಆರಂಭ

ಕಾಸರಗೋಡು: ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ವಾಟ್ಸಪ್‌ನಲ್ಲಿ ಸಂದೇಶ ಕಳುಹಿಸಿದ ಬಳಿಕ ನಗರದಲ್ಲಿ  ವ್ಯಾಪಾರಿಯಾದ ಯುವಕ ಚಂದ್ರಗಿರಿ ಹೊಳೆಗೆ ಹಾರಿರುವುದಾಗಿ ಸಂಶಯಿಸಲಾಗಿದೆ. ಅಗ್ನಿಶಾಮಕದಳ, ಪೊಲೀಸರು ಹಾಗೂ ನಾಗರಿಕರು ಚಂದ್ರಗಿರಿ ಹೊಳೆಯಲ್ಲಿ ಶೋಧ ಆರಂಭಿಸಿದ್ದಾರೆ. ಇಂದು ಬೆಳಿಗ್ಗೆ೭.೩೦ ಗಂಟೆ ವೇಳೆ   ಈ ಘಟನೆ ನಡೆದಿದೆ.  ಓರ್ವ ವ್ಯಕ್ತಿ ಚಂದ್ರಗಿರಿ ಹೊಳೆಗೆ ಹಾರುವುದನ್ನು ಕಂಡಿರುವುದಾಗಿ  ಆ ಮೂಲಕ ಸಂಚರಿಸಿದವರು ಪರಿಸರ ನಿವಾಸಿಗಳಿಗೆ  ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದಲ್ಲಿ ಸ್ಥಳಕ್ಕೆ …

ಶಾಲೆ ಬಿಟ್ಟು ತೆರಳುತ್ತಿದ್ದ ಬಾಲಕಿಗೆ ಕಿರುಕುಳ ಯತ್ನ: ಆರೋಪಿ ಸೆರೆ

ಕುಂಬಳೆ: ಶಾಲೆ ಬಿಟ್ಟ ಬಳಿಕ ಮನೆಗೆ ತೆರಲುತ್ತಿದ್ದ ಬಾಲಕಿಯ ಕೈ ಹಿಡಿದೆಳೆದು ಲೈಂಗಿಕವಾಗಿ ಕಿರುಕುಳ ನೀಡಲೆತ್ನಿಸಿದ ಆರೋಪದಂತೆ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕೊಡ್ಯಮ್ಮೆಯ ಅಬೂಬಕರ್ ಸಿದ್ದಿಕ್ (೨೬) ಎಂಬಾತನನ್ನು ಕುಂಬಳೆ ಇನ್ಸ್‌ಪೆಕ್ಟರ್ ಅನೂಪ್, ಎಸ್.ಐ. ಉಮೇಶ್ ಸೇರಿ ಸೆರೆ ಹಿಡಿದಿದ್ದಾರೆ. ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಈ ತಿಂಗಳ ೮ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಘಟನೆ ಬಳಿಕ ತಾಯಿಯೊಂದಿಗೆ ಬಾಲಕಿ ಪೊಲೀಸ್ ಠಾಣೆಗೆ ತಲುಪಿ ದೂರು ನೀಡಿದ್ದಳು.

ಸೇನಾ ವೇಷದಲ್ಲಿ  ಮಾವೋವಾದಿಗಳು ಮತ್ತೆ ಪ್ರತ್ಯಕ್ಷ: ವ್ಯಾಪಕ ಪೊಲೀಸ್ ಕಾರ್ಯಾಚರಣೆ

ಕಾಸರಗೋಡು: ಕಣ್ಣೂರಿನ  ಜಿಲ್ಲೆಯ ಕೇಳಗಂ ಪಿಎಚ್‌ಸಿಗೆ ಸಮೀಪದ ಬುಡಕಟ್ಟು ಜನಾಂಗದ ವರು ವಾಸಿಸುತ್ತಿರುವ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆಯ ಸಮವಸ್ತ್ರವನ್ನು ಹೋಲುವ ಬಟ್ಟೆ ಧರಿಸಿದ ಐವರನ್ನೊಳಗೊಂಡ ಮಾವೋವಾದಿ ತಂಡ  ಪ್ರತ್ಯಕ್ಷಗೊಂಡಿದೆ. ಕನ್ನಡ ಮತ್ತು ತಮಿಳು ಮಿಶ್ರಿತ ಮಲಯಾಳಂ ಭಾಷೆಯಲ್ಲಿ ಮಾತ ನಾಡುವ ಈ ಮಾವೋವಾದಿಗಳು, ಆ ಪ್ರದೇಶದ ಮನೆ ಮಾಲಕನೋರ್ವನ ಬಳಿ ಬಂದು ನಿಮ್ಮ ಮನೆಯಲ್ಲಿ ನಮಗೆ ಸೇವಿಸಲು ಯಾವುದಾದರೂ ಆಹಾರ ಸಿಗಬಹುದೇ ಎಂದು ಕೇಳಿದ್ದರು. ಆದರೆ  ಮಾಲಕನ ಮನೆ ಅಲ್ಲಿಂದ ತುಂಬಾ ದೂರವಿರುವುದನ್ನು ತಿಳಿದ ಮಾವೋವಾದಿಗಳು …