ಶಾಲೆ ಬಿಟ್ಟು ತೆರಳುತ್ತಿದ್ದ ಬಾಲಕಿಗೆ ಕಿರುಕುಳ ಯತ್ನ: ಆರೋಪಿ ಸೆರೆ

ಕುಂಬಳೆ: ಶಾಲೆ ಬಿಟ್ಟ ಬಳಿಕ ಮನೆಗೆ ತೆರಲುತ್ತಿದ್ದ ಬಾಲಕಿಯ ಕೈ ಹಿಡಿದೆಳೆದು ಲೈಂಗಿಕವಾಗಿ ಕಿರುಕುಳ ನೀಡಲೆತ್ನಿಸಿದ ಆರೋಪದಂತೆ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಕೊಡ್ಯಮ್ಮೆಯ ಅಬೂಬಕರ್ ಸಿದ್ದಿಕ್ (೨೬) ಎಂಬಾತನನ್ನು ಕುಂಬಳೆ ಇನ್ಸ್‌ಪೆಕ್ಟರ್ ಅನೂಪ್, ಎಸ್.ಐ. ಉಮೇಶ್ ಸೇರಿ ಸೆರೆ ಹಿಡಿದಿದ್ದಾರೆ. ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಈ ತಿಂಗಳ ೮ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಘಟನೆ ಬಳಿಕ ತಾಯಿಯೊಂದಿಗೆ ಬಾಲಕಿ ಪೊಲೀಸ್ ಠಾಣೆಗೆ ತಲುಪಿ ದೂರು ನೀಡಿದ್ದಳು.

RELATED NEWS

You cannot copy contents of this page